RCBಗೆ ಮ್ಯಾಕ್ಸಿ ಬೇಡ್ವಾ? –  ಮ್ಯಾಕ್ಸ್ ವೆಲ್ ಮೇಲೆ ಕಣ್ಣಿಟ್ಟ ಮೂರು ಫ್ರಾಂಚೈಸಿಗಳು!

RCBಗೆ ಮ್ಯಾಕ್ಸಿ ಬೇಡ್ವಾ? –  ಮ್ಯಾಕ್ಸ್ ವೆಲ್ ಮೇಲೆ ಕಣ್ಣಿಟ್ಟ ಮೂರು ಫ್ರಾಂಚೈಸಿಗಳು!

ಲಂಕಾ ವಿರುದ್ಧದ ಸರಣಿ ಬಳಿಕ ಟೀಂ ಇಂಡಿಯಾ ರೆಸ್ಟ್ ಮೂಡ್ನಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಬಾಂಗ್ಲಾ ವಿರುದ್ಧದ ಟೆಸ್ಟ್ ಸಿರೀಸ್ಗೆ ಬಿಸಿಸಿಐ ಸಿದ್ಧತೆ ಮಾಡಿಕೊಳ್ತಿದೆ. ಇದ್ರ ನಡುವೆ 2025ರ ಐಪಿಎಲ್ಗೂ ಕೂಡ ಪ್ರಿಪರೇಷನ್ಸ್ ಜೋರಾಗಿದೆ. ಎಷ್ಟು ಜನರನ್ನ ರೀಟೇನ್ ಮಾಡಿಕೊಳ್ಬೇಕು. ಆರ್ಟಿಎಂಗೆ ಅವಕಾಶ ಕೊಡ್ಬೇಕೋ ಬೇಡ್ವೋ? ರಿಲೀಸ್ ನಿಯಮಗಳು ಹೇಗಿರಬೇಕು? ಹೀಗೆ ಹಲವು ವಿಚಾರಗಳ ಬಗ್ಗೆ ಫ್ರಾಂಚೈಸಿ ಮಾಲೀಕರ ಜೊತೆ ಈಗಾಗ್ಲೇ ಒಂದು ಸುತ್ತಿನ ಸಭೆ ಕೂಡ ನಡೆದಿದೆ. ಒಂದು ವೇಳೆ 3+1 ಸೂತ್ರವೇ ಫೈನಲ್ ಆದ್ರೆ 3 ಆಟಗಾರರನ್ನ ರೀಟೇನ್ ಮಾಡಿಕೊಳ್ಳೋದು ಒಬ್ಬರನ್ನ ಆರ್ಟಿಎಂ ಮೂಲಕ ಉಳಿಸಿಕೊಳ್ಳೋಕೆ ಅವಕಾಶ ಸಿಗಲಿದೆ. ಸೋ ಇದೇ ಸೂತ್ರ ಅಪ್ಲೈ ಆದ್ರೆ ಬೆಂಗಳೂರು ತಂಡ ಕೂಡ ಸ್ಟಾರ್ ಆಟಗಾರರನ್ನೇ ಕೈ ಬಿಡಬೇಕಾಗುತ್ತೆ. ರಿಲೀಸ್ ಲಿಸ್ಟ್ನಲ್ಲಿ ಆರ್ಸಿಬಿಯ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಇದ್ದಾರೆ. ಹಾಗಾದ್ರೆ ಹೊಡಿಬಡಿ ಖ್ಯಾತಿಯ ಮ್ಯಾಕ್ಸಿ ಬೆಂಗಳೂರು ತಂಡಕ್ಕೆ ಬೇಡ್ವಾ? 2025ರ ಐಪಿಎಲ್‌ಗೆ ಯಾವ ಟೀಂ ಸೇರ್ತಾರೆ? ಮ್ಯಾಕ್ಸಿ ಹೊರಬಿದ್ರೆ ಬೆಂಗಳೂರು ತಂಡಕ್ಕೆ ಹಿನ್ನಡೆಯಾಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೊಸಳೆ ಬಾಯಿಗೆ ಆಹಾರವಾಗುತ್ತಿದ್ದ ಮರಿಯನ್ನ ರಕ್ಷಿಸಿದ ತಾಯಿ ಆನೆ – ಅಬ್ಬಬ್ಬಾ.. ರೋಚಕ ದೃಶ್ಯ ಸೆರೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರೋ ಫ್ಯಾನ್ ಬೇಸ್ಗೆ ಇಡೀ ಕ್ರಿಕೆಟ್ ಜಗತ್ತೇ ಬೆರಗಾಗಿದೆ. ಐಪಿಎಲ್ನಲ್ಲಿ ಬೆಂಗಳೂರು ಪಂದ್ಯ ಇದೆ ಅಂದ್ರೆ ವ್ಯೂವರ್ಶಿಪ್ ಕೂಡ ಬೇರೆಯದ್ದೇ ಲೆವೆಲ್ನಲ್ಲಿ ಇರುತ್ತೆ. ಅಭಿಮಾನಿಗಳ ಈ ಕ್ರೇಜ್ಗೆ ಒನ್ ಆಫ್ ದಿ ಮೇನ್ ರೀಸನ್ ತಂಡದಲ್ಲಿರೋ ಸ್ಟಾರ್ ಪ್ಲೇಯರ್ಸ್. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ವೆಲ್ಗೆ ಇರೋ ಫ್ಯಾನ್ಸ್ ಕೂಡ ಕಾರಣ. ಬಟ್ ಈಗ ಐಪಿಎಲ್ ರೂಲ್ಸ್ನಿಂದಾಗಿ ದಿಗ್ಗಜ ಆಟಗಾರರನ್ನೇ ಕೈ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪೈಕಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಒಬ್ಬರು. ಆರ್ಸಿಬಿಯ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ನಲ್ಲಿ ಅಬ್ಬರಿಸೋಕೆ ನಿಂತ್ರೆ ಎದುರಾಳಿ ಬೌಲರ್ಗಳನ್ನ ಚೆಂಡಾಡುವಂಥ ಆಟಗಾರ. ರನ್ಗಳಿಗಂತೂ ಲೆಕ್ಕವೇ ಇಲ್ಲ. ಆದ್ರೆ 2024ರ ಐಪಿಎಲ್ನಲ್ಲಿ ಮಾತ್ರ ಕಳಪೆ ಫಾರ್ಮ್ ಅವ್ರನ್ನ ಬೆನ್ನತ್ತಿದ ಬೇತಾಳದಂತೆ ಕಾಡಿತ್ತು. ಕಾಲು ಗಂಟೆಗೂ ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲೋಕೇ ಆಗಿರಲಿಲ್ಲ. ಬೆಂಗಳೂರು ಪರ 10 ಪಂದ್ಯಗಳನ್ನ ಆಡಿದ್ದ ಮ್ಯಾಕ್ಸಿ ಜಸ್ಟ್ 52 ರನ್ ಗಳಿಸಿದ್ರು. ಹಾಗೇ 6 ವಿಕೆಟ್ಗಳನ್ನ ಮಾತ್ರ ಪಡೆದಿದ್ರು. ಆರ್ಸಿಬಿ ಕೀ ಪ್ಲೇಯರ್ ಆಗಿದ್ದ ಮ್ಯಾಕ್ಸ್ವೆಲ್ರ ಈ ಪ್ರದರ್ಶನದ ಎಫೆಕ್ಟ್ ಇಡೀ ತಂಡದ ಮೇಲೆ ಬಿದ್ದಿತ್ತು. ಹೀಗಾಗಿ ಸ್ಟ್ರಾಂಗ್ ಟೀಮ್ ಕಟ್ಟುವುದಕ್ಕಾಗಿ ಈ ಸಲ ಫ್ರಾಂಚೈಸಿ ಮ್ಯಾಕ್ಸಿರನ್ನ ಕೈ ಬಿಡುವ ನಿರ್ಧಾರಕ್ಕೆ ಬಂದಿದೆ.

3 ಸೀಸನ್ ಭರ್ಜರಿ ಪ್ರದರ್ಶನ ನೀಡಿದ್ದ ಮ್ಯಾಕ್ಸ್ ವೆಲ್!

ಆಸ್ಟ್ರೇಲಿಯನ್ ಮೂಲದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ 2012ರಿಂದ ಐಪಿಎಲ್ ಆಡ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹಾಗೇ ಆರ್ಸಿಬಿ ಪರ ಕಣಕ್ಕಿಳಿದಿದ್ದಾರೆ.  2021 ರ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಗ್ಲೆನ್ ಮ್ಯಾಕ್ಸ್ವೆಲ್ರನ್ನ 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆ ವರ್ಷ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮ್ಯಾಕ್ಸಿ 15 ಪಂದ್ಯಗಳನ್ನ ಆಡಿ 6 ಅರ್ಧಶತಕಗಳೊಂದಿಗೆ 513 ರನ್ ಚಚ್ಚಿದ್ರು. ಹೀಗಾಗಿ 2022ರ ಮೆಗಾ ಹರಾಜಿಗೂ ಮುನ್ನ ಅವರನ್ನು 11 ಕೋಟಿ ರೂಪಾಯಿ ನೀಡಿ ಬೆಂಗಳೂರು ತಂಡ ಉಳಿಸಿಕೊಂಡಿತ್ತು. 2022ರಲ್ಲಿ 13 ಮ್ಯಾಚ್ ಆಡಿದ್ದ ಮ್ಯಾಕ್ಸಿ 301 ರನ್ ಹಾಕಿದ್ರು ಹಾಗೇ 2023ರಲ್ಲಿ 14 ಪಂದ್ಯಗಳನ್ನ ಆಡಿ 5 ಆಫ್ ಸೆಂಚುರಿ ಸೇರಿದಂತೆ 400 ರನ್ ಬಾರಿಸಿದ್ರು. ಈ ಮೂಲಕ ಬೆಂಗಳೂರು ತಂಡಕ್ಕೆ ಮಿಡಲ್ ಆರ್ಡರ್ನಲ್ಲಿ ಅತ್ಯುತ್ತಮ ಸಾಥ್ ನೀಡ್ತಿದ್ರು. ಆದ್ರೆ 2024ರಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗೋ ಮೂಲಕ ತಂಡಕ್ಕೆ ದೊಡ್ಡ ಆಘಾತ ನೀಡಿದ್ರು. ಕಳೆದ ಸೀಸನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಕೊಡುಗೆ ಕೇವಲ 52 ರನ್ಗಳು. ಅಂದರೆ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್ನಲ್ಲಿ ಬರೋಬ್ಬರಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಇದೇ ಪ್ರದರ್ಶನ ಈಗ ತಂಡದಿಂದಲೇ ಗೇಟ್ ಪಾಸ್ ನೀಡುವಂತೆ ಮಾಡಿದೆ. ಮ್ಯಾಕ್ಸ್ವೆಲ್ ಏನಾದ್ರೂ ಬೆಂಗಳೂರು ತಂಡದಿಂದ ಹೊರಬಿದ್ರೆ ಅವ್ರನ್ನ ತಂಡಕ್ಕೆ ಸೆಳೆಯೋಕೆ 3 ತಂಡಗಳು ರೆಡಿಯಾಗಿವೆ.

ಮ್ಯಾಕ್ಸ್ ವೆಲ್ ಮೇಲೆ ಕಣ್ಣಿಟ್ಟ ಮೂರು ಫ್ರಾಂಚೈಸಿಗಳು!

ಮ್ಯಾಕ್ಸ್ವೆಲ್ ಎಂಥಾ ಕ್ವಾಲಿಟಿ ಪ್ಲೇಯರ್ ಅನ್ನೋದು ಇಡೀ ಕ್ರಿಕೆಟ್ ಜಗತ್ತಿಗೇ ಗೊತ್ತಿದೆ. ಹೀಗಾಗಿ ಮುಂದಿನ ಐಪಿಎಲ್ಗೆ ಬೆಂಗಳೂರು ತಂಡ ಹೊರಗೆ ಕಳಿಸಿದ್ರೆ ಮ್ಯಾಕ್ಸಿಯನ್ನ ಬರಮಾಡಿಕೊಳ್ಳೋಕೆ ಸಾಲು ಸಾಲು ಫ್ಯಾಂಚೈಸಿಗಳು ಪ್ಲ್ಯಾನ್ ಮಾಡಿಕೊಂಡಿವೆ. 2025ರ ಆಕ್ಷನ್ನಲ್ಲಿ 3 ತಂಡಗಳು ಮ್ಯಾಕ್ಸ್ವೆಲ್ರನ್ನ ಖರೀದಿ ಮಾಡಲು ಟಾರ್ಗೆಟ್ ಮಾಡಿವೆ. ಮಿಡಲ್ ಆರ್ಡರ್ನಲ್ಲಿ ಭರ್ಜರಿ ಪ್ಲೇಯರ್ಗಾಗಿ ಹುಡುಕುತ್ತಿರುವ ಚೆನ್ನೈ ಫ್ರಾಂಚೈಸಿ ಮ್ಯಾಕ್ಸ್ವೆಲ್ರನ್ನ ತಮ್ಮ ಟೀಮ್ಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಹಾಗೇ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಹೋದ ಮೇಲೆ ಸೊರಗಿರುವ ಗುಜರಾತ್ ಟೈಟನ್ಸ್ ಕೂಡ ಮ್ಯಾಕ್ಸಿ ಮೇಲೆ ಕಣ್ಣು ಹಾಕಿದೆ. ಯಾಕಂದ್ರೆ ಮೋದಿ ಸ್ಟೇಡಿಯಂನಲ್ಲಿ ಮ್ಯಾಕ್ಸಿ ಬ್ಯಾಟಿಂಗ್ ಅಬ್ಬರ ಬೇರೆನೇ ಇರುತ್ತೆ. ಜೊತೆಗೆ ಫಿನಿಶಿಂಗ್ ಮಾಡೋ ಒಬ್ಬ ಬಲಿಷ್ಠ ಆಟಗಾರನಿಗಾಗಿ ಗುಜರಾತ್ ಎದುರು ನೋಡ್ತಿದೆ. ಇನ್ನು ಪಜಾಬ್ ಕಿಂಗ್ಸ್ ಸಹ ಮ್ಯಾಕ್ಸಿಯನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳೋಕೆ ಮುಂದಾಗಿದೆ. ಪಂಜಾಬ್ ಕಿಂಗ್ಸ್ನಲ್ಲಿ ಮೊದ್ಲಿಂದಲೂ ಕೂಡ ಸ್ಟಾರ್ ಪ್ಲೇಯರೂ ಇಲ್ಲ. ಹಾಗೇ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸೋ ಪ್ಲೇಯರ್ ಕೂಡ ಇಲ್ಲ. ಹಾಗೇನಾದ್ರೂ ಮ್ಯಾಕ್ಸ್ವೆಲ್ ಪಂಜಾಬ್ ಸೇರಿದ್ರೆ ತಂಡ ಸ್ಟ್ರಾಂಗ್ ಆಗುತ್ತೆ ಅನ್ನೋ ಫ್ರಾಂಚೈಸಿ ಲೆಕ್ಕಾಚಾರ.

ಇನ್ನು ಐಪಿಎಲ್ನಲ್ಲಿ RCB ಪರ 52 ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್ವೆಲ್ 1,266 ರನ್ ಕಲೆಹಾಕಿದ್ದಾರೆ. ಈ ಪೈಕಿ 12 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ 398 ಎಸೆತಗಳನ್ನು ಎಸೆದಿರುವ ಮ್ಯಾಕ್ಸಿ ಒಟ್ಟು 18 ವಿಕೆಟ್ಗಳನ್ನು ಕಬಳಿಸಲಷ್ಟೇ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮ್ಯಾಕ್ಸ್ವೆಲ್ ಅವರನ್ನು ಬಿಡುಗಡೆ ಮಾಡಿ, ಬದಲಿ ಆಲ್ರೌಂಡರ್ನ ಖರೀದಿಗೆ ಆರ್ಸಿಬಿ ಫ್ರಾಂಚೈಸಿ  ಮುಂದಾಗಿದೆ. ಬೆಂಗಳೂರು ಫ್ರಾಂಚೈಸಿ ರಿಲೀಸ್ ಮಾಡೋದು ಪಕ್ಕಾ ಆಗ್ತಿದ್ದಂತೆ ಮ್ಯಾಕ್ಸ್ವೆಲ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದಾರೆ. 2025ರ  ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಮ್ಮನ್ನು ರೀಟೈನ್ ಮಾಡಿಕೊಳ್ಳುವುದಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ತಿಳಿಸಿದೆ. ಇದೇ ಕಾರಣಕ್ಕೆ ಮ್ಯಾಕ್ಸಿ ಇನ್ಸ್ಟಾಗ್ರಾಮ್, ಟ್ವಿಟ್ಟರ್ನಲ್ಲಿ ನಲ್ಲಿ ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಈ ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಇದಕ್ಕೂ ಮುನ್ನವೇ ಐಪಿಎಲ್ ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು. ಬಳಿಕ ಉಳಿದ ಆಟಗಾರರನ್ನು ಆಕ್ಷನ್ಗಾಗಿ ಬಿಡಲೇಬೇಕಿದೆ. ಹೀಗಾಗಿ ಅಂತಿಮವಾಗಿ ಫ್ರಾಂಚೈಸಿ ಯಾರಿಗೆ ಮಣೆ ಹಾಕುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *