ಮೊದಲ ಬಾರಿಗೆ ಮಗುವಿನ ಫೋಟೋ ರಿವೀಲ್​ ಮಾಡಿದ ಮ್ಯಾಕ್ಸ್​ವೆಲ್​ ದಂಪತಿ – ಈ ಬಾರಿಯೂ ಅಭಿಮಾನಿಗಳಿಗೆ ನಿರಾಸೆಯಾಗಿದ್ದೇಕೆ?

ಮೊದಲ ಬಾರಿಗೆ ಮಗುವಿನ ಫೋಟೋ ರಿವೀಲ್​ ಮಾಡಿದ ಮ್ಯಾಕ್ಸ್​ವೆಲ್​ ದಂಪತಿ – ಈ ಬಾರಿಯೂ ಅಭಿಮಾನಿಗಳಿಗೆ ನಿರಾಸೆಯಾಗಿದ್ದೇಕೆ?

ಆಸ್ಟ್ರೇಲಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಂಡು ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ತಾವು ತಂದೆಯಾಗಿರುವ ವಿಷಯವನ್ನು ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಈ ಪೊಸ್ಟ್‌ ನಲ್ಲಿ ಮಗುವಿನ ಕೈ ಫೋಟೋ ಮಾತ್ರ ಶೇರ್‌ ಮಾಡಿದ್ದರು. ಮಗುವಿನ ಫೋಟೋ ಬಹಿರಂಗಪಡಿಸಿರಲಿಲ್ಲ. ಇದೇ ಮೊದಲ ಬಾರಿ ತಮ್ಮ ಮುದ್ದಾದ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಬಾರಿಯೂ ಮ್ಯಾಕ್ಸ್​ವೆಲ್​ ಅಭಿಮಾನಿಗಳ ನಿರಾಸೆಯಾಗಿದೆ.

ಮಾಕ್ಸ್‌ವೆಲ್‌ ದಂಪತಿ ತಮ್ಮ ಮುದ್ದಾದ ಮಗುವಿನೊಂದಿಗೆ ಫೋಟೋಗೆ ಪೋಸ್‌ ಕೊಟ್ಟಿದ್ದು, ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಮುದ್ದಾದ ಮಗುವಿನ ಮುಖ ನೋಡಬೇಕೆಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಯಾಕಂದ್ರೆ ಮಗುವಿನ ಮುಖಕ್ಕೆ ಬಿಳಿ ಬಣ್ಣದ ಹಾರ್ಟ್‌ ಸಿಂಬಲ್‌ ಹಾಕಿ ಪೋಸ್ಟ್‌ ಮಾಡಿದ್ದಾರೆ. ಮಗು ಮುಖ ನೋಡಬೇಕೆಂದು ಕಾದುಕುಳಿತ್ತಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ.

ಇದನ್ನೂ ಓದಿ: ಗಂಡು ಮಗುವಿನ ತಂದೆಯಾದ ಆರ್‌ಸಿಬಿ ಸ್ಟಾರ್ ಆಟಗಾರ ಮ್ಯಾಕ್ಸ್‌ವೆಲ್ – ಜ್ಯೂನಿಯರ್ ಮ್ಯಾಕ್ಸ್‌ವೆಲ್‌ಗೆ ಶುಭಾಶಯಗಳ ಸುರಿಮಳೆ

ತಮ್ಮ ಮುದ್ದಾದ ಕುಟುಂಬದ ಫೋಟೋ ಶೇರ್‌ ಮಾಡಿದ ಮಾಕ್ಸ್‌ವೆಲ್‌, ನಮ್ಮದು 3 ಜನರ ಕುಟುಂಬವಾಗಿ 10 ದಿನಗಳು ಕಳೆದಿವೆ. ಇದೀಗ ನಿಮಗೆ ವಿದಾಯ ಹೇಳಲು ಕಷ್ಟವಾಗುತ್ತಿದೆ. ಆದರೂ ಇದೊಂದು ರೀತಿಯಲ್ಲಿ ವಿಭಿನ್ನವಾಗಿದೆ. ಮತ್ತೊಂದು ವಿಶ್ವಕಪ್‌ಗಾಗಿ ನೀವು ತೆರಳಿರುವುದಕ್ಕೆ ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಲೋಗನ್ ಮತ್ತು ನಾನು ಮನೆಯಿಂದಲೇ ನಿಮ್ಮನ್ನು ಹುರಿದುಂಬಿಸುತ್ತೇವೆ ಎಂದು ವಿನಿ ರಾಮನ್​ ಬರೆದುಕೊಂಡಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮ್ಯಾಕ್ಸ್​ವೆಲ್​ ಭಾರತಕ್ಕೆ ಆಗಮಿಸಿದ್ದಾರೆ.

ಸೆಪ್ಟೆಂಬರ್ 11 ರಂದು ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ ಸಿಹಿ ಸುದ್ದಿ ಹೊರಬಿದ್ದ ನಂತರ, ವಿನಿ ಮತ್ತು ಮ್ಯಾಕ್ಸ್‌ವೆಲ್ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಕ್ರೀಡಾ ಮತ್ತು ಮನರಂಜನಾಲೋಕದ ಘಟಾನುಘಟಿಗಳು ಮ್ಯಾಕ್ಸಿ ದಂಪತಿಗೆ ಶುಭಕೋರಿದರು. 2017ರಿಂದಲೂ ಡೇಟಿಂಗ್​ ನಡೆಸುತ್ತಿದ್ದ ಜೋಡಿ 2020ರ ಮಾರ್ಚ್​ ತಿಂಗಳಲ್ಲಿ ಮೆಲ್ಬೋರ್ನ್​ನ ಉಪನಗರ ತೋರಕ್​ನಲ್ಲಿ ಮ್ಯಾಕ್ಸಿ ಮತ್ತು ವಿನಿ ನಿಶ್ಚಿತಾರ್ಥ ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು. ಇಬ್ಬರು 2022ರ ಮಾರ್ಚ್​ 17ರಂದು ಭಾರತೀಯ ಸಂಪ್ರದಾಯಂತೆ ಮದುವೆಯಾದರು.

ಅಂದಹಾಗೆ ವಿನಿ ರಾಮನ್​ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್​ ಸೈನ್ಸ್​ ವಿಭಾಗದಲ್ಲಿ ಮೆಂಟನ್​​ ಗರ್ಲ್ಸ್​ ಸೆಕೆಂಡರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಮೆಲ್ಬೋರ್ನ್​ನಲ್ಲಿ ಫಾರ್ಮಸಿಸ್ಟ್​ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ವಿನಿ ರಾಮನ್​ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದು, ವಿನಿ ಅಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.

Shwetha M