ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 7 ವರ್ಷಗಳ ಬಳಿಕ ಗರಿಷ್ಠ ತಾಪಮಾನ! – ಬಿಸಿಲ ಝಳಕ್ಕೆ ಜನ ಹೈರಾಣ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 7 ವರ್ಷಗಳ ಬಳಿಕ ಗರಿಷ್ಠ ತಾಪಮಾನ! – ಬಿಸಿಲ ಝಳಕ್ಕೆ ಜನ ಹೈರಾಣ

ಬೇಸಿಗೆಗಾಲ ಆರಂಭವಾಗಿತ್ತಿದ್ದಂತೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಬೆಂಗಳೂರು ಮತ್ತೆ ರಾಜ್ಯದ ಜಿಲ್ಲೆಗಳಲ್ಲಿ ಬಿಸಿಲು ದಾಖಲೆ ಬರೆದಿದೆ. ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಬಿಸಿಲು 36% ದಾಟಿದೆ. ಉತ್ತರ ಒಳನಾಡು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೈ ತಪ್ಪಿದ ಬಾಗಲಕೋಟೆ ಟಿಕೆಟ್​ – ಬಂಡಾಯದ ಕಹಳೆ ಮೊಳಗಿಸುತ್ತಾರಾ ವೀಣಾ ಕಾಶಪ್ಪನವರ್?

ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ 37.9% ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರ 36.56% ಸೆಲ್ಸಿಯಸ್ ದಾಖಲಾಗಿದೆ. ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಈ ತಾಪಮಾನ ದಾಖಲಾಗುತ್ತಿತ್ತು. ಆದರೆ ಈಗ ಮಾರ್ಚ್‌ನಲ್ಲಿ ರೆಕಾರ್ಡ್ ಆಗಿದ್ದು, ಬಿಸಿಲಿನಿಂದ ತತ್ತರಿಸುವಂತೆ ಆಗಿದೆ. ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಈ ರೀತಿ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 35 ರಿಂದ 40% ಸೆಲ್ಸಿಯಸ್ ತಾಪಮಾನ ಹೆಚ್ಚಾಗುತ್ತಿದೆ. ಮೇ ಅಂತ್ಯದ ವರೆಗೂ ಇರಲಿದೆ. ಮೇ ವರೆಗೂ ಇದೇ ರೀತಿಯ ಬಿಸಿಲು ಇರಲಿದ್ದು, ಏಪ್ರಿಲ್ ಎರಡನೇ ವಾರದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಯಾವ್ಯಾವ ಜಿಲ್ಲೆಯಲ್ಲಿ ಬಿಸಿಲ ಪ್ರಮಾಣ ಎಷ್ಟಿದೆ?

  • ಕಲಬುರಗಿ: 40.9% ಸೆ.
  • ಬಾಗಲಕೋಟೆ: 40.6% ಸೆ.
  • ರಾಯಚೂರು: 39.8% ಸೆ.
  • ಹಂಪಿ: 39.6% ಸೆ.
  • ವಿಜಯಪುರ: 39% ಸೆ.
  • ಗದಗ: 39% ಸೆ.
  • ಚಿತ್ರದುರ್ಗ: 37.6% ಸೆ.
  • ಧಾರವಾಡ: 37.4% ಸೆ.
  • ಬೆಳಗಾವಿ: 37.3% ಸೆ.
  • ಕೆಐಎಎಲ್ ಬೆಂಗಳೂರು: 36.1% ಸೆ.
  • ಮೈಸೂರು: 36% ಸೆ.
  • ಮಂಗಳೂರು: 34.6% ಸೆ.

Shwetha M