ಟಿ20 ವಿಶ್ವಕಪ್‌ಲ್ಲಿ ಹೋದ ಟೀಮ್ ಇಂಡಿಯಾ ಮಾನ ಕಿವೀಸ್‌ಲ್ಲಿ ಬರುತ್ತಾ ?
ಮೊದಲ ಪಂದ್ಯಕ್ಕೆ ಮಳೆ ಕಾಟದ ಚಿಂತೆ

ಟಿ20 ವಿಶ್ವಕಪ್‌ಲ್ಲಿ ಹೋದ ಟೀಮ್ ಇಂಡಿಯಾ ಮಾನ ಕಿವೀಸ್‌ಲ್ಲಿ ಬರುತ್ತಾ ?ಮೊದಲ ಪಂದ್ಯಕ್ಕೆ ಮಳೆ ಕಾಟದ ಚಿಂತೆ

ವೆಲ್ಲಿಂಗ್ಟನ್ :  T20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೋತ ನಿರಾಶೆಯಲ್ಲಿರುವ ಟೀಮ್ ಇಂಡಿಯಾ ಸ್ವಲ್ಪ ದಿನಗಳ ವಿಶ್ರಾಂತಿ ಬಳಿಕ ಈಗ ಮತ್ತೊಂದು ಟಿ20 ಪಂದ್ಯಕ್ಕೆ ರೆಡಿಯಾಗುತ್ತಿದೆ.  ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಪಂದ್ಯಗಳು ನಡೆಯಲಿದ್ದು, ಭಾರತ ತಂಡ ಸಂಪೂರ್ಣ ಸಜ್ಜಾಗಿದೆ.

ಇದನ್ನೂ ಓದಿ: ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್ ಗೆ ಸಮಾನ ಯಾರೂ ಇಲ್ಲ..!

ಈಗಾಗಲೇ ಕಿವೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ , ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನವೆಂಬರ್ 18 ರಂದು ವೆಲ್ಲಿಂಗ್ಟನ್​ನ ಸ್ಕೈ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸೇರಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಟಿ20 ತಂಡಕ್ಕೆ ಹಾಗೂ ಶಿಖರ್ ಧವನ್ ಏಕದಿನ ತಂಡಕ್ಕೆ ನಾಯಕರಾಗಿದ್ದಾರೆ. ಕಿವೀಸ್ ಮತ್ತು ಟೀಮ್ ಇಂಡಿಯಾ

ಪಂದ್ಯವನ್ನ ಕುತೂಹಲದಿಂದ ಎದುರು ನೋಡುತ್ತಿರುವ ಕ್ರೀಡಾಭಿಮಾನಿಗಳಿಗೆ ಮೊದಲ ದಿನವೇ ನಿರಾಶೆಯಾಗುವ ಸಾಧ್ಯತೆಯಿದೆ. ಅಂದರೆ ಮೊದಲ ಪಂದ್ಯ ನಡೆಯೋದೇ ಅನುಮಾನವಾಗಿದೆ. ಯಾಕೆಂದರೆ ವೆಲ್ಲಿಂಗ್ಟನ್​ನಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಮೊದಲ ಪಂದ್ಯ ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

suddiyaana