ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ – ಧರ್ಮಶಾಲಾದಿಂದ ಇಂದೋರ್‌ಗೆ ಮ್ಯಾಚ್ ಶಿಫ್ಟ್..!

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ – ಧರ್ಮಶಾಲಾದಿಂದ ಇಂದೋರ್‌ಗೆ  ಮ್ಯಾಚ್ ಶಿಫ್ಟ್..!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಮ್ಯಾಚ್‌ ಗೆ ಪಿಚ್ ಬದಲಾವಣೆಯಾಗಿದೆ. ಮಾರ್ಚ್ 1ರಿಂದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಬಿಸಿಸಿಐನ ವಿಶೇಷ ಅಧಿಕಾರಿಗಳು ಧರ್ಮಶಾಲಗೆ ತೆರಳಿ ಪಿಚ್ ಪರಿಶೀಲನೆ ನಡೆಸಿದ್ದು ಅಂತರರಾಷ್ಟ್ರೀಯ ಪಂದ್ಯ ನಡೆಯಲು ಪಿಚ್ ಇನ್ನೂ ಸಿದ್ಧಗೊಂಡಿಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಧರ್ಮಶಾಲಾದಲ್ಲಿ ನಡೆಸಬೇಕಾದ ಟೆಸ್ಟ್ ಪಂದ್ಯ, ಇಂಧೋರ್ ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ:  ಮಗನ ಮುಂದೆಯೇ ಹಾರ್ದಿಕ್ ಪಾಂಡ್ಯ ಮರುಮದುವೆ – ‘ಸೆಕೆಂಡ್ ಇನ್ನಿಂಗ್ಸ್’ ಸೀಕ್ರೆಟ್ ಏನು..!?

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಅನ್ನು ಇತ್ತೀಚೆಗಷ್ಟೆ ನೂತನವಾಗಿ ನವೀಕರಣಗೊಳಿಸಲಾಗಿತ್ತು. ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಕ್ರೀಡಾಂಗಣವನ್ನು ವಿಶೇಷವಾಗಿ ಸರಿಪಡಿಸಲಾಗುತ್ತಿದೆ. ಆದರೆ, ನಿರಂತರ ಮಳೆ ಸುರಿಯುತ್ತಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. ಪಿಚ್ ಸರಿಪಡಿಸುವ ಕೆಲಸ ನಡೆಯುತ್ತಿರುವುದರಿಂದ ಇಲ್ಲಿ ರಣಜಿ ಸೇರಿದಂತೆ ಯಾವುದೇ ಪಂದ್ಯವನ್ನು ಆಯೋಜಿಸಿಲ್ಲ. ಹೀಗಾಗಿ ಭಾರತ-ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಕೂಡಾ ಇಲ್ಲಿಂದ ಸ್ಥಳಾಂತರವಾಗಿದ್ದು ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ತಿಳಿಸಿದೆ. 2017 ರಲ್ಲಿ ಇದೇ ಧರ್ಮಶಾಲಾದಲ್ಲಿ ಭಾರತ- ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ನಡೆದಿತ್ತು. ಇದು ಇಲ್ಲಿದೆ ನಡೆದ ಕೊನೆಯ ಟೆಸ್ಟ್ ಪಂದ್ಯ.

suddiyaana