ವೈಭವ್ ಔಟ್.. ಬುಮ್ರಾಗೆ ರೆಸ್ಟ್? – T-20Iಗೆ ಕುಲ್ದೀಪ್ ಕಂ ಬ್ಯಾಕ್
ವಿಂಡೀಸ್ ಬೇಟೆಗೆ 5+3+3 ಸೂತ್ರ!

ವೈಭವ್ ಔಟ್.. ಬುಮ್ರಾಗೆ ರೆಸ್ಟ್? – T-20Iಗೆ ಕುಲ್ದೀಪ್ ಕಂ ಬ್ಯಾಕ್ವಿಂಡೀಸ್ ಬೇಟೆಗೆ 5+3+3 ಸೂತ್ರ!

ಟೀಂ ಇಂಡಿಯಾ ಪ್ಲೇಯರ್ಸ್​ಗೆ ಕಂಟಿನ್ಯೂಯಸ್ ಶೆಡ್ಯೂಲ್.. ಫ್ಯಾನ್ಸ್​ಗೂ ಕೂಡ ನಾನ್​ಸ್ಟಾಪ್ ಎಂಟರ್ಟೈನ್​ಮೆಂಟ್. ಅದ್ರಲ್ಲೂ ಟಿ-20ಐ ಫಾರ್ಮೆಟ್​ನಲ್ಲಂತೂ ಬ್ಯಾಕ್ ಟು ಬ್ಯಾಕ್ ಪಂದ್ಯಗಳು ಶೆಡ್ಯೂಲ್ ಆಗಿವೆ. ಏಷ್ಯನ್ ಗೇಮ್ಸ್ ಫೈನಲ್ ಗೆದ್ದು ಮೂರೇ ದಿನಕ್ಕೆ ಈಗ ವೆಸ್ಟ್ ಇಂಡೀಸ್ ವಿರುದ್ಧ ಟಿ-20ಐ ಸರಣಿ ಶುರುವಾಗ್ತಿದೆ. ಐದು ಪಂದ್ಯಗಳ ಸಿರೀಸ್​ನಲ್ಲಿ ಮೊದಲ ಪಂದ್ಯ ಇವತ್ತು ಲಕ್ನೋದ ಏಕನಾ ಸ್ಟೇಡಿಯಮ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ : ಪಾಕಿಸ್ತಾನ VS ಭಾರತ – ಮಹಾ ಪಂದ್ಯವೇ ರದ್ದು!

ಕೆರೆಬಿಯನ್ ಕಲಿಗಳ ವಿರುದ್ಧ ಏಕದಿನ ಸರಣಿ ಗೆದ್ದಿರೋ ಭಾರತ ಈಗ ಟಿ-20ಐ ಸಿರೀಸ್ ಮೇಲೆ ಕಣ್ಣಿಟ್ಟಿದೆ. ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿದ್ರೆ ವಿಂಡೀಸ್ ತಂಡವನ್ನ ಶಾಯ್ ಹೋಪ್ ಲೀಡ್ ಮಾಡ್ತಾರೆ. ಭಾರತ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ಕಾಲಿಡ್ತಿರೋದ್ರಿಂದ ಇಲ್ಲೂ ಕೂಡ ಅದೇ ವೈಬ್ಸ್ ಕ್ರಿಯೇಟ್ ಮಾಡೋಕೆ ನೋಡ್ತಾರೆ. ಅತ್ತ ಶಾಯ್ ಹೋಪ್ ಕ್ಯಾಪ್ಟನ್ಸಿಯಲ್ಲೇ ಭಾರತದ ವಿರುದ್ಧ ಕೊನೇ ಏಕದಿನ ಪಂದ್ಯ ಗೆದ್ದಿದ್ದ ವಿಂಡೀಸ್ ಪಡೆ ಟಿ-20ಐನಲ್ಲೂ ಅಬ್ಬರಿಸೋಕೆ ನೋಡ್ತಿದ್ದಾರೆ. ಹೀಗಿದ್ರೂ ಸರಣಿ ಆರಂಭಕ್ಕೂ ಮುನ್ನ ಎಲ್ಲರ ಕಣ್ಣೂ ವೈಭವ್ ಸೂರ್ಯವಂಶಿ ಮೇಲಿದೆ.

ಭಾರತದ ನೆಲದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡ್ತಾರಾ ವೈಭವ್?

ಈ ಸರಣಿ ಆರಂಭಕ್ಕೂ ಮುನ್ನ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯಲ್ಲಿ ಕಾಡ್ತಿರೋ ಪ್ರಶ್ನೆ ಅಂದ್ರೆ ವೈಭವ್ ಸೂರ್ಯವಂಶಿ ಭಾರತೀಯ ನೆಲದಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡ್ತಾರಾ ಅನ್ನೋದು. 15ನೇ ವಯಸ್ಸಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಕಾಲಿಟ್ಟಿರೋ ಸೂರ್ಯವಂಶಿ ಭಾರತದ ಪರ  8 T20I ಪಂದ್ಯಗಳಲ್ಲಿ ಆಡಿದ್ದಾರೆ. ಌಂಡ ಈ ಎಲ್ಲಾ ಮ್ಯಾಚಸ್ ಕೂಡ ವಿದೇಶಿ ನೆಲದಲ್ಲೇ. ಸೋ ಈ ಸಿರೀಸ್​ನಲ್ಲಿ ಭಾರತದಲ್ಲೂ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಅಖಾಡಕ್ಕಿಳೀತಾರಾ ಅನ್ನೋದು ಎಲ್ಲರ ಕುತೂಹಲ. ಆದ್ರೆ ಸದ್ಯಕ್ಕಿರೋ ಮಾಹಿತಿ ಪ್ರಕಾರ ವಿಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅಥವಾ ಸೂರ್ಯವಂಶಿ ಇಬ್ರಲ್ಲಿ ಒಬ್ರನ್ನ ಮಾತ್ರ ಆಡಿಸ್ತಾರೆ ಅನ್ನೋ ಟಾಕ್ ಇದೆ. ಜಪಾನ್‌ನಲ್ಲಿ ಭಾರತ ಪರ sಂಜು ಸ್ಯಾಮ್ಸನ್ ಕಳೆದ ಮೂರು ಟಿ20 ಪಂದ್ಯಗಳನ್ನು ಆಡಿದ್ದು ಮೂರೂ ಸಲನೂ ಸಿಂಗಲ್ ಡಿಜಿಟ್​ಗೆ ಔಟ್ ಆಗಿದ್ದಾರೆ. ಜಪಾನ್ ವಿರುದ್ಧ 9, ಶ್ರೀಲಂಕಾ ವಿರುದ್ಧ 7 ಮತ್ತು ಪಾಕಿಸ್ತಾನ ವಿರುದ್ಧ 2 ರನ್‌ಗಳಿಗೆ ಔಟ್ ಆಗಿದ್ರು. ಮತ್ತೊಂದೆಡೆ, ವೈಭವ್ ಸೂರ್ಯವಂಶಿ ಲಂಕಾ ವಿರುದ್ಧ ಸೆಮಿಫೈನಲ್‌ನಲ್ಲಿ 21 ಎಸೆತಗಳಲ್ಲಿ 38 ರನ್ ಗಳಿಸಿದರು ಮತ್ತು 2026 ರ ಏಷ್ಯನ್ ಗೇಮ್ಸ್‌ನ ಫೈನಲ್‌ನಲ್ಲಿ 15 ರನ್ ಗಳಿಸಿದರು. ಸೋ ಇಬ್ರಲ್ಲಿ ಯಾರಿಗೆ ಚಾನ್ಸ್ ಅನ್ನೋದು ಕುತೂಹಲ ಮೂಡಿಸಿದೆ. ಌಂಡ್ ಬೌಲಿಂಗ್ ಯುನಿಟ್​ನಲ್ಲೂ ಬದಲಾವಣೆ ಮಾಡೋದು ಪಕ್ಕಾ ಆಗಿದೆ.

ಜಸ್ಪ್ರೀತ್ ಬುಮ್ರಾಗೆ ರೆಸ್ಟ್.. ಅರ್ಶದೀಪ್ ಸಿಂಗ್ ಲೀಡ್ ಬೌಲರ್!

ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಲೆಫ್ಟ್ ಹ್ಯಾಂಡ್ ಫಾಸ್ಟ್ ಬೌಲರ್ ಅರ್ಷದೀಪ್ ಸಿಂಗ್ ಬೌಲಿಂಗ್ ವಿಭಾಗವನ್ನ ಲೀಡ್ ಮಾಡ್ತಾರೆ. ಸೆಪ್ಟೆಂಬರ್ 22 ರಂದು ಸಾನೋದಲ್ಲಿ ಭಾರತ ಮತ್ತು ಜಪಾನ್ ನಡುವಿನ ಏಕೈಕ ಟಿ20 ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಆಡಿದ್ದು. ಆದ್ರೆ ಮಳೆಯಿಂದಾಗಿ ಐದು ಓವರ್‌ಗಳ ಸೀಮಿತ ಅವಧಿಯ ಪಂದ್ಯದಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ನಂತರ 2026 ರ ಏಷ್ಯನ್ ಗೇಮ್ಸ್‌ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಿಗೆ ಭಾರತದ ಪ್ಲೇಯಿಂಗ್ 11ನಿಂದ ಅವ್ರನ್ನ ಹೊರಗಿಡಲಾಗಿತ್ತು. ಆದ್ರೆ ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡಿ ಅರ್ಶ್‌ದೀಪ್ ಸಿಂಗ್ ಬೌಲಿಂಗ್ ವಿಭಾಗವನ್ನ ಮುನ್ನಡೆಸಬಹುದು. ಹಾಗೇ ಮಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್ ಅವರಲ್ಲಿ ಒಬ್ಬರು ಸಹ XI ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ ಮೂಲದ ವೇಗಿಗಳಾದ ಮಯಾಂಕ್ ಮತ್ತು ಪ್ರಿನ್ಸ್ ಜುಲೈ 2026 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತಕ್ಕಾಗಿ ಕೊನೆಯ ಬಾರಿಗೆ T20I ಆಡಿದ್ದರು. ಅಷ್ಟೇ ಅಲ್ಲದೆ ಕುಲದೀಪ್ ಯಾದವ್ ಕೂಡ ಮೈದಾನಕ್ಕಿಳಿಯೋ ಚಾನ್ಸಸ್ ಇದೆ. ಕಳೆದ ವಾರ ಏಕದಿನ ಸರಣಿಯಲ್ಲಿ ಚೆನ್ನಾಗಿ ಪರ್ಫಾಮ್ ಮಾಡಿರೋದ್ರಿಂದ ರವಿ ಬಿಷ್ಣೋಯ್​ರನ್ನ ಹೊರಗಿಟ್ಟು  ಕುಲ್ದೀಪ್ ಆಡುವ ಚಾನ್ಸಸ್ ಜಾಸ್ತಿ ಇದೆ. ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಬಿಷ್ಣೋಯ್ ಭಾರತದ ಪರ ಆಡಿದ್ದರು. ಆದರೆ 3 ಓವರ್‌ಗಳಲ್ಲೇ 44 ರನ್‌ಗಳನ್ನು ಬಿಟ್ಟುಕೊಟ್ಟಿದ್ರು. ಌಂಡ್ ಒಂದೂ ವಿಕೆಟ್ ತೆಗೆಯೋಕೂ ಆಗಿರಲಿಲ್ಲ.  ಹೀಗಾಗಿ ಪಾಕ್ ವಿರುದ್ಧದ ಪಂದ್ಯಕ್ಕೂ ವಿಂಡೀಸ್ ವಿರುದ್ಧ ಪಂದ್ಯಕ್ಕೂ ಒಂದಷ್ಟು ಬದಲಾವಣೆ ಪಕ್ಕಾ. 5+3+3 ಫಾರ್ಮುಲಾದೊಂದಿಗೆ ಕಣಕ್ಕಿಳಿಯೋ ಚಾನ್ಸಸ್ ಇದೆ.

ಬುಮ್ರಾಗೆ ರೆಸ್ಟ್?

ಸಂಜು ಸ್ಯಾಮ್ಸನ್

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ಶಿವಂ ದುಬೆ

ಅಕ್ಷರ್ ಪಟೇಲ್

ನಿತೀಶ್ ರೆಡ್ಡಿ

ಕುಲ್ದೀಪ್ ಯಾದವ್

ಅರ್ಶದೀಪ್ ಸಿಂಗ್

ಮಯಾಂಕ್ ಯಾದವ್

ಭಾರತದ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆಗಳಂತೂ ಪಕ್ಕಾ ಇದೆ. ಇದ್ರಲ್ಲಿ ಕೆಲ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದು ಅದನ್ನೇ ಕಂಟಿನ್ಯೂ ಮಾಡೋಕೆ ನೋಡಿದ್ರೆ ಇನ್ನೂ ಕೆಲವ್ರು ಮತ್ತೆ ಫಾರ್ಮ್​ಗೆ ಬರೋಕೆ ರೆಡಿಯಾಗಿದ್ದಾರೆ. ಐದು ಪಂದ್ಯಗಳ ಈ ಸರಣಿಯಲ್ಲಿ ವಿಂಡೀಸ್ ಕೂಡ ಡೇಂಜರಸ್ ಆಗಿದೆ. ಐಪಿಎಲ್​ನಲ್ಲಿ ಅಬ್ಬರಿಸೋ ಬಿಗ್ ಹಿಟ್ಟರ್ಸ್ ಕೂಡ ತಂಡದಲ್ಲಿ ಇರೋದ್ರಿಂದ ಇಲ್ಲಿನ ಪಿಚ್​ಗಳ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಸೋ ಅವ್ರೂ ಕೂಡ ಟಫ್ ಫೈಟ್ ಕೊಡೋದಂತೂ ಪಕ್ಕಾ.

Shantha Kumari

Leave a Reply

Your email address will not be published. Required fields are marked *