IND Vs SA ಮ್ಯಾಚ್ ನಿಲ್ಸಿದ ಮಂಜು – ಭಾರತದ NO LOSS ಜರ್ನಿ ಸೇಫ್
ಇರುವೆ, ಜೇನು, ಹಾವಿನಿಂದ್ಲೂ ಪಂದ್ಯ ರದ್ದು

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ನಾಲ್ಕನೇ ಟಿ-20ಐ ಮ್ಯಾಚ್ ಕ್ಯಾನ್ಸಲ್ ಆಗಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೀಬೇಕಿದ್ದ ಮ್ಯಾಚ್ ದಟ್ಟ ಮಂಜು ಆವರಿಸಿದ್ದರಿಂದ ಅಂಪೈರ್ಗಳು ಪಂದ್ಯವನ್ನ ರದ್ದು ಮಾಡಿದ್ರು. ಈ ಪಂದ್ಯ ಟಾಸ್ ಕೂಡ ನಡೆಯದೆ ಕ್ಯಾನ್ಸಲ್ ಆಯ್ತು. ಬಟ್ ಮ್ಯಾಚ್ ನಿಂತ್ರೂ ಭಾರತಕ್ಕೆ ಲಾಸ್ ಅಂಥಾ ಏನೂ ಇಲ್ಲ. ಒಂಥರ ಲಾಭನೇ ಆಗಿದೆ.
ಇದನ್ನೂ ಓದಿ : IPL ಬಾಗಿಲು ಒಡೆದ ಸರ್ಫರಾಜ್ – ಬೆಳಗ್ಗೆ 73 ರನ್.. ಸಂಜೆ CSKಗೆ ಖಾನ್
ಐದು ಪಂದ್ಯಗಳ ಟಿ-20ಐ ಸರಣಿಯ ನಾಲ್ಕನೇ ಪಂದ್ಯ ಸಂಜೆ 7 ಗಂಟೆಗೆ ಸ್ಟಾರ್ಟ್ ಆಗ್ಬೇಕಿತ್ತು. ಹಾಗೇ ಸಂಜೆ 6:30ಕ್ಕೆ ಟಾಸ್ ಪ್ರಕ್ರಿಯೆ ನಡೀಬೇಕಿತ್ತು. ಆದ್ರೆ ದಟ್ಟ ಮಂಜು ಆವರಿಸಿದ್ದರಿಂದ 6 ಸಲ ಟಾಸ್ ಪ್ರಕ್ರಿಯೆ ಮುಂದೂಡಿದ್ರು. ಆದರೆ ರಾತ್ರಿ 9:30 ರವರೆಗೂ ಕಾದ್ರೂ ಮಂಜು ಕಡಿಮೆಯಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಂದ್ಯವನ್ನ ರದ್ದು ಮಾಡಲಾಯ್ತು. ಐಸಿಸಿ ರೂಲ್ಸ್ ಪ್ರಕಾರ ತಲಾ ಐದು ಓವರ್ಗಳ ಪಂದ್ಯ ನಡೆಸೋಕಾದ್ರೂ ಸಾಧ್ಯವಾಗುತ್ತಾ ಅಂಥಾ ಪರಿಶೀಲಿಸಿದ್ರು. ಬಟ್ ಮೈದಾನ ಆಟಕ್ಕೆ ಸೂಕ್ತವಾಗಿರದ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿದ್ರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮಂಜಿನಿಂದಾಗಿ ಪಂದ್ಯವನ್ನು ರದ್ದುಗೊಳಿಸಿದ ಮೊದಲ ಮ್ಯಾಚ್ ಇದು.
ಪಂದ್ಯ ರದ್ದತಿಯಿಂದ ಸರಣಿ ಸೋಲು ತಪ್ಪಿಸಿಕೊಂಡ ಭಾರತ!
ನಾಲ್ಕನೇ ಪಂದ್ಯ ರದ್ದಾದ್ರೂ ಭಾರತಕ್ಕೆ ಯಾವುದೇ ನಷ್ಟ ಇಲ್ಲ. ಒಂಥರಾ ಲಾಭವೇ ಆಗಿದೆ. ಸರಣಿ ಸೋಲೋ ಆತಂಕದಿಂದ ತಪ್ಪಿಸಿಕೊಂಡಿದೆ. ಮೊದಲ ಮೂರು ಪಂದ್ಯಗಳ ಪೈಕಿ ಭಾರತ ಎರಡು ಪಂದ್ಯ ಗೆದ್ರೆ ಸೌತ್ ಆಫ್ರಿಕಾ ಒಂದು ಮ್ಯಾಚ್ ಗೆದ್ದಿತ್ತು. ಈಗ ನಾಲ್ಕನೇ ಮ್ಯಾಚ್ ಕ್ಯಾನ್ಸಲ್ ಆಗಿದೆ. ಸೋ ಐದನೇ ಪಂದ್ಯದಲ್ಲಿ ಭಾರತ ಗೆದ್ರೆ ಸರಣಿ ಕೈವಶ ಆಗುತ್ತೆ. ಅಥವಾ ಸೋತ್ರೂ ಸರಣಿ ಡ್ರಾನಲ್ಲಿ ಕೊನೆಗೊಳ್ಳುತ್ತೆ. ಈ ಮೂಲಕ ಭಾರತ ಸರಣಿಯಲ್ಲಿ ಸೋಲಿನ ಸುಳಿಯಿಂದ ಹೊರಬಿದ್ದಿದೆ. ಇದೀಗ ಸರಣಿಯ ಕೊನೇ ಪಂದ್ಯ ನಾಳೆ ನಡೆಯಲಿದ್ದು ಭಾರತ ಈ ಮ್ಯಾಚ್ ಗೆದ್ದರೆ, ಸರಣಿ 3-1 ಅಂತರದಿಂದ ಭಾರತದ ಪಾಲಾಗಲಿದೆ. ಒಂದು ವೇಳೆ ಸೋತರೆ ಸರಣಿ 2-2 ರಿಂದ ಅಂತ್ಯವಾಗಲಿದೆ. ಈ ಮೂಲಕ ಭಾರತದ ನೋ ಲಾಸ್ ಜರ್ನಿ ಕಂಟಿನ್ಯೂ ಆಗ್ತಿದೆ. ಅಂದ್ರೆ 2024ರ ಟಿ-20 ವಿಶ್ವಕಪ್ ಬಳಿಕ ಭಾರತ ಟಿ20ಐ ಸರಣಿಯನ್ನ ಒಮ್ಮೆಯೂ ಸೋತೇ ಇಲ್ಲ. ಸತತ 11 ಸರಣಿಗಳ ಅಜೇಯ ಓಟವನ್ನು ಭಾರತ ಮುಂದುವರೆಸಲಿದೆ. ಹೀಗಾಗಿ ಈ ಸರಣಿಯಲ್ಲೂ ಭಾರತದ ನೋ ಲಾಸ್ ರೆಕಾರ್ಡ್ ಸೇಫ್ ಆಗಿದೆ. ನೆಕ್ಸ್ಟ್ 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿ ನಡೆಯಲಿದೆ. ಭಾರತ ಈ ಸರಣಿಯನ್ನೂ ಗೆದ್ರೆ ನೆಕ್ಸ್ಟ್ ಡೈರೆಕ್ಟ್ ಟಿ-20 ವಿಶ್ವಕಪ್ ಸ್ಟಾರ್ಟ್ ಆಗುತ್ತೆ. ಹಾಗೇ 2024ರ ಟಿ-20 ವಿಶ್ವಕಪ್ನಿಂದ ಹಿಡಿದು 2026ರ ಟಿ-20 ವಿಶ್ವಕಪ್ವರೆಗೂ ಒಂದೇ ಒಂದು ಸರಣಿ ಸೋಲದೆ ರಾಯಲ್ ಆಗೇ ಎಂಟ್ರಿ ಕೊಡುತ್ತೆ. ಜೊತೆಗೆ ಹಾಲಿ ಚಾಂಪಿಯನ್ಸ್ ಟೀಂ ಟೈಟಲ್ ಉಳಿಸಿಕೊಳ್ಳೋಕೆ ಫೇವರೆಟ್ ಟೀಂ ಆಗುತ್ತೆ. ಸೋ ಇದೆಲ್ಲಾ ನಿನ್ನೆ ಮ್ಯಾಚ್ ಕ್ಯಾನ್ಸಲ್ ಆಗಿದ್ದರ ಎಫೆಕ್ಟ್.. ಬಟ್ ಸಾಮಾನ್ಯವಾಗಿ ಮಳೆ ಬಂದಾಗ ಮ್ಯಾಚಸ್ ಕ್ಯಾನ್ಸಲ್ ಆಗೋದನ್ನ ಸುಮಾರ್ ಸಲ ನೋಡಿದ್ವಿ. ಹೆವಿ ಫಾಗ್ ಕಾರಣಕ್ಕೆ ರದ್ದಾಗಿದ್ದಂತೂ ತೀರಾ ಕಮ್ಮಿ. ಹಾಗಾದ್ರೆ ಕ್ರಿಕೆಟ್ನಲ್ಲಿ ಯಾವೆಲ್ಲಾ ಕಾರಣಕ್ಕೆ ಪಂದ್ಯಗಳನ್ನ ರದ್ದು ಮಾಡಿದ್ದಾರೆ ಅನ್ನೋದನ್ನೂ ನೋಡೋದಾದ್ರೆ..
ಪಂದ್ಯ ರದ್ದು ಮಾಡಲು ಕಾರಣಗಳು!
- ಸಾಮಾನ್ಯವಾಗಿ ನಿರಂತರ ಮಳೆ, ಹವಾಮಾನ ವೈಪರಿತ್ಯ ಹಿನ್ನೆಲೆ
(ಭಾರೀ ಮಳೆ, ಮಿಂಚು, ಹಿಮ ಅಥವಾ ವಿಪರೀತ ಬಿಸಿಲು ಇದ್ದಾಗ. ಮೈದಾನದಲ್ಲಿ ನೀರು ತುಂಬಿದಾಗ ಪಂದ್ಯಗಳು ರದ್ದಾಗ್ತಾವೆ. ಮೊಸ್ಟ್ ಆಫ್ ದಿ ಟೈಂ ಮಳೆ ಕಾರಣಕ್ಕೆ ಕ್ಯಾನ್ಸಲ್ ಮಾಡ್ತಾರೆ )
- ಆಟಗಾರರ ಭದ್ರತಾ ದೃಷ್ಟಿಯಿಂದ ಪಂದ್ಯ ಕ್ಯಾನ್ಸನ್
( ರಾಜಕೀಯ ದಂಗೆ, ಭಯೋತ್ಪಾದಕ ದಾಳಿಗಳು ಅಥವಾ ಇತರ ಪ್ರಮುಖ ಭದ್ರತಾ ಬೆದರಿಕೆಗಳು ಇದ್ದಾಗ ಪಂದ್ಯಗಳನ್ನ ಪೋಸ್ಟ್ ಪೋನ್ ಮಾಡ್ತಾರೆ ಅಥವಾ ರದ್ದು ಮಾಡುವ ಚಾನ್ಸಸ್ ಇರುತ್ತೆ. ಲಾಸ್ಟ್ ಐಪಿಎಲ್ ನಲ್ಲಿ 9 ದಿನ ಪೋಸ್ಟ್ ಪೋನ್ ಆಗಿತ್ತು. ಭಾರತ ಪಾಕ್ ವಾರ್ ಹಿನ್ನೆಲೆ. )
- ಮೈದಾನದಲ್ಲಿ ಜೇನುನೊಣ ಅಥವಾ ಕೀಟಗಳು ಜಾಸ್ತಿ ಇದ್ದಾಗ
( 2021 ಜೇನುನೊಣಗಳ ಬೃಹತ್ ಗುಂಪು ಮೈದಾನಕ್ಕೆ ಪ್ರವೇಶಿಸಿದಾಗ ಆಟ ಸ್ಥಗಿತಗೊಂಡಿತು. ಅಧಿಕಾರಿಗಳು ಜೇನುನೊಣಗಳು ಚದುರಲು ಕಾಯುತ್ತಿದ್ದಾಗ ಆಟಗಾರರು ಮೈದಾನದಲ್ಲಿ ಮಲಗಿದ್ದರು. )
- ಫ್ಲಡ್ ಲೈಟ್ ಗಳು ಹಾಳಾಗಿ ಮಂದ ಬೆಳಕಿನ ಕಾರಣಕ್ಕೆ ರದ್ದು
( 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ODI ಪಂದ್ಯ ಈ ಕಾರಣಕ್ಕೆ ರದ್ದಾಗಿತ್ತು. ಫ್ಲಡ್ಲೈಟ್ಸ್ ಕೈಕೊಟ್ಟಿದ್ರಿಂದ ಅಂತಿಮವಾಗಿ ಮಂದ ಬೆಳಕಿನಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. )
- ಕಳಪೆ ಪಿಚ್ ನಿಂದಾಗಿ ಪಂದ್ಯವನ್ನೇ ರದ್ದುಗೊಳಿಸಿದ ಅಂಪೈರ್ಸ್
( 1998ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಪಂದ್ಯವನ್ನ ರದ್ದುಗೊಳಿಸಿದ್ರು. ಅದಕ್ಕೆ ಕಾರಣವೇ ಪಿಚ್. ಅಂದ್ರೆ ಹೆಚ್ಚು ರೋಲಿಂಗ್ ಮತ್ತು ಕಳಪೆ ಪಿಚ್ ತಯಾರಿಯು ಸಿಕ್ಕಾಪಟ್ಟೆ ಬೌನ್ಸ್ಗೆ ಕಾರಣವಾಯಿತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಿದ್ರು. ಆ ನಂತ್ರ ಕ್ಯುರೇಟರ್ ಅನ್ನು ಅಮಾನತುಗೊಳಿಸಲಾಯಿತು. )
- ಕೆಂಪು ಇರುವೆಗಳು ಜಾಸ್ತಿ ಇದ್ದ ಕಾರಣಕ್ಕೆ ಪಂದ್ಯ ರದ್ದು
( 2006 ರಲ್ಲಿ ವೆಸ್ಟ್ ಇಂಡೀಸ್ನ ಆಂಟಿಗುವಾ ರಿಕ್ರಿಯೇಶನ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೆಂಪು ಇರುವೆ ಕಾರಣಕ್ಕೆ ಪಂದ್ಯ ರದ್ದಾಗಿತ್ತು. ಪಿಚ್ ಮತ್ತು ಗ್ರೌಂಡ್ ತುಂಬಾ ಜಾಸ್ತಿ ಇದ್ದ ಕಾರಣಕ್ಕೆ ಪಂದ್ಯ ರದ್ದುಗೊಳಿಸಿದ್ರು. )
- ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮ್ಯಾಚ್ ನಿಲ್ಲಿಸಿದ ಅಂಪೈರ್
( 2016ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸೈಟ್ ಸ್ಕ್ರೀನ್ ಗೆ ಬೆಂಕಿ ಹೊತ್ತಿಕೊಂಡಿತು. ಹೀಗಾಗಿ ಸುರಕ್ಷತೆ ಕಾರಣಕ್ಕೆ ಪಂದ್ಯ ರದ್ದುಗೊಳಿಸಿದ್ರು )
ಇನ್ನು ಇಷ್ಟೇ ಅಲ್ದೇ ನಾಯಿ ಬಂದಾಗ, ಹಾವು ಕಾಣಿಸಿಕೊಂಡಾಗ ಮ್ಯಾಚ್ ಕ್ಯಾನ್ಸಲ್ ಆದ ಘಟನೆಗಳೂ ನಡೆದಿವೆ. ಹೀಗೆ ಸಾಕಷ್ಟು ಅಚ್ಚರಿಯ ಕಾರಣಗಳಿಗೆ ಪಂದ್ಯ ರದ್ದಾಗಿದ್ದೂ ಇದೆ.

ನೋಡಿರಿ

