RCBಗೆ ಎದುರಾಳಿ ಯಾರು? – ಫೈನಲ್‌ನಲ್ಲಿ KKR ಟೀಮ್‌ನ ಸೋಲಿಸಬಹುದಾ?
ಕೋಲ್ಕೊತ್ತಾ ನೈಟ್ ರೈಡರ್ಸ್ ಈ ಐಪಿಎಲ್ ಸೀಸನ್‌ನಲ್ಲಿ ಹಾಟ್‌ಸೀಟ್‌ನಲ್ಲಿ ಕುಳಿತಿದೆ.. ಲೀಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೆಕೆಆರ್ ಸಹಜವಾಗಿಯೇ ಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದು.. ಆದ್ರೆ ಕೆಕೆಆರ್ ಜೊತೆಗೆ ಕ್ವಾಲಿಫೈಯರ್ ಆಡಲು ಸಜ್ಜಾಗಿರುವ ಎಸ್‌ಆರ್‌ಹೆಚ್ ಕೂಡ ಈ ಸೀಸನ್‌ನಲ್ಲಿ ಅಮೋಘ ಆಟದ ಮೂಲಕ ಹೆಸರಾಗಿರುವ ತಂಡ.. ಕಳೆದ ಸೀಸನ್‌ನಲ್ಲಿ ಕೆಕೆಆರ್ ತಂಡವನ್ನು ಲೀಡ್ ಮಾಡಿದ್ದ ಪ್ಯಾಟ್ ಕಮಿನ್ಸ್ ಈ ಬಾರಿ ಎಸ್‌ಆರ್‌ಹೆಚ್ ತಂಡದ ನಾಯಕನಾಗಿರುವುದು ವಿಶೇಷ.. ಹೀಗಾಗಿ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸುವ ತವಕದಲ್ಲಿ ಎರಡೂ ತಂಡಗಳಿವೆ.. ಇದರಲ್ಲಿ ಯಾರ ಬಲ ಎಷ್ಟಿದೆ? ಯಾರು ಮೊದಲು ಫೈನಲ್ ಪ್ರವೇಶಿಸುವ ಸಾಧ್ಯತೆ ಎಷ್ಟಿದೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತಮ್ಮ ತಂಡ ತೊರೆಯಲಿದ್ದಾರೆ ಇಬ್ಬರು ದಿಗ್ಗಜ ಆಟಗಾರರು – ಐಪಿಎಲ್ನಲ್ಲಿ ಫ್ರಾಂಚೈಸಿಗಳು ನಾಯಕರಿಗೆ ಅವಮಾನ ಮಾಡೋದು ಸರಿನಾ?
ಶಾರುಖ್ ಖಾನ್ ಒಡೆತನದ ಕೆಕೆಆರ್ ಐಪಿಎಲ್‌ನಲ್ಲಿ ಇದುವರೆಗೆ ಎರಡು ಬಾರಿ ಟೈಟಲ್ ಗೆದ್ದಿರುವ ತಂಡ.. ಹಾಗೆ ಎರಡೂ ಬಾರಿ ಕಪ್ ಗೆದ್ದಾಗಲೂ ಲೀಗ್ ಹಂತದಲ್ಲಿ ನಂ.1 ಸ್ಥಾನದಲ್ಲಿ ಮುನ್ನುಗ್ಗಿ, ಕ್ವಾಲಿಫೈಯರ್ ಗೆದ್ದು ಫೈನಲ್‌ಗೆ ಬಂದಿದ್ದು ಕೆಕೆಆರ್‌ನ ವಿಶಿಷ್ಟ ದಾಖಲೆ.. ಈಗ ಅಂತದ್ದೇ ಮತ್ತೊಂದು ದಾಖಲೆ ಮಾಡಲು ಹೊರಟಿದೆ ಕೆಕೆಆರ್.. ತಂಡದ ಈಗಿನ ಮೆಂಟರ್ ಆಗಿರುವ ಗೌತಮ್ ಗಂಭೀರ್ ನಾಯಕನಾಗಿದ್ದಾಗಲೇ ಎರಡೂ ಬಾರಿ ಕೆಕೆಆರ್ ಚಾಂಪಿಯನ್ ಆಗಿತ್ತು.. ಈಗ ಮತ್ತೆ ಗೌತಮ್ ಗಂಭೀರ್ ತಂಡಕ್ಕೆ ಬಂದಿರೋದ್ರಿಂದ ಕೊಲ್ಕೊತ್ತಾ ಟೀಂ ಮತ್ತೆ ಅಗ್ರೆಸ್ಸಿವ್ ಆಗಿಯೇ ಆಡ್ತಾ ಇದೆ..
ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ತನ್ನ ಗೇಮ್ ಪ್ಲ್ಯಾನ್ ಮೂಲಕವೇ ಹೆಚ್ಚು ಸಕ್ಸಸ್ ಕಂಡಿರುವ ತಂಡ.. ಯಾಕಂದ್ರೆ ಸುನಿಲ್ ನರೈನ್ ಅವರನ್ನು ಓಪನರ್ ಆಗಿ ಖಾಯಂ ಮಾಡಿದ್ದರಿಂದ, ಹೆಚ್ಚು ಸಲೀಸಾಗಿ ನರೈನ್ ಬ್ಯಾಟ್ ಬೀಸುತ್ತಿದ್ದಾರೆ.. ಹಿಂದೆಲ್ಲಾ ಒಂದೋ ಎರಡೋ ಅವಕಾಶ ಮಾತ್ರ ನರೈನ್‌ಗೆ ಓಪನಿಂಗ್‌ಲ್ಲಿ ಸಿಕ್ಕಿತ್ತು.. ಆದ್ರೀಗ ನರೈನ್ ಎಷ್ಟೇ ರನ್ ಹೊಡೆದರೂ ಅದು ಬೋನಸ್ ಎಂಬ ರೀತಿಯಲ್ಲೇ ಕ್ಯಾಲುಕ್ಯುಲೇಟ್ ಮಾಡಿರುವ ಕೆಕೆಆರ್, ಅವರನ್ನು ಓಪನರ್ ಆಗಿಯೇ ಬಿಟ್ಟಿದೆ.. ನರೈನ್ ಏನು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಅಲ್ಲ.. ಆದ್ರೆ ಯಾವುದೇ ಬ್ಯಾಟ್ಸ್‌ಮನ್ ಮೀರಿಸುವಷ್ಟು ಅಗ್ರೆಸ್ಸಿವ್ ಆಗಿ ಆಡಬಲ್ಲ ಸಾಮರ್ಥ್ಯವಿದೆ.. ಚೆಂಡನ್ನು ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಸಿಕ್ಸರ್‌ಗೆ ಅಟ್ಟಬಲ್ಲರು.. 20 ಎಸೆತ ಎದುರಿಸಿದರೂ ಅಂದರೆ ಮೂವತ್ತಕ್ಕಿಂತ ಹೆಚ್ಚು ರನ್ ಗಳಿಸುವ ಸ್ಟ್ರೈಕ್ ರೇಟ್ ಕೂಡ ಇದೆ.. ಇದೇ ಕಾರಣಕ್ಕೆ ಬ್ಯಾಟಿಂಗ್‌ನಲ್ಲಿ ಕೆಕೆಆರ್‌ಗೆ ಯಾವುದೇ ತಲೆಬಿಸಿಯಿಲ್ಲ.. ನರೈನ್ ಓಪನರ್ ಆಗಿರೋದ್ರಿಂದ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್ ಪ್ಲೇಯಿಂಗ್ 11 ನಲ್ಲಿ ಕಾಣಿಸಿಕೊಳ್ತಿದ್ದಾರೆ.. ಇದರ ಜೊತೆಗೆ ಇನ್ನೂ ಒಬ್ಬ ಇಂಪ್ಯಾಕ್ಟ್ ಪ್ಲೇಯರ್ ಸಿಗೋದ್ರಿಂದ, ಕೆಕೆಆರ್ ತಂಡ ನಿಜಕ್ಕೂ ಇಬ್ಬರು ಇಂಪ್ಯಾಕ್ಟ್ ಪ್ಲೇಯರ್‌ಗಳ ಜೊತೆಗೆ ಆಡುವಂತಾಗಿದೆ..
ನರೈನ್ ಬಿಟ್ಟರೆ ಫಿಲ್ ಸಾಲ್ಟ್, ಅಂಗ್‌ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್.. ಹೀಗೆ ಒಬ್ಬರಾದ ಮೇಲೊಬ್ಬರು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.. ನಾಯಕ ಶ್ರೇಯಸ್ ಅಯ್ಯರ್ ಮಾತ್ರ ಈ ಸೀಸನ್‌ನಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಿಲ್ಲ.. ಆದ್ರೆ ಪ್ಲೇಆಫ್‌ನಲ್ಲಿ ಶ್ರೇಯಸ್ ಅಪಾಯಕಾರಿ ಬ್ಯಾಟ್ಸ್‌ಮನ್ ಆಗುವ ಸಾಧ್ಯತೆ ಇದ್ದೇ ಇದೆ.. ಇನ್ನು ಬೌಲಿಂಗ್ ಯುನಿಟ್‌ನಲ್ಲೂ ಅತ್ಯಂತ ಬಲಿಷ್ಠವಾಗಿರುವ ತಂಡವೆಂದರೆ ಕೆಕೆಆರ್.. ಮಿಚೆಲ್ ಸ್ಟಾರ್ಕ್, ಸುನಿಲ್ ನರೈನ್, ಹರ್ಷಿತ್ ರಾಣಾ, ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ ಯಾವ ಕ್ಷಣದಲ್ಲಿ ಬೇಕಿದ್ದರೂ ವಿಕೆಟ್ ಕೀಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ.. ಅದರಲ್ಲೂ ಸುನಿಲ್ ನರೈನ್ ಬೌಲಿಂಗ್‌ನಲ್ಲಿ ರನ್ ಕಲೆಹಾಕುವುದೇ ದೊಡ್ಡ ಸವಾಲಾಗಲಿದೆ.. ಎಸ್‌ಆರ್‌ಹೆಚ್‌ನ ಹೊಡಿಬಡಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಮತ್ತು ಪಾರ್ಟನರ್‌ಶಿಪ್ ಬ್ರೇಕ್ ಮಾಡುವಲ್ಲಿ ಸುನಿಲ್ ನರೈನ್ ಯಶಸ್ವಿಯಾದರೆ, ಕೆಕೆಆರ್ ಗೆಲುವನ್ನು ತಡೆಯೋದು ಕಷ್ಟ..
ಕೆಕೆಆರ್ ಗಿಂತ ಎಸ್‌ಆರ್‌ಹೆಚ್ ಕೂಡ ಕಡಿಮೆಯೇನಿಲ್ಲ.. ಈ ಸೀಸನ್‌ನಲ್ಲಿ ದಾಖಲೆಯ ಮೇಲೆ ದಾಖಲೆಯನ್ನು ಬ್ಯಾಟಿಂಗ್ ಮೂಲಕ ಮಾಡಿರುವ ತಂಡ ಹೈದ್ರಾಬಾದ್.. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಹೆಚ್ಚು ಅಗ್ರೆಸ್ಸಿವ್ ಬ್ಯಾಟಿಂಗ್ ಕಡೆಗೆ ಒತ್ತು ನೀಡಿದೆ.. ಟ್ರಾವಿಸ್ ಹೆಡ್ ಸಿಡಿದರೆ ತಂಡ 250ಕ್ಕಿಂತ ಹೆಚ್ಚು ರನ್ ಕಲೆಹಾಕುವುದರಲ್ಲಿ ಅನುಮಾನವೇ ಇಲ್ಲ.. ಯಾಕಂದ್ರೆ ಅವರಿಗೆ ಸಾಥ್ ಕೊಡಲು ಅಭಿಶೇಕ್ ಶರ್ಮಾ ಮತ್ತು ನಿತೇಶ್ ರೆಡ್ಡಿ ಇದ್ದಾರೆ.. ಇವರ ಜೊತೆಗೆ ಮಿಸ್ಟರ್ ಡಿಪೆಂಡೆಬಲ್ ಹೆನ್ರಿಚ್ ಕ್ಲಾಸನ್ ಬ್ಯಾಟಿಂಗ್ ಬಗ್ಗೆ ಹೇಳೋದೇ ಬೇಡ.. ವಿಕೆಟ್ ಹಿಂದೆ ನಿಂತು ಫೀಲ್ಡಿಂಗ್ ಸೆಟ್ ಮಾಡುವಲ್ಲಿ ಮಹತ್ವದ ಪಾತ್ರನಿರ್ವಹಿಸುವ ಕ್ಲಾಸನ್, ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರ ದೊಡ್ಡ ಶಕ್ತಿ.. ಎಸ್‌ಆರ್‌ಹೆಚ್ ಗೆಲುವಿನಲ್ಲಿ ಕ್ಲಾಸೆನ್ ಕೊಡುಗೆ ದೊಡ್ಡದಿದೆ.. ಪ್ಲೇಆಫ್‌ನಲ್ಲೂ ಕ್ಲಾಸೆನ್ ಏನಾದ್ರೂ ಕ್ರೀಸ್‌ನಲ್ಲಿ ನೆಲೆ ನಿಂತರೆ ಕೆಕೆಆರ್‌ಗೆ ಗೆಲುವು ಮರೀಚಿಕೆ ಆಗಬಹುದು..
ಕೆಕೆಆರ್‌ಗೆ ಹೋಲಿಸಿದ್ರೆ ಎಸ್‌ಆರ್‌ಹೆಚ್ ಬೌಲಿಂಗ್ ಯುನಿಟ್ ಅಷ್ಟೇನೂ ಬಲಿಷ್ಠವಾಗಿಲ್ಲ.. ದೊಡ್ಡ ಸ್ಕೋರ್ ಗಳಿಸಿದಾಗಲೂ ಅದನ್ನು ಡಿಫೆಂಡ್ ಮಾಡಿಕೊಳ್ಳಲು ಎಸ್‌ಆರ್‌ಹೆಚ್ ಒದ್ದಾಡಿದೆ.. ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಭುವನೇಶ್ವರ್ ಕುಮಾರ್ ಮಾತ್ರ ಚೆನ್ನಾಗಿ ಬೌಲಿಂಗ್ ಮಾಡ್ತಾರೆ.. ಇವರಿಗೆ ನಟರಾಜನ್ ಒಳ್ಳೆಯ ಸಾಥ್ ಕೊಡ್ತಿದ್ದಾರೆ.. ಆದ್ರೆ ಉಳಿದೆರಡು ಬೌಲರ್‌ಗಳ ಆಯ್ಕೆಯೇ ಹೆದ್ರಾಬಾದ್‌ಗೆ ತಲೆನೋವು.. ತಂಡದಲ್ಲಿ ಉತ್ತಮ ಸ್ಪಿನ್ನರ್‌ಗಳ ಕೊರತೆಯಿದೆ.. ಇದ್ರಿಂದಾಗಿ ಕೆಕೆಆರ್ ಮೇಲೆ ಡಾಮಿನೇಟ್ ಮಾಡಬೇಕು ಅಂದ್ರೆ ಮತ್ತೊಂದು ದಾಖಲೆ ಮಟ್ಟದ ಸ್ಕೋರ್ ದಾಖಲಿಸಿಕೊಳ್ಳಬೇಕಾದ ಅನಿವಾರ್ಯತೆ ಎಸ್‌ಆರ್‌ಹೆಚ್‌ಗಿದೆ.. ಅಥವಾ ಮೊದಲು ಬೌಲಿಂಗ್ ಮಾಡಿದರೂ ಕೆಕೆಆರ್ ಎಷ್ಟೇ ಸ್ಕೋರ್ ಮಾಡಿದರೂ ಅದನ್ನು ಚೇಸ್ ಮಾಡುವ ವಿಶ್ವಾಸದಲ್ಲೇ ಬ್ಯಾಟ್ ಬೀಸಬೇಕಿದೆ..
ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯದಲ್ಲಿ ಯಾರೇ ಗೆದ್ದರೂ ನೇರವಾಗಿ ಫೈನಲ್ ಪ್ರವೇಶಸಿಲಿದ್ದಾರೆ.. ಈ ಬಾರಿ ಆರ್‌ಸಿಬಿ ಫೈನಲ್‌ಗೆ ಬಂದೇ ಬರುತ್ತೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.. ಇಲ್ಲಿ ಯಾರೇ ಸೋತರೂ ಅವರನ್ನು ಆರ್‌ಸಿಬಿ ಎರಡನೇ ಕ್ವಾಲಿಫೈಯರ್‌ನಲ್ಲಿ ಎದುರಿಸಬೇಕಿದೆ..