POKಯಲ್ಲಿ ರೊಚ್ಚಿಗೆದ್ದ ಜನ – ಹಲವು ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅವಾಮಿ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟು ಹದಿಮೂರು ಗಂಟೆಗಳ ಕಾಲ ನಡೆಸಿದ ಚರ್ಚೆ ವಿಫಲಗೊಂಡಿದ್ದ ಕಾರಣ ಹೋರಾಟಕ್ಕೆ ಮುಂದಾಗಿದೆ. ಈಗಾಗಲೇ ಪಾಕಿಸ್ತಾನ ಸರ್ಕಾರವು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿದೆ. ಜೊತೆಗೆ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಿದೆ. ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯುಂಟಾಗದಂತೆ ಪ್ರತಿಭಟನೆ ನಡೆಸಲು ಸೂಚನೆ ಕೊಟ್ಟಿದೆ.
ಇದನ್ನೂ ಓದಿ: BBKಯಿಂದ ರಕ್ಷಿತಾ ಶೆಟ್ಟಿ OUT? – ಫಸ್ಟ್ ಡೇ ELIMINATION ಯಾಕೆ?
ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾದ 12 ಅಸೆಂಬ್ಲಿ ಸ್ಥಾನಗಳ ರದ್ದತಿ, ಜಲವಿದ್ಯುತ್ ಒಪ್ಪಂದಗಳ ಮರು ಮಾತುಕತೆ , ಹಿಟ್ಟಿನ ಸಬ್ಸಿಡಿ ಮತ್ತು ವಿದ್ಯುತ್ ಸುಂಕ ಕಡಿತ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ, ಅವಾಮಿ ಆಕ್ಷನ್ ಕಮಿಟಿ (AAC) ಬೃಹತ್ ಪ್ರತಿಭಟನೆ ಮತ್ತು ಕರ್ಫ್ಯೂಗೆ ಮುಂದಾಗಿದೆ. ʻಶಟರ್-ಡೌನ್ ಮತ್ತು ವೀಲ್-ಜಾಮ್ʼ ಮುಷ್ಕರಕ್ಕೆ ಅವಾಮಿ ಆಕ್ಷನ್ ಕಮಿಟಿ ಕರೆ ನೀಡಿದ್ದ, ಸಾವಿರಾರು ನಾಗರಿಕರು ಈ ಪ್ರತಿಭಟನೆಗಳನ್ನು ನಡೆಸಲಿದ್ದಾರೆ. ಪಾಕಿಸ್ತಾನ ಸರ್ಕಾರ ಈಗಾಗಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಲ್ಲಿ ಭಾರಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಪ್ರತಿಭಟನಾಕಾರರ ಸಂಘಟನೆ ತಡೆಯಲು ಮಧ್ಯರಾತ್ರಿಯಿಂದ ಇಂಟರ್ನೆಟ್ ಸ್ಥಗಿತಗೊಳಿಸಿದೆ
ಈ ಬಗ್ಗೆ ಅವಾಮಿ ಆಕ್ಷನ್ ಕಮಿಟಿಯ ಪ್ರಮುಖ ನಾಯಕ ಶೌಕತ್ ನವಾಜ್ ಮಿರ್ ಅವರು ಮುಜಫ್ಫರಾಬಾದ್‌ನಲ್ಲಿ ಮಾತನಾಡಿ, ನಮ್ಮ ಅಭಿಯಾನವು ಯಾವುದೇ ಸಂಸ್ಥೆಯ ವಿರುದ್ಧವಲ್ಲ, ಆದರೆ 70 ವರ್ಷಗಳಿಂದ ನಮ್ಮ ಜನರಿಗೆ ಮೂಲಭೂತ ಹಕ್ಕುಗಳನ್ನು ನೀಡುವುದೇ ಸರ್ಕಾರ ನಿರಾಕರಿಸಿದೆ ಹೀಗಾಗಿ ಹೋರಾಟ ಮಾಡುತ್ತಿದ್ದೇವೆ. ಒಂದು ನಮ್ಮ ಹಕ್ಕುಗಳನ್ನು ನೀಡಿ ಅಥವಾ ಜನರ ಕೋಪವನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿದರು.
ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾದ 12 ಅಸೆಂಬ್ಲಿ ಸ್ಥಾನಗಳನ್ನು ರದ್ದುಗೊಳಿಸಬೇಕು. ಮಂಗ್ಲಾ ಮತ್ತು ನೀಲಂ-ಝೀಲಂ ಅಣೆಕಟ್ಟುಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ವಿದ್ಯುತ್‌ನಿಂದ ಸ್ಥಳೀಯ ಸಮುದಾಯಗಳಿಗೆ ನೇರವಾಗಿ ಲಾಭ ಸಿಗುವಂತೆ ಮಾಡಬೇಕು. ಜಲವಿದ್ಯುತ್ ಒಪ್ಪಂದಗಳನ್ನು ಮರು ಮಾತುಕತೆ ನಡೆಸಬೇಕು. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರ ಜೀವನ ಕಷ್ಟಕರವಾಗಿದೆ. ಈ ಹೊರೆಯನ್ನು ಕಡಿಮೆ ಮಾಡಲು ತಕ್ಷಣದ ಹಿಟ್ಟಿನ ಸಬ್ಸಿಡಿಗಳನ್ನು ಒದಗಿಸಬೇಕು. ಇಂಧನ ವೆಚ್ಚವನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು.

ನೋಡಿರಿ

