ಮೇಯರ್‌ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಭಾರಿ ಮುಖಭಂಗ  – ಭಾರತದ ಪರ ಪಕ್ಷಕ್ಕೆ ಭರ್ಜರಿ ಗೆಲುವು

ಮೇಯರ್‌ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಭಾರಿ ಮುಖಭಂಗ  – ಭಾರತದ ಪರ ಪಕ್ಷಕ್ಕೆ ಭರ್ಜರಿ ಗೆಲುವು

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರು ಮಾಡಿರುವ ವಿವಾದಾತ್ಮಕ ಹೇಳಿಕೆಯಿಂದ ಸದ್ಯ ಮಾಲ್ಡೀವ್ಸ್ ಭಾರತ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಮಾಲ್ಡೀವ್ಸ್  ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಮೇಯರ್‌ ಚುನಾವಣೆಯಲ್ಲಿ ಮೊಹಮ್ಮದ್ ಮುಯಿಝು ಅವರ ಪಕ್ಷ ಹೀನಾಯ ಸೋಲು ಕಂಡಿದೆ.

ಇದನ್ನೂ ಓದಿ: ಚಿನ್ನದ ಗಣಿಯಲ್ಲಿ ಭಾರೀ ದುರಂತ – ಭೂಕುಸಿತದಿಂದಾಗಿ 22 ಕಾರ್ಮಿಕರು ಸ್ಥಳದಲ್ಲೇ ಜೀವಂತ ಸಮಾಧಿ..

ಹೌದು, ಭಾರತ ವಿರೋಧಿ ನಿಲುವು ಹೊಂದಿದ್ದ ಮಾಲ್ಡೀವ್ಸ್  ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಪಕ್ಷಕ್ಕೆ ಮೇಯರ್‌ ಚುನಾವಣೆಯಲ್ಲಿ ಭಾರೀ ಸೋಲು ಉಂಟಾಗಿದೆ. ಭಾರತದ ಪರ ನಿಲುವು ಹೊಂದಿರುವ ಪಕ್ಷ ಜಯಗಳಿಸಿದೆ. ಮಾಲೆಯ ಮೇಯರ್‌ ಚುನಾವಣೆಯಲ್ಲಿ ಸದ್ಯ ವಿರೋಧ ಪಕ್ಷವಾಗಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಭರ್ಜರಿ ಜಯ ಸಾಧಿಸಿದೆ.

ಈ ಮೊದಲು ಮೊಹಮ್ಮದ್ ಮುಯಿಝು ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೇಯರ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆದಿತ್ತು. ಎಂಡಿಪಿ ಅಭ್ಯರ್ಥಿ ಅಜೀಂ 5,303 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಐಶಾತ್ ಅಜಿಮಾ ಶಕೂರ್ ಅವರು 3,301 ಮತಗಳನ್ನು ಪಡೆದಿದ್ದಾರೆ. ಭಾರತದ ವಿರೋಧಿ ನಿಲುವು ತಳೆದಿದ್ದಕ್ಕೆ ಪಿಎನ್‌ಪಿ ಅಭ್ಯರ್ಥಿಗೆ ಸೋಲಾಗಿದೆ ಎಂದು ವರದಿಯಾಗಿದೆ.

Shwetha M