ಮತ್ತೊಂದು ಮುಸ್ಲಿಂ ದೇಶದಲ್ಲಿ ಸಂಘರ್ಷ- ಟರ್ಕಿ ಅಧ್ಯಕ್ಷರ ಬುಡಕ್ಕೆ ಬೆಂಕಿ!
ಬೀದಿಗಿಳಿದ ಲಕ್ಷಾಂತರ ಜನ

ಟರ್ಕಿಯಲ್ಲಿ ಜನರು ಮತ್ತೆ ಬೀದಿಗಿಳಿದಿದ್ದಾರೆ. ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ ನಾಯಕ, ಟರ್ಕಿಶ್ ನಗರ ಇಸ್ತಾನ್‌ಬುಲ್‌ನ ಮೇಯರ್ ಎಕ್ರಮ್ ಇಮಾಮೊಗ್ಲು ಅವರ ಬಂಧನದ ವಿರುದ್ಧ ಜನರು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳನ್ನು ತಡೆಯಲು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಸರ್ಕಾರ ತಿಣುಕಾಡುತ್ತಿದೆ. ದೇಶದ ಅನೇಕ ಸ್ಥಳಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಯಲು ಮೆಟ್ರೋ ನಿಲ್ದಾಣಗಳನ್ನು ಸಹ ಮುಚ್ಚಲಾಗಿದೆ. ಪ್ರತಿಭಟನೆಗಳನ್ನು ವಿಫಲಗೊಳಿಸಲು, ನಗರದಲ್ಲಿ ನಾಲ್ಕು ದಿನಗಳವರೆಗೆ ಪ್ರದರ್ಶನಗಳ ಮೇಲೆ ನಿಷೇಧ ಹೇರಲಾಗಿದೆ. ನಿಷೇಧದ ನಡುವೆ ಇಸ್ತಾನ್‌ಬುಲ್‌ನ ಪೊಲೀಸ್ ಪ್ರಧಾನ ಕಚೇರಿ, ನಗರ ಸಭಾಂಗಣ ಮತ್ತು ಇಮಾಮೊಗ್ಲು ಅವರ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ ಯ ಪ್ರಧಾನ ಕಚೇರಿಯ ಹೊರಗೆ ಲಕ್ಷಾಂತರ ಜನರು ಜಮಾಯಿಸಿದ್ದಾರೆ. ಇಮಾಮೊಗ್ಲು ವಿರುದ್ಧದ ಕ್ರಮವನ್ನು ಕಾನೂನುಬಾಹಿರ ಮತ್ತು ಆಧಾರರಹಿತ ಎಂದು ಪ್ರತಿಭಟನಾಕಾರರು ಬಣ್ಣಿಸಿದ್ದಾರೆ. ಇಸ್ತಾನ್‌ಬುಲ್ ಮೇಯರ್ ಬಂಧನವು ಟರ್ಕಿಯಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಿದೆ. ಇದು ಪ್ರಜಾಪ್ರಭುತ್ವವಲ್ಲ, ಬದಲಾಗಿ ಪ್ರಜಾಪ್ರಭುತ್ವದ ನೆಪ. ಜನರು ಇದಕ್ಕೆ ಅರ್ಹರಲ್ಲ. ನಾವು ಖಂಡಿತವಾಗಿಯೂ ಅಸಮಾಧಾನಗೊಂಡಿದ್ದೇವೆ. ಮನುಷ್ಯರಾಗಿ ನಾವು ಅಸಮಾಧಾನಗೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಅಲ್ಲಾಡುತ್ತಿದೆ ಎರ್ಡೋಗನ್ ಬೇರುಗಳು
ಈ ಹಿಂದೆ ಸಿರಿಯಾ ಅಥವಾ ಗಾಜಾ ಆಗಿರಲಿ, ಪ್ರಪಂಚದ ಇತರ ದೇಶಗಳ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ‘ಟರ್ಕಿ ಅಧ್ಯಕ್ಷ ಎರ್ಡೋಗನ್ ತಾನು ಮುಸ್ಲಿಂ ಜಗತ್ತಿನ ನಾಯಕ ಎಂದು ಶಕ್ತಿ ತೋರಿಸುತ್ತಿದ್ದರು, ಸೌದಿ ಅರೇಬಿಯಾ ಮತ್ತು ಇರಾನ್‌ಗೆ ನೇರ ಸವಾಲು ಹಾಕುತ್ತಿದ್ದರು. ಆದರೆ ಈಗ ಅವರ ಸ್ವಂತ ದೇಶದಲ್ಲಿ ಅವರ ರಾಜಕೀಯ ಬೇರುಗಳು ದುರ್ಬಲಗೊಂಡಿವೆ. ದೇಶದಲ್ಲಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ವಿರೋಧಿಗಳನ್ನು ಬಂಧಿಸುತ್ತಿದ್ದಾರೆ.
ನೂರಾರು ಜನ ಅರೆಸ್ಟ್
ತನಿಖೆಯ ಭಾಗವಾಗಿ ಖಲೀಫಾ ಪೊಲೀಸರು 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ದೇಶದ ಪತ್ರಕರ್ತರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಕೂಡ ಸೇರಿದ್ದಾರೆ. ಅದೇ ಸಮಯದಲ್ಲಿ, ಅವರ ಬಂಧನದ ನಂತರ ಜನರ ಕೋಪವನ್ನು ನೋಡಿ, ಇಸ್ತಾನ್‌ಬುಲ್ ಗವರ್ನರ್ ಕಚೇರಿ 4 ದಿನಗಳವರೆಗೆ ಯಾವುದೇ ರೀತಿಯ ಪ್ರತಿಭಟನೆ ಪ್ರದರ್ಶನವನ್ನು ನಿಷೇಧಿಸಿದೆ. ಇದರ ನಂತರ, ಇಮಾಮೊಗ್ಲು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ‘ಜನರ ಇಚ್ಛೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಕೆ ನೀಡಲಾಗಿದೆ.
ನಿಷೇಧದ ನಡುವೆಯೂ ಪ್ರತಿಭಟನೆ
ಟರ್ಕಿಯಲ್ಲಿ ಪ್ರತಿಭಟನೆಗಳ ಮೇಲೆ ನಾಲ್ಕು ದಿನಗಳ ನಿಷೇಧವಿದ್ದರೂ, ಇಸ್ತಾನ್‌ಬುಲ್‌ನ ಪೊಲೀಸ್ ಪ್ರಧಾನ ಕಚೇರಿ, ನಗರ ಸಭಾಂಗಣ ಮತ್ತು ಇಮಾಮೊಗ್ಲು ಅವರ ಪಕ್ಷದ ಕಚೇರಿಯ ಹೊರಗೆ ಸಾವಿರಾರು ಜನರು ಜಮಾಯಿಸಿ ಇಮಾಮೊಗ್ಲು ಅವರ ಬಂಧನವನ್ನು ಕಾನೂನುಬಾಹಿರ ಮತ್ತು ಆಧಾರರಹಿತ ಎಂದು ಖಲೀಫಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಘರ್ಷಣೆ ಯಾವ ಕ್ಷಣದಲ್ಲಾದರೂ ಭುಗಿಲೇಳುವ ಸಾಧ್ಯತೆಯಿದೆ. ಆಂತರಿಕ ಸಂಘರ್ಷ ಗಮನಿಸಿದರೆ ಟರ್ಕಿ ಮತ್ತೊಂದು ಬಾಂಗ್ಲಾದೇಶವಾಗುವುದು ಗೋಚರಿಸುತ್ತಿದೆ.
ಎಲೆಕ್ಷನ್‌ಗಾಗಿ ಆರೋಪ ಮಾಡಿದ್ರಾ?
ಮೂಲಗಳ ಪ್ರಕಾರ, ಮೂರು ವರ್ಷಗಳ ಬಳಿಕ ಟರ್ಕಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿ ಎಂದು ಎಕ್ರಮ್ ಇಮಾಮೊಗ್ಲು ಪರಿಗಣಿಸಲಾಗಿದೆ. ಹೀಗಾಗಿ ಇಮಾಮೊಗ್ಲು ವಿರುದ್ಧ ಹಲವು ಆರೋಪ ಹೊರಿಸಿ ಎರ್ಡೊಗನ್ ಸರ್ಕಾರ ಅವರನ್ನು ಬಂಧಿಸಿ ಜೈಲಿಗಟ್ಟಿತ್ತು. ಇದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ರಸ್ತೆಗಿಳಿದ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸಿ ಎರ್ಡೋಗನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ನಲ್ಲಿ ಮಸ್ಮಿಂ ರಾಷ್ಟ್ರಗಳು ಆಂತಕರಿ ಸಂಘರ್ಷದಿಂದ ಬೆಂದು ಹೋಗುತ್ತಿರುವುದಂತು ನಿಜ..