ಕಿರುತೆರೆಯಲ್ಲಿ ಗೌರಿ ಪುತ್ರ ಮಾಸ್ ಎಂಟ್ರಿ – ಹೆತ್ತವರ ಬಳಿ ಅಮ್ಮನ ಸೇರಿಸಲು ಶ್ರವಣಸೇವೆ

ಜೀ ಕನ್ನಡ ವಾಹಿನಿಯಲ್ಲಿ ಅಮೃತಧಾರೆ ಸೀರಿಯಲ್ ಎಂಡ್ ಆಗಿದೆ. ಈ ಸೀರಿಯಲ್ ಸಮಯದಲ್ಲೇ ಗೌರಿಪುತ್ರನ ಎಂಟ್ರಿಯಾಗಿದೆ. ಮೊದಲ ಸಂಚಿಕೆಯಲ್ಲೇ ಗೌರಿಪುತ್ರನ ಮಾಸ್ ಎಂಟ್ರಿ ವೀಕ್ಷಕರ ಮನಗೆದ್ದಿದೆ.
ಇದನ್ನೂ ಓದಿ:ಗಾನವಿ ಗುಣಗಾನದ ಬದಲು ಬೈದ ಜಗ್ಗ ಮಮ್ಮಿ – ಮಂಜಿ ಪರ ನಿಂತ ಪ್ರೇಮಕವಿ ಮಂಜ!
ಜೀ ಕನ್ನಡದಲ್ಲಿ ಗೌರಿ ಪುತ್ರ ಧಾರಾವಾಹಿಯ ಮೊದಲ ಸಂಚಿಕೆಯಲ್ಲೇ ವೀಕ್ಷಕರಿಗೆ ಹತ್ತಿರವಾಗಿದೆ. ಗೌರಿ ಮತ್ತು ಮಗ ಕಾರ್ತಿಕ್ ಸುತ್ತ ಸೀರಿಯಲ್ ಕಥೆ ಸಾಗುತ್ತದೆ. ಮೊದಲ ಸಂಚಿಕೆಯಲ್ಲೇ ಸೀರಿಯಲ್ ನಾಯಕಿ ಗೌರಿಯ ವ್ಯಕ್ತಿತ್ವದ ಅನಾವರಣವಾಗಿದೆ. ದೊಡ್ಡ ಕುಟುಂಬದ ಸೊಸೆಯಾಗಿರುವ ಗೌರಿ, ಇಡೀ ಮನೆಗೆ ಬೆಳಗ್ಗೆ ಯೋಗ ಟೀಚರ್. ನಂತರ ಕಿಚನ್ ಸೇರಿಕೊಂಡು ಮನೆಯವರೆಲ್ಲರಿಗೂ ಬೇಕಾದ ಅಡುಗೆ ತಯಾರಿಸೋ ಅಮ್ಮ. ಜೊತೆಗೆ ಮನೆಯಿಂದಾಚೆಗೆ ಯಶಸ್ವೀ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಾಳೆ.
ಮೊದಲ ದಿನ ಗೌರಿ ಅಂದ್ರೆ ಬೆಂಕಿ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ. ಇನ್ನು ಅಮ್ಮನ ತಂಟೆಗೆ ಬಂದ್ರೆ ಗೌರಿ ಪುತ್ರ ಕಾರ್ತಿಕ್ ಸುಮ್ಮನೆ ಇರೋನೇ ಅಲ್ಲ. ಮೊದಲ ಸಂಚಿಕೆಯಲ್ಲೇ ಫೈಟಿಂಗ್ ಮೂಲಕ ಕಾರ್ತಿಕ್ ಎಂಟ್ರಿ ಭರ್ಜರಿಯಾಗಿದೆ. ಮೊದಲ ಸಂಚಿಕೆಯಲ್ಲಿ ಗೌರಿಯ ಮದುವೆ ವಾರ್ಷಿಕೋತ್ಸವದ ಸಂಭ್ರಮವಿದೆ. ಗೌರಿ ಮತ್ತು ರಾಘವೇಂದ್ರ ಜೋಡಿಯ 28ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮವಿದೆ. ಮಡಿಲುಶಾಸ್ತ್ರಕ್ಕೆ ಹೆಣ್ಣಿನ ತವರಿನವರನ್ನು ಶಾಸ್ತ್ರಿಗಳು ಆಹ್ವಾನಿಸುತ್ತಾರೆ. ಇದರಿಂದ ಭಾವುಕರಾದ ಗೌರಿ, ನನಗೆ ತವರು ಇಲ್ಲ ಎಂದು ಮಂಟಪದಿಂದ ಹೊರ ನಡೆಯುತ್ತಾಳೆ. ಈ ವೇಳೆ ತಂದೆಗೆ ಅಮ್ಮನ ತವರಿನ ಬಗ್ಗೆ ಕಾರ್ತಿಕ್ ಕೇಳುತ್ತಾನೆ. ಇದಾದ ನಂತರ ಕಾರ್ತಿಕ್ ಅಮ್ಮನಿಗೆ ತವರು ಮನೆಯವರ ಬಾಂಧವ್ಯ ಸಿಗುವಂತೆ ಮಾಡಲು ಶಪಥ ಮಾಡುತ್ತಾನೆ. ಅಮ್ಮನ ತವರು ಮನೆಗೂ ಹೋಗುತ್ತಾನೆ. ಜೊತೆಗೆ ಅಮ್ಮ ಮತ್ತು ಅಪ್ಪನನ್ನು ಹೆಗಲೇರಿಸಿಕೊಂಡು ಶ್ರವಣ ಸೇವೆ ಮಾಡುತ್ತಾನೆ.
ಮೊದಲ ದಿನದಿಂದಲೇ ಗೌರಿಪುತ್ರನ ಹವಾ ಜೋರಾಗಿದೆ. ಧಾರಾವಾಹಿಯ ಗುಣಮಟ್ಟ ಸಿನಿಮಾ ರೇಂಜ್ನಲ್ಲಿದೆ. ಮೊದಲ ಸಂಚಿಕೆಯಲ್ಲೇ ಫೈಟಿಂಗ್, ಸಾಂಗ್, ಕೂಡಾ ಥೇಟ್ ಸಿನಿಮಾ ಶೈಲಿಯಲ್ಲೇ ಮೂಡಿಬಂದಿದೆ.

ನೋಡಿರಿ

