ಮತ್ತೆ ಕೋವಿಡ್ ಕಾಟ..! ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ?- ಬಿಬಿಎಂಪಿಯಿಂದ ಚಿಂತನೆ

ಮತ್ತೆ ಕೋವಿಡ್ ಕಾಟ..! ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ?- ಬಿಬಿಎಂಪಿಯಿಂದ ಚಿಂತನೆ

ಬೆಂಗಳೂರು :ಬೆಂಗಳೂರಿನ ಜನತೆಗೆ ಮತ್ತೆ ಕೋವಿಡ್ ಕಂಟಕ ಶುರುವಾಗಲಿದೆಯಾ? ಹೊರದೇಶಗಳಲ್ಲಿ ಹೆಚ್ಚಾದ ಕೊರೋನಾದಿಂದಾಗಿ ರಾಜಧಾನಿಗೂ ಕಾಟ ತಪ್ಪಿದ್ದಲ್ವಾ ? ಮತ್ತೆ ಮಾಸ್ಕ್ ಕಡ್ಡಾಯ ಮಾಡಬೇಕಾ? ಇದೀಗ ಬಿಬಿಎಂಪಿ ಅಂಗಳದಲ್ಲಿ ಇದೇ ಚರ್ಚೆ ಶುರುವಾಗಿದೆ. ಚೀನಾದಲ್ಲಂತೂ ಕೋವಿಡ್ ಮಿತಿಮೀರುತ್ತಿದೆ. ಇದಲ್ಲದೇ ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಬ್ರೆಜಿಲ್‌ನಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಿಲಿಕಾನ್ ಸಿಟಿಯಲ್ಲೂ ಕೂಡಾ ಮಾಸ್ಕ್ ಕಡ್ಡಾಯ ಮಾಡಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ :  ‘ಶಾಲಾ ಸಮಯ ಬದಲಾವಣೆ ಮಾಡಿ’ – ಡಾ. ಸಿ. ಎನ್ ಮಂಜುನಾಥ್ ಸಲಹೆ

ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಕೋವಿಡ್ ಸಲಹಾ ಸಮಿತಿಗೆ ಈಗಾಗಲೇ ಈ ಬಗ್ಗೆ ಬಿಬಿಎಂಪಿ ಮನವಿ ಸಲ್ಲಿಸಿದೆ. ಚೀನಾ ದೇಶದಲ್ಲಿ ಇದೀಗ ಕೊರೊನಾ ಸೋಂಕು ಉಲ್ಬಣಗೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ದೇಶದಲ್ಲಿ ಕೊವಿಡ್ ಪರಿಸ್ಥಿತಿ ಬಗ್ಗೆ ಹಿರಿಯ ಅಧಿಕಾರಿಗಳು, ತಜ್ಞರ ಜೊತೆ ಕೇಂದ್ರ ಸಚಿವ ಮನ್ಸುಖ್ ಚರ್ಚೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೆ ಈಗ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಕೂಡಾ ಚಿಂತನೆ ನಡೆಸಿದೆ. ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೂ ಹೊರದೇಶಗಳಿಂದ ನಗರಕ್ಕೆ ವಿದೇಶಿಗರು ಬರ್ತಾರೆ. ಈ ಸಂದರ್ಭದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮೊದಲ ಹಂತದಲ್ಲಿ ಯಾವುದೇ ಫೈನ್ ಇಲ್ಲದೇ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಬೇಕು. ಮಾರ್ಕೆಟ್, ಮಾಲ್, ಥಿಯೇಟರ್, ಪಾರ್ಕ್, ಮೆಟ್ರೋ, ಬಸ್, ವಿಮಾನಯಾನ ಸೇರಿದಂತೆ ಬಹುತೇಕ ಜಾಗದಲ್ಲಿ ಮಾಸ್ಕ್ ಕಡ್ಡಾಯ ಮಾಡಬೇಕೆಂಬ ನಿಲುವನ್ನು ಬಿಬಿಎಂಪಿ ವ್ಯಕ್ತಪಡಿಸಿದೆ. ಹೀಗಾಗಿ ಮಾಸ್ಕ್ ಕಡ್ಡಾಯ ಆಗುವ ಸಾಧ್ಯತೆ ಇದೆ.

suddiyaana