ಇದು ಕಾರಲ್ಲ ಟ್ರ್ಯಾಕ್ಟರ್!!‌ – ಹಳೇ ವ್ಯಾಗನ್‌ಆರ್‌ ಕಾರಿಗೆ ಹೊಸ ಟಚ್‌

ಇದು ಕಾರಲ್ಲ ಟ್ರ್ಯಾಕ್ಟರ್!!‌ – ಹಳೇ ವ್ಯಾಗನ್‌ಆರ್‌ ಕಾರಿಗೆ ಹೊಸ ಟಚ್‌

ಕಾರು ಹಳೆಯದಾಯ್ತು. ಇನ್ನು ಅದನ್ನ ಇಟ್ಟುಕೊಂಡ್ರೆ ಬರೀ ಖರ್ಚು. ಹೀಗಾಗಿ ಸೇಲ್‌ ಮಾಡಿಬಿಡೋದು ಒಳ್ಳೆದು ಅನ್ನೋದು ಅನೇಕರ ಮೈಂಡ್‌ಸೆಟ್‌. ಹೀಗಾಗಿ ಬಂದಷ್ಟು ಬರ್ಲಿ ಅಂತಾ ಕಾರು ಸೇಲ್‌ ಮಾಡಿ ಬಿಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಹಳೆಯ ವ್ಯಾಗನ್‌ಆರ್‌ ಕಾರನ್ನ ಸೇಲ್‌ ಮಾಡೋ ಬದಲು ಹೊಸ ಟಚ್‌ ಕೊಟ್ಟಿದ್ದಾನೆ.. ಈಗ ಕಾರು ಟ್ರ್ಯಾಕ್ಟರ್‌ ಆಗಿ ಬದಲಾಗಿದೆ.

ಇದನ್ನೂ ಓದಿ:ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾ ರೆಡಿ – ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್‌ಗೆ ಅವಕಾಶ

ಹೌದು, ಅಚ್ಚರಿಯಾದ್ರೂ ಸತ್ಯ. ದೇಶದಲ್ಲಿ ಮಾರುತಿ ಸುಜುಕಿ ವ್ಯಾಗನ್‌ಆರ್‌ಗೆ ಫುಲ್‌ ಡಿಮ್ಯಾಂಡ್‌ ಇದೆ. ಆದ್ರೆ ಹಳೆ ಕಾರು ಅಂದಾಗ ರಿಪೇರಿಗೆ ಬರುತ್ತೆ ಅಂತಾ ಸೇಲ್‌ ಮಾಡೋರೆ ಹೆಚ್ಚು. ಇನ್ನು ಸೆಕೆಂಡ್‌ಹ್ಯಾಂಡ್‌ ಕಾರುಗಳನ್ನ ಖರೀದಿಸುವವರ ಸಂಖ್ಯೆ ಕಡಿಮೆ. ಆದ್ರೆ ಇಲ್ಲೊಬ್ಬ ಮಾಸ್ಟರ್‌ಮೈಂಡ್‌  ವ್ಯಾಗನ್ಆರ್ ಕಾರನ್ನು ಟ್ರ್ಯಾಕ್ಟರ್ ಆಗಿ ಪರಿವರ್ತಿಸಿದ್ದಾನೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ವ್ಯಾಗನ್ಆರ್​ನ ಹಿಂದಿನ ಸೀಟಿನ ಭಾಗವನ್ನು ತೆಗೆದು ಅದಕ್ಕೆ ಟ್ರ್ಯಾಕ್ಟರ್ ಟ್ರಾಲಿಯನ್ನು ಅಳವಡಿಸಲಾಗಿದೆ. ಮುಂಭಾಗದಿಂದ ನೋಡಿದರೆ ಕಾರಿನಂತೆ ಕಾಣುವ ಈ ಟ್ರ್ಯಾಕ್ಟರ್ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ. ವ್ಯಕ್ತಿಯ ಕ್ರಿಯೇಟಿವ್​ ಐಡಿಯಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. @mrkasganjhacker895425 ಹೆಸರಿನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

Shwetha M

Leave a Reply

Your email address will not be published. Required fields are marked *