KGF ಸೈಡ್ ಹೊಡಿತಾ ಮಾರ್ಟಿನ್ – 10 ಶೇಡ್‌ಗಳಲ್ಲಿ ಧ್ರುವ ಅಬ್ಬರ
ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ

KGF ಸೈಡ್ ಹೊಡಿತಾ ಮಾರ್ಟಿನ್ – 10 ಶೇಡ್‌ಗಳಲ್ಲಿ ಧ್ರುವ ಅಬ್ಬರಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ದಸರಾ ದರ್ಬಾರ್ ನ್ನ ಥಿಯೇಟರ್‌ನಲ್ಲಿಯೇ ತೋರಿಸಿದ್ದಾರೆ. ಫ್ಯಾನ್ಸ್ ಕೊಟ್ಟಿರೋ ಈ ಸರ್‌ಪ್ರೈಸ್ ಇದೆಯಲ್ಲಾ.. ರಿಯಲಿ ಎಕ್ಸ್ಟೈಟ್‌ಮೆಂಟ್. ಯಾಕೆಂದ್ರೆ, ಈ ಸಿನಿಮಾದಲ್ಲಿ ಧುವಾತಾರ ನೋಡೋದೇ ಸಖತ್ ಥ್ರಿಲ್.. ಇಲ್ಲಿ ಫ್ಯಾನ್ಸ್ ಗೆಸ್ ಮಾಡೋಕೂ ಆಗದಂತಾ ರೀತಿಯಲ್ಲಿ ಧ್ರುವ ಸರ್ಜಾ ರೋಲ್ ಇದೆ. ಒಂದಲ್ಲ, ಎರಡಲ್ಲ, ಮೂರೂ ಅಲ್ಲ, ಬರೋಬ್ಬರಿ ಹತ್ತು ಶೇಡ್‌ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಮಾರ್ಟಿನ್ ಸಿನಿಮಾ ನೋಡಿದ ಫ್ಯಾನ್ಸ್ ಏನ್ ಹೇಳ್ತಾರೆ. ಮಾರ್ಟಿನ್ ಮುಂದೆ ಕೆಜಿಎಫ್‌ ಕೂಡಾ ಡಲ್ ಅನ್ನೋ ಟಾಕ್ ಶುರುವಾಗಿದ್ದು ಯಾಕೆ? ಈ ಬಗ್ಗೆ ಡೀಟೇಲ್ಸ್‌ ಇಲ್ಲಿದೆ.

ಇದನ್ನೂ ಓದಿ: ಮುಡಾ ಕೇಸ್‌ ನ ಮೊದಲ ಹಂತದ ತನಿಖೆ ಮುಕ್ತಾಯ – ಯಾರ್ಯಾರಿಗೆ ಕಾದಿದೆ ಗ್ರಹಚಾರ?

ಕನ್ನಡದ ಕೆಜಿಎಫ್ ಮಾರ್ಟಿನ್ ಮುಂದೆ ಡಲ್ ಆಗಿದೆ.. ಇತ್ತೀಚೆಗಷ್ಟೇ ತೆರೆಕಂಡ ದೇವರ ಸಿನಿಮಾ ಮಾರ್ಟಿನ್ ಮುಂದೆ ಏನೇನೂ ಅಲ್ಲ.. ಈ ರೇಂಜ್ ಗೆ ಬಿಲ್ಡಪ್ ಕೊಡ್ತಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್. ಯೆಸ್.. ಸುಮಾರು ಮೂರು ಸಾವಿರ ಥಿಯೇಟರ್‌ಗಳಲ್ಲಿ ಮಾರ್ಟಿನ್ ಸಿನಿಮಾ ರಿಲೀಸ್ ಆಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್​’ ಸಿನಿಮಾ ತೆರೆಕಂಡಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದು ಬರೋಬ್ಬರಿ 10 ಶೇಡ್‌ಗಳಲ್ಲಿ. ನೀವು ಚೈನಾ ಗೋಡೆ ರೀತಿಯಾದ್ರೂ ಊಹಿಸಿಕೊಳ್ಳಿ. ಇಲ್ಲಾ ಡೈನೋಸಾರ್ ಅಂತಾನೂ ಅನ್ಕೊಳ್ಳಿ. ಒಟ್ನಲ್ಲಿ ಆಕ್ಷನ್ ಪ್ರಿನ್ಸ್ ಇದ್ರಲ್ಲಿ ಪಕ್ಕಾ ಹಾಲಿವುಡ್ ರೇಂಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ ಮೈನ್ ರೋಲ್ ನಿಭಾಯಿಸಿದ್ದಾರೆ. ಈ ಸಿನಿಮಾ ಬೇರೆ ಬೇರೆ ದೇಶಗಳಲ್ಲಿ ಶೂಟಿಂಗ್​ ನಡೆದಿರೋದು ನೋಡಿದ್ರೇನೇ ಸಿನಿಮಾ ರೇಂಜ್ ಗೊತ್ತಾಗ್ತಿದೆ.

ಧ್ರುವ ಸರ್ಜಾ ಸಿನಿಮಾ ಎಂದರೆ ಅಭಿಮಾನಿಗಳು ಸಿಕ್ಕಾಪಟ್ಟೆ ಆ್ಯಕ್ಷನ್​ ಬಯಸುತ್ತಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ ಎ.ಪಿ. ಅರ್ಜುನ್​ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಪಾಕಿಸ್ತಾನದ ಇಸ್ಲಾಮಾಬಾದ್‌‌ ಪ್ರಿಸನ್‌ನಿಂದ ತೆರೆದುಕೊಳ್ಳುತ್ತದೆ ‘ಮಾರ್ಟಿನ್’ ಕಥೆ. ಜೈಲಿನ ಫೈಟ್ ಮೂಲಕ ಥ್ರಿಲ್ ನೀಡುವ ಧ್ರುವ ಸರ್ಜಾ. ಮಾರ್ಟಿನ್ ಯಾರು ಎಂಬ ಹುಡುಕಾಟದಲ್ಲಿ ಪಾಕಿಸ್ತಾನ, ಬಾಂಬೆ, ಮಂಗಳೂರು ಸುತ್ತುವ ಕಥಾನಾಯಕ ಅರ್ಜುನ್. ಫಸ್ಟ್ ಹಾಫ್ ಪೂರ್ತಿ ಈ ಹುಡುಕಾಟವೇ ತುಂಬಿದೆ. ಮಾರ್ಟಿನ್ ಯಾರು ಎಂಬ ಉತ್ತರವೂ ಇಂಟರ್‌‌ವಲ್‌ನಲ್ಲಿ ಸಿಗುತ್ತದೆ. ಎರಡು ಶೇಡ್‌ನ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಎರಡರಲ್ಲೂ ಸಂಪೂರ್ಣ ಬೇರೆ ರೀತಿಯ ಶೇಡ್ ಇದೆ. ಒಂದರಲ್ಲಿ ಲವರ್ ಬಾಯ್, ಇನ್ನೊಂದರಲ್ಲಿ ನಟೋರಿಯಸ್. ‘ಜೀವ ನೀನೇ ರೊಮ್ಯಾಂಟಿಕ್ ಹಾಡು. ಪಡ್ಡೆಗಳಿಗೆ ಕಿಕ್ ಕೊಡುವ ಐಟಂ ಸಾಂಗ್. ಪ್ರತಿ ಫ್ರೇಮ್‌ನಲ್ಲೂ ಶ್ರೀಮಂತಿಕೆ ಕಾಣಿಸಿದೆ. ಧ್ರುವ ಸರ್ಜಾ ಅವರನ್ನು ಮಾಸ್ ಆಗಿ ನೋಡಬೇಕು ಅಂತ ಬಯಸುವ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಎಂಟರಟೈನ್ ಮೆಂಟ್ ನೀಡ್ತಿದೆ. ಈ ಚಿತ್ರದ ಮುಂದೆ ಕೆಜಿಎಫ್ ಸಣ್ಣದಾಗಿ ಕಾಣುತ್ತದೆ ಅಂತಿದ್ದಾರೆ ಫ್ಯಾನ್ಸ್. ಇದ್ರಲ್ಲಿ  ಧ್ರುವ ಸರ್ಜಾ ಡೈನೋಸರ್ ಥರ ಇದ್ದಾರೆ. ದೇವರ ಸಿನಿಮಾಕ್ಕೂ ಮೀರಿದ ವಿಷಯಗಳು ಇಲ್ಲಿವೆ ಅಂತಿದ್ದಾರೆ ಫ್ಯಾನ್ಸ್. KGF ಸಿನಿಮಾ ನಂತರ ಈ ಸಿನಿಮಾನೇ ಹಿಟ್ ಆಗಲಿದೆ ಅಂತಿದ್ದಾರೆ ಫ್ಯಾನ್ಸ್.

Shwetha M

Leave a Reply

Your email address will not be published. Required fields are marked *