ಪ್ರಿಯತಮೆಯನ್ನು ಕೊಂದು ಫ್ರಿಜ್ಜಿನಲ್ಲಿಟ್ಟ ಕಿರಾತಕ – ನೌಕಾಪಡೆ ಅಧಿಕಾರಿ ಕೃತ್ಯಕ್ಕೆ ಬೆಚ್ಚಿಬಿದ್ದ ಆಂಧ್ರ

ಪ್ರಿಯತಮೆಯನ್ನು ಕೊಂದು ಫ್ರಿಜ್ಜಿನಲ್ಲಿಟ್ಟ ಕಿರಾತಕ – ನೌಕಾಪಡೆ ಅಧಿಕಾರಿ ಕೃತ್ಯಕ್ಕೆ ಬೆಚ್ಚಿಬಿದ್ದ ಆಂಧ್ರ

  ಆಂಧ್ರಪ್ರದೇಶದ  ವಿಶಾಖಪಟ್ಟಣದಲ್ಲಿ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.  35 ವರ್ಷದ ನೌಕಾಪಡೆಯ   ಅಧಿಕಾರಿಯೊಬ್ಬರು ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ದೇಹದ ಭಾಗವನ್ನ ಹೊರ ಹಾಕೋಕೆ ಯತ್ನಿಸಿದ ಘಟನೆ ನಡೆದಿದೆ.  ಮೃತ ಯುವತಿಯನ್ನು ಮೌನಿಕಾ ಎಂದು ಗುರುತಿಸಲಾಗಿದೆ.

 ಐಎನ್‌ಎಸ್  ದೇಗಾದಲ್ಲಿ ನಿಯೋಜಿತರಾಗಿರುವ ನೌಕಾಪಡೆಯ ಅಧಿಕಾರಿ ಚಿಂತಾದ ರವೀಂದ್ರ, 2021 ರಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ   29 ವರ್ಷದ ಪೋಲಿಪಲ್ಲಿ ಮೌನಿಕಾರನ್ನ ಭೇಟಿಯಾಗಿ ಪ್ರೀತಿ ಮಾಡುತ್ತಿದ್ದ.  ರವೀಂದ್ರಗೆ ಆಗಲೇ ಮದುವೆಯಾಗಿದ್ದರೂ ಸಹ ಯುವತಿಯನ್ನು ಆಗಾಗ್ಗೆ ವಿಶಾಖಪಟ್ಟಣಂನ ವಿವಿಧ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು. ಹೆಂಡತಿ ಇಲ್ಲದ ಸಮಯದಲ್ಲಿ ರವೀಂದ್ರ ಮೌನಿಕಾಳನ್ನು ಮನೆಗೆ ಆಹ್ವಾನಿಸಿದ್ದ. ಕೆಲ ವಿಷಯಗಳ ಬಗ್ಗೆ ಅವರಿಬ್ಬರ ನಡುವೆ ಕಲಹ ಉಂಟಾಗಿದೆ. ಸಿಟ್ಟಲ್ಲಿ ರವೀಂದ್ರ ಮೌನಿಕಾಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮೌನಿಕಾ ಸಾವನ್ನಪ್ಪಿದ್ದಾಳೆ. ಆಕೆಯ ಮೃತದೇಹವನ್ನು ರವೀಂದ್ರ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಪ್ಯಾಕ್ ಮಾಡಿ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದಾನೆ.

ಇದನ್ನೂ ಓದಿ: ಮುಂಬೈ ಗ್ರಹಣ ಬಿಡಿಸಿದ ಪಾಂಡ್ಯ – ರೋಹಿತ್ & ರಿಕಲ್ಟನ್ ಡೆಡ್ಲಿ ಓಪನರ್ಸ್

ಕೊಲೆ ಮಾಡಿದ ಬಳಿಕ ಆತನೇ ಪೊಲೀಸ್‌ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ಮೌನಿಕಾ ತನ್ನಿಂದ 3.5 ಲಕ್ಷ ರೂ.ಗಳನ್ನು ಪಡೆದಿದ್ದಳು ಮತ್ತು ತನ್ನ ಹೆಂಡತಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದಳು ಎಂದು ರವೀಂದ್ರ ತಿಳಿಸಿದ್ದಾನೆ. ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿದಾಗ, ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದವು. ಮೌನಿಕಾಳ ತಲೆ ಕಾಣೆಯಾಗಿತ್ತು. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Kishor KV