ಐದು ಬಾರಿ ಮದುವೆ.. 3 ನೇ ಗಂಡನೊಂದಿಗೆ ಜೀವನ..! – 2024ರ ಚುನಾವಣೆಗೆ ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿಕೊಟ್ಟ ಖ್ಯಾತ ನಟಿ!

ಐದು ಬಾರಿ ಮದುವೆ.. 3 ನೇ ಗಂಡನೊಂದಿಗೆ ಜೀವನ..! – 2024ರ ಚುನಾವಣೆಗೆ ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿಕೊಟ್ಟ ಖ್ಯಾತ ನಟಿ!

ಪಾಕಿಸ್ತಾನದಲ್ಲಿ ಫೆಬ್ರವರಿ 2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಮುಂಬರುವ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹೈವೋಲ್ಟೇಜ್ ಸ್ಪರ್ಧೆಗೆ ಸಜ್ಜಾಗುತ್ತಿವೆ. ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಸರ್ಕಸ್‌ ಮಾಡ್ತಿವೆ. ಇದೀಗ ಪಾಕಿಸ್ತಾನದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖ್ಯಾತ ನಟಿ ಇದೀಗ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ.

ಹೌದು, ಪಾಕಿಸ್ತಾನದ ಚಲನಚಿತ್ರೋದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪ್ರಸಿದ್ಧ ನಟಿ ನೂರ್ ಬುಖಾರಿ. ಜೀವನದಲ್ಲಿ ಐದು ಬಾರಿ ಮದುವೆಯಾಗಿರುವ ನಟಿ ನೂರ್ ಬುಖಾರಿ ತನ್ನ ಮೂರನೇ ಗಂಡನನ್ನು 5ನೇ ಬಾರಿಗೆ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. ಗಂಡ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಈಗ 49 ವರ್ಷ ಆದರೂ ಆಕೆಯ ಸೌಂದರ್ಯ ಮಾತ್ರ ಕುಗ್ಗಿಲ್ಲ. ಇದೀಗ ಆಕೆ ಕೂಡ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ.  ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ನೂರ್ ಬುಖಾರಿ ಸ್ಪರ್ಧಿಸುತ್ತಿದ್ದಾರೆ. ಇಸ್ತೇಕಾಮ್-ಎ-ಪಾಕಿಸ್ತಾನ್ ಪಕ್ಷಕ್ಕೆ (ಐಪಿಪಿ) ಸೇರಿದ ನಂತರ, ಅವರು ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ – ವಂದೇ ಭಾರತ್ ರೈಲುಗಳಿಗೂ ಚಾಲನೆ

ನೂರ್ ಬುಖಾರಿ ಪಾಕಿಸ್ತಾನದ ಮಾಜಿ ನಟಿ, ನಿರ್ದೇಶಕಿ, ರೂಪದರ್ಶಿ ಮತ್ತು ದೂರದರ್ಶನ ನಿರೂಪಕಿ. ನೂರ್ 22 ವರ್ಷಗಳಲ್ಲಿ 44 ಉರ್ದು ಮತ್ತು 20 ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  2017ರಲ್ಲಿ ನಟನಾ ವೃತ್ತಿಗೆ ವಿದಾಯ ಹೇಳಿದರು. ನೂರ್ ಅವರು ಪಾಕಿಸ್ತಾನಿ ಚಲನಚಿತ್ರೋದ್ಯಮದ ವಿವಿಧ ಲಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಪ್ರಸಿದ್ಧ ಪಾಕಿಸ್ತಾನಿ ನಟಿ, ಅದರಲ್ಲಿ ಅತ್ಯಂತ ಪ್ರಸಿದ್ಧವಾದದ್ದು ‘ಮುಜೆ ಚಂದ್ ಚಾಹಿಯೆ’. ಅವರ ಚಲನಚಿತ್ರಗಳಲ್ಲದೆ, ನೂರ್ ಕೆಲವು ಪಾಕಿಸ್ತಾನಿ ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಟಿವಿ ಜಾಹೀರಾತುಗಳು ಮತ್ತು ಫ್ಯಾಷನ್ ಪ್ರಚಾರಕ್ಕಾಗಿ ಮಾಡೆಲಿಂಗ್ ಮಾಡಿದ್ದಾರೆ. ಅವರು 2000 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಮಾಜಿ ನಟಿ 2017 ರಲ್ಲಿ ಮನರಂಜನಾ ಉದ್ಯಮವನ್ನು ತ್ಯಜಿಸುವುದಾಗಿ ಘೋಷಿಸಿದ ನಂತರ   ಆಕೆ ತನ್ನ ಧಾರ್ಮಿಕ ರೂಪಾಂತರವನ್ನು ಹಂಚಿಕೊಳ್ಳಲು YouTube ಚಾನಲ್ ಅನ್ನು ಪ್ರಾರಂಭಿಸಿದಳು. ಅದರ ನಂತರ, ಅವರ ರಾಜಕೀಯ ಪ್ರಯಾಣವು ಫೆಬ್ರವರಿ 8, 2022 ರಂದು ತನ್ನ ಪತಿ ಅವನ್ ಚೌಧರಿಯ ಇಸ್ತಕಾಮ್-ಎ-ಪಾಕಿಸ್ತಾನ್ ಪಾರ್ಟಿ (ಐಪಿಪಿ) ಗೆ ಸೇರಿದಾಗ ಪ್ರಾರಂಭವಾಯಿತು. IPP ಮಹಿಳೆಯರಿಗಾಗಿ ಮೀಸಲಿಟ್ಟ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ನೂರ್ ಬುಖಾರಿ ಅವರು ಪಂಜಾಬ್‌ನ ಪ್ರಾಂತೀಯ ಚುನಾವಣಾ ಆಯುಕ್ತರ (ಪಿಇಸಿ) ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

Shwetha M