ಡಿವೋರ್ಸ್‌, ಅಕ್ರಮ ಸಂಬಂಧ ಕೇಸ್‌ಗಳಿಗಾಗಿ ಕೋರ್ಟ್‌ಗೆ ಅರ್ಚಕರ ಅಲೆದಾಟ – ಈ  ದೇಗುಲದಲ್ಲಿ ಮದುವೆಯೇ ಬಂದ್

ಡಿವೋರ್ಸ್‌, ಅಕ್ರಮ ಸಂಬಂಧ ಕೇಸ್‌ಗಳಿಗಾಗಿ ಕೋರ್ಟ್‌ಗೆ ಅರ್ಚಕರ ಅಲೆದಾಟ – ಈ  ದೇಗುಲದಲ್ಲಿ ಮದುವೆಯೇ ಬಂದ್

ಮನೆಯಲ್ಲಿ ಒಪ್ಪಿಲ್ಲ ಅಂದ್ರೆ ಪ್ರೇಮಿಗಳು ದೇವಸ್ಥಾನಗಳಲ್ಲಿ ಮದುವೆ ಆಗ್ತಾರೆ. ಆದ್ರೀಗ ಇಲ್ಲೊಂದು ಕಡೆ ದೇವಸ್ಥಾನದಲ್ಲಿ ಮದುವೆಯನ್ನೇ ಬಂದ್‌ ಮಾಡಲಾಗಿದೆ. ದೇಗುಲದಲ್ಲಿ ವಿವಾಹ ಸಮಾರಂಭ ನಿಲ್ಲಿಸಲು ಅರ್ಚಕರು, ಆಡಳಿತ ಮಂಡಳಿ ನೀಡಿದ ಕಾರಣ ಕೇಳಿದ್ರೆ ನೀವು ಶಾಕ್‌ ಆಗೋದು ಪಕ್ಕಾ!

ಇದನ್ನೂ ಓದಿ: Word Power Is World Power – ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ ಪೋಸ್ಟ್‌!

ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರಿನ ಹಲಸೂರು ದೇಗುಲದಲ್ಲಿ ಮದುವೆಗೆ ಅನುಮತಿ ನೀಡುತ್ತಿಲ್ಲ ಎಂದು ವರನೋರ್ವ ಸಿಎಂ ಕಚೇರಿಗೆ ಪತ್ರ ಬರೆದಿದ್ದಾರೆ. ಸಿಎಂಗೆ ಬರೆದ ಪತ್ರದಲ್ಲಿ, ವರನೋರ್ವ ಹಲಸೂರು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನೀಡುತ್ತಿಲ್ಲ ದೂರಿದ್ದಾರೆ. ಈ ಸಂಬಂಧ ಸಿಎಂ ವಿಶೇಷ ಕರ್ತವ್ಯಾಧಿಕಾರಿಗಳು ದೇವಸ್ಥಾನಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಇದಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನೀಡಿರುವ ಕಾರಣ ಶಾಕ್‌ ಆಗುವಂತೆ ಆಗಿದೆ.

ಕಳೆದ ಐದಾರು ವರ್ಷದಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮದುವೆ ನಿಲ್ಲಿಸಲಾಗಿದೆ. ಮದುವೆಯಾದ ಜೋಡಿಗಳ ಡಿವೋರ್ಸ್, ಅಕ್ರಮ ಸಂಬಂಧ ಕರಾಳತೆ, ಸುಳ್ಳು ದಾಖಲೆ ಕೊಟ್ಟು ಮದುವೆಯಾಗಿದ್ದಕ್ಕೆ ಸಮಸ್ಯೆ ಸೃಷ್ಟಿಯಾಗಿ ಈಗ ಅರ್ಚಕರೇ ನ್ಯಾಯಲಯದ ಕಟಕಟೆಯಲ್ಲಿ ನಿಲ್ಲಬೇಕಾಗಿದೆ. ಹೀಗಾಗಿ ಅರ್ಚಕರು  ಮದುವೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ದೇವಸ್ಥಾನದಲ್ಲಿ ಮದುವೆಯನ್ನೇ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೇವಸ್ಥಾನದ ಟ್ರಸ್ಟಿಗಳು, ಅರ್ಚಕರು ಮಾತಾಡಿ, ವ್ಯಕ್ತಿಯೋರ್ವ ತನ್ನ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಇಲ್ಲಿ ಮದುವೆಯಾಗಿ ಆ ಸ್ನೇಹಿತನಿಂದಲೇ ಕೊಲೆಗೀಡಾಗಿದ್ದ. ಅಲ್ಲದೇ ಅಪ್ಪ-ಅಮ್ಮ ಅಂತ ಸುಳ್ಳು ಹೇಳಿ ಮದುವೆಯಾಗಿರೋ ಕೇಸಲ್ಲಿ ಒರಿಜಿನಲ್ ಅಪ್ಪ-ಅಮ್ಮನೇ ಬಂದು ಕೇಸ್ ಹಾಕಿದ್ದಾರೆ. ಹೀಗಾಗಿ, ಸೋಮೇಶ್ವರ ದೇಗುಲದಲ್ಲಿ ಮದುವೆ ಸಹವಾಸವೇ ಬೇಡ ಅಂದಿದ್ದಾರೆ.

Shwetha M