ಪ್ರವಾಸಕ್ಕೆ ಕರೆದೊಯ್ದು ಪ್ರೇಯಸಿಯನ್ನೇ ಕೊಂದ ಪಾಪಿ – ಬಗೆದಷ್ಟೂ ಬಯಲಾಗ್ತಿದೆ ಕೊಲೆ ರಹಸ್ಯ..!

ಪ್ರವಾಸಕ್ಕೆ ಕರೆದೊಯ್ದು ಪ್ರೇಯಸಿಯನ್ನೇ ಕೊಂದ ಪಾಪಿ – ಬಗೆದಷ್ಟೂ ಬಯಲಾಗ್ತಿದೆ ಕೊಲೆ ರಹಸ್ಯ..!

ರಾಷ್ಟ್ರರಾಜಧಾನಿಯಲ್ಲಿ ಪ್ರಿಯಕರನೇ ಪ್ರೇಯಸಿಯನ್ನ ಕೊಂದು ಫ್ರಿಡ್ಜ್​ನಲ್ಲಿ ಹೂತಿಟ್ಟಿದ್ದ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ತನಿಖೆ ಆಳಕ್ಕಿಳಿದಂತೆಲ್ಲಾ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ. ನಿಕ್ಕಿ ಯಾದವ್​ನನ್ನ ಕೊಲೆ ಮಾಡಿದ್ದ ಸಾಹಿಲ್ ಗೆಹ್ಲೋಟ್ ಮರುದಿನವೇ ಮತ್ತೊಬ್ಬಳನ್ನ ಮದುವೆಯಾಗಿದ್ದ. ಸದ್ಯ ಸಾಹಿಲ್ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದೆ.

ಫೆಬ್ರವರಿ 9ರಂದು ತನ್ನ ಮನೆಯವರು ಗೊತ್ತು ಮಾಡಿದ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಾಹಿಲ್ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ. ಫೆಬ್ರವರಿ 10ರಂದು ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ನಿಕ್ಕಿಯನ್ನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಬಳಿಕ ನೈಋತ್ಯ ದೆಹಲಿಯಲ್ಲಿರುವ ತನ್ನದೇ ಡಾಬಾದಲ್ಲಿ ಆಕೆ ದೇಹವನ್ನ ತುಂಬಿ ಎಸ್ಕೇಪ್ ಆಗಿದ್ದ. ಮರುದಿನವೇ ಅಂದ್ರೆ ಫೆಬ್ರವರಿ 11ರಂದು ಮದುವೆ ಮಾಡಿಕೊಂಡಿದ್ದ. ಫೆಬ್ರವರಿ 14ರಂದು ಫ್ರಿಡ್ಜ್​ನಲ್ಲಿ ನಿಕ್ಕಿ ಮೃತದೇಹ ಪತ್ತೆಯಾದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : 50 ಲೀ. ಸಾಮರ್ಥ್ಯದ ಜಡ್ಜ್ ಕಾರಿಗೆ 57 ಲೀ. ಪೆಟ್ರೋಲ್ ತುಂಬಿ ಮೋಸ – ಪೆಟ್ರೋಲ್ ಬಂಕ್ ಸೀಲ್..!

ದೆಹಲಿಯ ಉತ್ತಮ್ ನಗರದಲ್ಲಿ ಸಾಹಿಲ್ ಹಾಗೂ ನಿಕ್ಕಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸ ಮಾಡ್ತಿದ್ರು. ಫೆಬ್ರವರಿ 10ರಂದು ಸಾಹಿಲ್ ಮದುವೆಗೂ ಮುನ್ನವೇ ನಿಕ್ಕಿ ಟ್ರಿಪ್ ಹೋಗಲು ಪ್ಲ್ಯಾನ್ ಮಾಡಿದ್ದಳು. ಆದ್ರೆ ಸಾಹಿಲ್​ಗೆ ಮದುವೆ ವಿಚಾರದಲ್ಲಿ ಎರಡು ಮನಸ್ಥಿತಿ ಇತ್ತು. ನಿಕ್ಕಿ ಜೊತೆಯೇ ಇರಬೇಕೋ ಅಥವಾ ಮನೆಯವರು ನಿಶ್ಚಯ ಮಾಡಿದ ಯುವತಿಯನ್ನ ಮದುವೆಯಾಗಬೇಕೋ ಎಂಬ ಗೊಂದಲದಲ್ಲಿದ್ದ. ಈ ನಡುವೆಯೇ ಫೆಬ್ರವರಿ 9ರಂದು ನಿಶ್ಚಿತ್ತಾರ್ಥ ಮುಗಿಸಿಕೊಂಡು ನಿಕ್ಕಿ ಮನೆಗೆ ಬಂದಿದ್ದ. ಈ ವೇಳೆ ಟ್ರಿಪ್ ಪ್ಲ್ಯಾನ್ ಮಾಡಿದ್ದ ನಿಕ್ಕಿ ಗೋವಾಗೆ ಹೋಗಲು ತಯಾರಿ ನಡೆಸಿದ್ದಳು. ಆದ್ರೆ ಟಿಕೆಟ್ ಬುಕ್ ಆಗಿರಲಿಲ್ಲ. ಕೊನೆಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದಳು.

ಇಬ್ಬರು ಕೂಡ ಕಾರಿನಲ್ಲೇ ಕಾಶ್ಮೀರ್ ಗೇಟ್ ತಲುಪಿದ್ರು. ಇತ್ತ ಸಾಹಿಲ್ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿದ್ದು ಮಗ ಮಿಸ್ಸಿಂಗ್ ಆಗಿದ್ದಕ್ಕೆ ಪೋಷಕರು ಪದೇಪದೆ ಕರೆ ಮಾಡುತ್ತಿದ್ದರು. ಹೀಗಾಗಿ ಸಾಹಿಲ್ ಏನು ಮಾಡಬೇಕು ಅನ್ನೋದು ಗೊತ್ತಾಗದೆ ಒದ್ದಾಡುತ್ತಿದ್ದ. ಇತ್ತ ನಿಕ್ಕಿ ಕೂಡ ಜಗಳ ಮಾಡಿದ್ದರಿಂದ ಕೊನೆಗೆ ನಿಕ್ಕಿಯನ್ನೇ ಕೊಲೆ ಮಾಡಿ ತನ್ನದೇ ಡಾಬಾದ ಫ್ರಿಡ್ಜ್​ನಲ್ಲಿ ಶವ ಇಟ್ಟಿದ್ದ. ಬಳಿಕ ನಿಕ್ಕಿ ಮೊಬೈಲ್​ನಲ್ಲಿದ್ದ ಡೇಟಾವನ್ನ ಡಿಲೀಟ್ ಮಾಡಿ ಸೀದಾ ತನ್ನ ಮನೆಗೆ ಹೋಗಿದ್ದ. ಬಳಿಕ ಏನೂ ಗೊತ್ತಿಲ್ಲದವನಂತೆ ಮದುವೆ ಮಾಡಿಕೊಂಡಿದ್ದ. ಸದ್ಯ ಇಬ್ಬರ ಫೋನ್​ಗಳನ್ನ ವಶಕ್ಕೆ ಪಡೆದಿರೋ ಪೊಲೀಸರು ಫೋರೆನ್ಸಿಕ್ ಟೆಸ್ಟ್​ಗೆ ಕಳುಸಿದ್ದು ಡಾಟಾ ರಿಕವರಿ ಮಾಡಿಸುತ್ತಿದ್ದಾರೆ.

suddiyaana