ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್!
ನವವಿವಾಹಿತರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್ ಇದೆ. ಇನ್ನುಮುಂದೆ ವಿವಾಹ ನೋಂದಣಿ ಪ್ರಮಾಣ ಪತ್ರಕ್ಕಾಗಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಿಲ್ಲ. ಇನ್ನುಮುಂದೆ ಮನೆಯಲ್ಲಿಯೇ ಕೂತು ಕೆಲಸ ಪ್ರಮಾಣ ಪತ್ರ ಪಡೆಯಬಹುದು.
ಇಷ್ಟುದಿನ ವಿವಾಹ ಪ್ರಮಾಣ ಪತ್ರಕ್ಕಾಗಿ ಸಾಕಷ್ಟು ಪ್ರಕ್ರಿಯೆಗಳಿತ್ತು. ಹಲವು ಬಾರಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಿತ್ತು. ಆದರೆ ಇನ್ನುಮುಂದೆ ಮನೆಯಲ್ಲೇ ಕುಳಿತು ಪ್ರಮಾಣ ಪತ್ರ ಪಡೆಯಬಹುದು. ಆನ್‌ಲೈನ್‌ನಲ್ಲಿ ವಿವಾಹ ಪತ್ರವನ್ನು ನೋಂದಣಿ ಮಾಡಿಸಿಕೊಳ್ಳಬಹುದು. `ಕಾವೇರಿ’ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು.
ಸರ್ಕಾರ ಪರಿಚಯಿಸಿರುವ ಕಾವೇರಿ ತಂತ್ರಾಂಶದ ಮೂಲಕ ವೆಬ್‌ಸೈಟ್‌ನಲ್ಲಿ ದಂಪತಿಗಳು ತಮ್ಮ ಮದುವೆ ಫೋಟೋ, ಆಧಾರ್ ಸಂಖ್ಯೆ, ಮದುವೆ ಆಮಂತ್ರಣ ಪತ್ರಿಕೆಯ ದಾಖಲಾತಿಯನ್ನು ಮನೆಯಲ್ಲಿ ಕೂತೇ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಿ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು.
ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಇವರೆಗೆ 100 ಮದುವೆ ನಡೆದರೆ ಅದ್ರಲ್ಲಿ 30 ದಂಪತಿಗಳು ಮಾತ್ರ ವಿವಾಹ ಪ್ರಮಾಣ ಪತ್ರ ಪಡೆಯುತ್ತಿದ್ದರು. ಹೀಗಾಗಿ ವ್ಯಾಜ್ಯ ಅಥವಾ ಕಾನೂನಾತ್ಮಕ ಸಮಸ್ಯೆ ಬರುತ್ತಿತ್ತು. ಜನರಿಗೆ ಸರಳೀಕರಣದ ಸೇವೆ ನೀಡುವ ಸಲುವಾಗಿ ಈ ಯೋಜನೆ ಜಾರಿಯಾಗಿದೆ. ವಿವಾಹ ಪ್ರಮಾಣ ಪತ್ರದ ಜೊತೆಗೆ ಸದ್ಯ ಸಬ್‌ರಿಜಿಸ್ಟ್ರಾರ್ ಕಚೇರಿಯ ಅನೇಕ ಸೇವೆಗಳನ್ನು ಆನ್‌ಲೈನ್ ಮೂಲಕ ಜನರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ