ವರನಿಗೆ ಚಾಕು ಚುಚ್ಚಿದ ಪ್ರಿಯಕರ! – ನನ್ನನ್ನೇ ಮದುವೆಯಾಗು ಎಂದು ಆಸ್ಪತ್ರೆಗೆ ಬಂದ ವಧು!

ವರನಿಗೆ ಚಾಕು ಚುಚ್ಚಿದ ಪ್ರಿಯಕರ! – ನನ್ನನ್ನೇ ಮದುವೆಯಾಗು ಎಂದು ಆಸ್ಪತ್ರೆಗೆ ಬಂದ ವಧು!

ಮದುವೆ ಮಂಟಪಕ್ಕೆ ಹೊರಟ್ಟಿದ್ದ ವರನ ಮೇಲೆ ವಧುವಿನ ಮಾಜಿ ಪ್ರಿಯಕರ ಅಟ್ಯಾಕ್‌ ಮಾಡಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಇದೀಗ ತನ್ನನ್ನು ಮದುವೆಯಾಗು ಎಂದು ವಧು ಕೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಹಿಟ್ ಮ್ಯಾನ್ ರೋಹಿತ್ ದಾಖಲೆ ಪುಡಿ ಮಾಡಿದ ಐರ್ಲೆಂಡ್ ನಾಯಕ ಪಾಲ್ ಸ್ಟಿರ್ಲಿಂಗ್

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮದುವೆಯಾಗಬೇಕಿದ್ದ ವರನಿಗೆ ವಧು ನಯನಾಳ ಪ್ರಿಯಕರ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ರವೀಶ್ ಸದ್ಯ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಘಟನೆಯಿಂದಾಗಿ ನಡೆಯಬೇಕಿದ್ದ ಮದುವೆ ಅರ್ಧಕ್ಕೇ ಮುರಿದು ಬಿದ್ದಿದೆ. ಈ ಬೆನ್ನಲ್ಲೇ ನಯನಾ ಆಸ್ಪತ್ರೆಗೆ ಎಂಟ್ರಿಕೊಟ್ಟಿದ್ದಾಳೆ. ತನ್ನನ್ನು ಮದುವೆಯಾಗು ಎಂದು ಕೇಳಿಕೊಂಡಿದ್ದಾಳೆ.

ಆಸ್ಪತ್ರೆಗೆ ಬಂದ ನಯನಾ, ದಯವಿಟ್ಟು ನನ್ನನ್ನು ಮದುವೆಯಾಗು ಎಂದು ಕೇಳಿಕೊಂಡಿದ್ದಾಳೆ. ಆದ್ರೆ, ಪ್ರಾಣಾಪಾಯದಿಂದ ಪಾರಾಗಿರುವ ರವೀಶ್ ಮದುವೆಯಾಗಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಮದುವೆಯಾಗಲು ಬಂದಾಗಲೇ ನನ್ನ ಪ್ರಾಣ ತೆಗೆಯಲು ಯತ್ನಿಸಿದ್ದಾರೆ. ಒಂದು ವೇಳೆ ನಾನು ಈಕೆಯನ್ನೇ ಮದುವೆಯಾದರೆ ಮುಂದೆ ಇದೇ ರೀತಿ ತೊಂದರೆಯಾದಾಗ ನನ್ನ ಪ್ರಾಣಕ್ಕೆ ಯಾರು ಹೊಣೆ? ಇಂತಹ ಆತಂಕದ ನಡುವೆ ಸಂಸಾರ ಮಾಡಲು ಸಾಧ್ಯವಿಲ್ಲಎಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಸದ್ಯ ಈ ಮದುವೆ ಮುರಿದು ಬಿದ್ದಿದೆ.

Shwetha M