ವಧುವಿಗೆ 12ನೇ ತರಗತಿಯಲ್ಲಿ ಕಡಿಮೆ ಮಾರ್ಕ್ಸ್ – ತಾಳಿ ಕಟ್ಟಲ್ಲ ಅಂದ ವರನಿಂದಾಗಿ ಮದುವೆ ಕ್ಯಾನ್ಸಲ್
ಮದುವೆ ಅಂದಮೇಲೆ ವಧು ವರ ಸಂಬಂಧಿಕರ ಸಂಭ್ರಮ ಸೇರಿದಂತೆ ಸಂತಸದ ವಾತಾವರಣ ಇರುತ್ತದೆ. ಆದರೆ, ಉತ್ತರ ಪ್ರದೇಶದ ಕನೌಜ್ ಅಲ್ಲಿ ಮದುವೆ ಮನೆಯಲ್ಲಿ ಇನ್ನೇನು ವಿವಾಹ ಕಾರ್ಯಕ್ರಮ ಸಾಂಗವಾಗಿ ನೆರವೇರುತ್ತೆ ಅಂದಾಗ ವಧುವಿನ ಕಡೆಯವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ವಧುವಿಗೆ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದೆ ಅಂತಾ ವರ ತಗಾದೆ ತೆೆಗೆದಿದ್ದಾನೆ. ಕಡಿಮೆ ಅಂಕ ತೆಗೆದ ಹುಡುಗಿ ನನಗೆ ಬೇಡ. ನಾನು ತಾಳಿಕಟ್ಟುವುದಿಲ್ಲ ಎಂದು ರಾದ್ಧಾಂತ ಮಾಡಿದ್ದಾನೆ. ಎರಡೂ ಕಡೆಯವರು ಸೇರಿ ಮಾತುಕತೆ ನಡೆಸಿದ ನಂತರ ನೀವೇನಾದರೂ ವರದಕ್ಷಣೆ ಜಾಸ್ತಿ ಕೊಟ್ಟರೆ ಮಾತ್ರ ಮದುವೆಯಾಗುತ್ತೇನೆ ಎಂದಿದ್ದಾನೆ ಎಂದು ವಧುವಿನ ತಂದೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಹೇಳಿದ್ದಷ್ಟು ವಧುದಕ್ಷಿಣೆ ಕೊಟ್ಟಿಲ್ಲ ಎಂದು ಸಿಟ್ಟಿಗೆದ್ದ ಮದುಮಗಳು – ಕೊನೇ ಕ್ಷಣದಲ್ಲಿ ಮದುವೆಯೇ ಕ್ಯಾನ್ಸಲ್
ವರನ ಕಡೆಯವರು ವರದಕ್ಷಿಣೆ ಜಾಸ್ತಿ ಕೇಳಿದ್ದಾರೆ ಎಂದು ಆರೋಪಿದ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಂತರ ಪೊಲೀಸರು ಎರಡು ಕುಟುಂಬದವರ ಜೊತೆ ಮಾತುಕತೆ ಮೂಲಕ ಸಂಧಾನ ಮಾಡುವ ಪ್ರಯತ್ನ ಮಾಡಿದರು. ತಿರ್ವ ಕೊತ್ವಾಲಿ ವಲಯದ ಪೊಲೀಸ್ ಠಾಣೆ ಪ್ರಭಾರಿ ಪಿ.ಎನ್.ಬಾಜಪೈ ಸಂಧಾನದ ಪ್ರಯತ್ನ ಮಾಡಿದ್ದಾರೆ. ಆದರೆ, ಎರಡು ಕುಟುಂಬದವರು ಪಟ್ಟು ಸಡಿಲಿಸುವ ಲಕ್ಷಣ ಕಂಡು ಬಂದಿಲ್ಲ. ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈಗ ವರನ ಕುಟುಂಬವು ಹುಡುಗಿ 12ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ನೆಪ ಹೇಳಿ ಮದುವೆ ಮುರಿದುಕೊಂಡಿದ್ದಾರೆ. ಮದುವೆ ಮುರಿದುಕೊಳ್ಳಲು ಇಂಥಾ ಕಾರಣವೂ ಕೊಡ್ತಾರಾ ಅಂತಾ ಜನ ಮಾತಾಡಿಕೊಳ್ಳುವಂತಾಗಿದೆ.