ಮಾರ್ಕ್ ಫಸ್ಟ್ ಲಿರಿಕಲ್ ವಿಡಿಯೋ ರಿಲೀಸ್ – ಸೈಕ್ ಸೈತಾನ್ ಅಂತ ಅಬ್ಬರಿಸಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೊನೆಗೂ ಫ್ಯಾನ್ಸ್ ಕಾಯ್ತಿದ್ದ ಸಮಯ ಬಂದೇ ಬಿಟ್ಟಿದೆ. ಮಾರ್ಕ್ ಚಿತ್ರದ ಫಸ್ಟ್ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಅಕ್ಟೋಬರ್-6 ರಂದು ಸಂಜೆ 6 ಗಂಟೆಗೆ ಈ ಹಾಡು ರಿಲೀಸ್ ಆಗಿದೆ.
ಇದನ್ನೂ ಓದಿ:ನಿಧಿ ಜೊತೆ ಕರ್ಣನ ಮದುವೆ ನಡೆಯಲ್ವಾ? – ವಾರ ಪೂರ್ತಿ ಪ್ರಸಾರವಾಗಲಿದೆ ಮದುವೆ ಸಂಭ್ರಮ
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಮೇಲೆ ಅಭಿಮಾನಿಗಳು ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಒಳ್ಳೆ ಹಾಡುಗಳೇ ಇವೆ. ಇವುಗಳಲ್ಲಿ ಈಗ ಒಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಮಾರ್ಕ್ ಚಿತ್ರದ ಈ ಹಾಡಿನಲ್ಲಿ ಹೀರೋ ಸುದೀಪ್ ಪಾತ್ರದ ಬಗ್ಗೆ ವಿವರಿಸಲಾಗಿದೆ. ಇದರಲ್ಲಿ ಕಿಚ್ಚನ ರೋಲ್ ಹೇಗಿದೆ ಅನ್ನೋದು ಕೂಡಾ ರಿವೀಲ್ ಆಗಿದೆ. ಸೈಕ್ ಸೈತಾನ್ ಯಾರ್ ಗೊತ್ತಾ ಅನ್ನೋ ಸಾಲುಗಳೇ ಇವೆ. ಈ ಹಾಡನ್ನ ಕೇಳಿದ್ರೆ ಕಾಲು ಕುಣಿಸಬೇಕು ಅನಿಸುತ್ತದೆ. ಆ ರೀತಿನೇ ಅಜನೀಶ್ ಲೋಕನಾಥ್ ಕೊಟ್ಟಿದ್ದಾರೆ. ಸುದೀಪ್ ಪಾತ್ರದ ಮ್ಯಾನರಿಸಂ ಅನ್ನು ಇದು ಬಿಂಬಿಸುವಂತೆನೂ ಇದೆ. ಅನೂಪ್ ಭಂಡಾರಿ ಈ ಒಂದು ಹಾಡನ್ನ ಬರೆದಿದ್ದಾರೆ. ಆದರೆ, ಈ ಒಂದು ಹಾಡನ್ನ ಮೂರು ಜನ ಹಾಡಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಇದನ್ನ ಹಾಡಿದ್ದಾರೆ. ವಿಜಯ್ ಪ್ರಕಾಶ್ ಅವರಿಂದಲೇ ಈ ಹಾಡು ಶುರು ಆಗುತ್ತದೆ. ಆದರೆ, ಇದರಲ್ಲಿ “ದಾದಾ ಯಾರ್ ಗೊತ್ತಾ? ಸೈಕ್ ಯಾರ್ ಗೊತ್ತಾ? ಅನ್ನುವ ಲೈನ್ ಬರುತ್ತವೆ. ಅವುಗಳಿಗೆ ಅಜನೀಶ್ ಲೋಕನಾತ್ ಮತ್ತು ಅನಿರುದ್ಧ ಶಾಸ್ತ್ರಿ ಧ್ವನಿ ಆಗಿದ್ದಾರೆ.
ಮಾರ್ಕ್ ಸಿನಿಮಾವನ್ನ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಅಂದುಕೊಂಡಂತೆ ತುಂಬಾನೆ ಫಾಸ್ಟ್ ಆಗಿಯೇ ಕೆಲಸ ಮಾಡುತ್ತಿದ್ದಾರೆ. 7 ತಿಂಗಳಲ್ಲಿಯೇ ಇಡೀ ಚಿತ್ರ ಪೂರ್ಣಗೊಳಿಸುವ ಪ್ಲಾನ್ ಮಾಡಿಕೊಂಡಿದ್ದಾರೆ.

ನೋಡಿರಿ

