ಮಾರ್ಕ್‌ಗೆ ಫುಲ್ ಮಾರ್ಕ್ಸ್ – MAX ಕಥೆಯಂತೆ ಇದ್ಯಾ?, MARK ರಿವ್ಯೂ

ಮಾರ್ಕ್‌ಗೆ ಫುಲ್ ಮಾರ್ಕ್ಸ್ –  MAX ಕಥೆಯಂತೆ ಇದ್ಯಾ?, MARK ರಿವ್ಯೂ

ಮಾರ್ಕ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಮಾರ್ಕ್‌ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೊಸ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟ ಸುದೀಪ್‌ರನ್ನ ನೋಡಿ ಫ್ಯಾನ್ಸ್ ಸಖತ್ ಖುಷಿ ಪಟ್ಟಿದ್ದಾರೆ.  ಫಸ್ಟ್ ಡೇ  ಮಾರ್ಕ್‌ ನೋಡಿ ಕಿಚ್ಚಿನ ಫ್ಯಾನ್ಸ್ ದರ್ಬಾರ್‌ ಮಾಡಿದ್ರು.. ದಾದಾ ಯಾರ್ ಗೊತ್ತಾ ಅನ್ನೋ ಹಾಡಿಗೆ ಫ್ಯಾನ್ಸ್‌ ಕುಣಿದು ಕುಪ್ಪಳ್ಳಿಸಿದ್ದಾರೆ. ತೆರೆ ಮೇಲೆ ಸುದೀಪ್ ಯಾವ ರೀತಿ ಡ್ಯಾನ್ಸ್ ಮಾಡ್ತಾರೋ ಅದೇ ರೀತಿನೇ ಸ್ಕ್ರೀನ್ ಮುಂದೆ ಫ್ಯಾನ್ಸ್ ಡ್ಯಾನ್ಸ್ ಮಾಡಿ ಮಸ್ತ್ ಎಂಜಾಯ್ ಮಾಡಿದ್ರು.

ಮಾರ್ಕ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಆಫೀಸರ್ ಆಗಿನಟಿಸಿದ್ದಾರೆ. ಮಾರ್ಕ್ ಚಿತ್ರದಲ್ಲಿ ಸುಮಾರು ವಿಷಯಗಳು ಇವೆ. ಮಾರ್ಕ್ ಕ್ರೈಮ್ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಚಿತ್ರದ ಆರಂಭದಲ್ಲೇ ವಿಲನ್ ಡ್ರ್ಯಾಗನ್ ಮಂಜು ಅವರು ಅಬ್ಬರ ಜೋರಾಗಿದೆ.  ದಾದಾ ಯಾರ್ ಗೊತ್ತಾ ಹಾಡು ಸಿನಿಮಾದ ಶುರುವಿನಲ್ಲೇ ಇದ್ದು, ಈ ಸಾಂಗ್‌ ಮೂಲಕವೇ  ಕಿಚ್ಚ ಸುದೀಪ್ ಖಡಕ್ ಎಂಟ್ರಿ ನೀಡುತ್ತಾರೆ. ಆ್ಯಕ್ಷನ್ ಇಷ್ಟ ಪಡುವವರಿಗೆ ಮಾರ್ಕ್ ಸಿನಿಮಾದ ಆರಂಭದಲ್ಲೇ ಮನರಂಜನೆ ಇದೆ. ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಸಸ್ಪೆಂಡ್ ಆದ್ರೂ ಹೆಗಲ್ಲಾ ಅಕ್ರಮಗಳನ್ನ ಮಟ್ಟ ಹಾಕಬಹುದು ಅನ್ನೋದ್ದನ್ನ ಕಿಚ್ಚ ಸುದೀಪ್ ತೋರಿಸಿದ್ದಾರೆ. ಡ್ರಗ್ಸ್ ಮಾಫಿಯಾ, ಮಕ್ಕಳ ಕಿಡ್ನ್ಯಾಪ್‌, ರಾಜಕೀಯ, ಫ್ಯಾಮಿಲಿ ಸೆಂಟಿಮೆಂಟ್, ಫೈಟ್‌.. ಮಾರ್ಕ್ ಸಿನಿಮಾದ ಹೈಲೆಟ್ ಅಂತ ಹೇಳಬಹುದು.

ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಇನ್ನೂ ನವೀನ್ ಚಂದ್ರ, ವಿಕ್ರಾಂತ್, ಶೈನ್ ಟಾಮ್ ಚಾಕೋ, ಯೋಗಿ ಬಾಬು, ಗುರು ಸೋಮಸುಂದರಂ ಸೇರಿದಂತೆ ಹಲವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಟರ್‌ವಲ್‌ಗಿಂತ ಮುನ್ನ ಬರುವ ಫೈಟಿಂಗ್ ಸೀನ್ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತೆ.  ಫಸ್ಟ್ ಆಫ್‌ನಲ್ಲೇ ಒಟ್ಟು ಮೂರು ಆ್ಯಕ್ಷನ್ ದೃಶ್ಯಗಳಿವೆ. ಸೆಕಂಡ್ ಆಫ್‌ನಲ್ಲಿ ಕಿಚ್ಚ ಸುದೀಪ್ ಆ್ಯಕ್ಷನ್ ಸೀನ್‌ಗಳಲ್ಲಿ ಮಿಂಚಿದ್ದಾರೆ. ಸಕೆಂಡ್‌ ಆಫ್‌ನಲ್ಲಿ ಕ್ಷಣ ಕ್ಷಣಕ್ಕೂ ಏನ್ ಆಗುತ್ತೆ ಅನ್ನೋ ಕಾತುರ ನಮ್ಮನ್ನ ಕಾಡುವಂತೆ ಮಾಡುತ್ತೆ.  ಬಹುತೇಕ ಮ್ಯಾಕ್ಸ್ ಸಿನಿಮಾದ ರೀತಿಯೇ ಮಾರ್ಕ್ ಸಿನಿಮಾ ಇದೆ ಅಂತ ಹೆಳಬಹುದು. ಅಂದ್ರೆ ಕಥೆ ಸೇಮ್ ಅಂತ ಅಲ್ಲ.. ಮ್ಯಾಕ್ಸ್ ಕಥೆ ಹೇಗೆ ಒಂದೇ ದಿನದಲ್ಲಿ ನಡೆಯುತ್ತೆ.  ಹಾಗೇ ಮಾರ್ಕ್‌ನಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯನ್ನು  ತೋರಿಸಲಾಗಿದೆ. ನಿಮ್ಗೆ ಎಲ್ಲೂ ಬೋರ್ ಅನಿಸೋದಿಲ್ಲ. ಫಟಾ ಫಟ್ ಅಂತ ಕಥೆ ಸಾಗುತ್ತೆ. ಮುಂದೇನು ಆಗುತ್ತೆ ಅನ್ನೋ ಕ್ಲೂ ಕೂಡ ನಮಗೆ ಸಿಗದೆ ಕಥೆ ಸಾಗುತ್ತೆ. ವಿಜಯ್ ಕಾರ್ತಿಕೇಯ ಮಾರ್ಕ್ ಸಿನಿಮಾನನ್ನ ಅಚ್ಚುಕಟ್ಟಾಗಿ  ಡೈರೆಕ್ಷನ್ ಮಾಡಿದ್ದಾರೆ.

ಸೀನ್‌ಗೆ ತಕ್ಕಂತೆ BGM ಇದ್ದು, ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.  ಅಷ್ಟೆ ಪ್ರೀತಿಯಿಂದಲೇ  ಹಾಡನ್ನ ಕಿಚ್ಚನ ಅಭಿಮಾನಿಗಳು ಸಖತ್ ಇಷ್ಟಪಟ್ಟಿದ್ದಾರೆ. ಈ ಸಾಂಗ್‌ಗೆ ಕಿಚ್ಚಿನ ಫ್ಯಾನ್ಸ್ ಮಸ್ತ್ ಡ್ಯಾನ್ಸ್ ಮಾಡಬಹುದು. ಮಾರ್ಕ್ ಸಿನಿಮಾದಲ್ಲಿ ನಾಯಕಿ ಅಂತ ಸುದೀಪ್‌ ಅವರಿಗೆ ಯಾರೂ ಇಲ್ಲ. ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಲಿಲ್ಲ ಅಂತ ಸುದೀಪ್ ಇಲ್ಲೂ ನಾಯಕಿಯನ್ನ ಇಟ್ಟಿಲ್ಲ.

Kishor KV