ಗ್ರಾಮಕ್ಕೆ ಕಳ್ಳರು ನುಗ್ಗಿದ್ದಾರೆಂದು ಗೂಗಲ್ ಮ್ಯಾಪ್ ತಂಡದ ಸದಸ್ಯರಿಗೆ ಥಳಿಸಿದ ಹಳ್ಳಿ ಜನ! – ಆಮೇಲೆ ಏನಾಯ್ತು ಗೊತ್ತಾ?

ಹಳ್ಳಿ ಜನರು ಮುಗ್ದರು. ಅವರು ಅವರದ್ದೇ ಆದ ಒಂದು ಪ್ರಪಂಚದಲ್ಲಿ ಬದುಕುತ್ತಿರ್ತಾರೆ. ಹೊಸ ಜನರು ಬಂದ್ರೆ ಅವರ ಚಲನವಲನವನ್ನ ಗಮನಿಸಿ, ಅವರಿಂದ ತಮಗೆನಾದ್ರೂ ಅಪಾಯ ಇದ್ಯಾ ಅಂತಾ ಮೊದಲು ತಿಳಿದುಕೊಳ್ತಾರೆ. ಇದೀಗ ಇಲ್ಲೊಂದು ಕಡೆ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನ ಕಳ್ಳರು ಎಂದು ಭಾವಿಸಿ ಸರಿಯಾಗಿ ಥಳಿಸಿದ್ದಾರೆ.
ಇದನ್ನೂ ಓದಿ: ರೂಲ್ಸ್ ಅಂದ್ರೆ ರೂಲ್ಸ್ ಅಷ್ಟೇ..! ನೋ ಪಾರ್ಕಿಂಗ್ನಲ್ಲಿ ನಿಂತಿದ್ದ ಪೊಲೀಸ್ ಜೀಪ್ ಗೂ ಬಿತ್ತು ದಂಡ!
ಹೌದು, ಈ ಘಟನೆ ಉತ್ತರ ಪ್ರದೇಶದ ಘಟಂಪುರದಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ತಂಡದ ಸದಸ್ಯರು ಕಾರಿನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ, ಮಹೋಲಿಯಾ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ತಪ್ಪಾಗಿ ಭಾವಿಸಿದ್ದಾರೆ.
ಗುರುವಾರ, ಗೂಗಲ್ನ ಸ್ಟ್ರೀಟ್ ವ್ಯೂ ಮ್ಯಾಪಿಂಗ್ ಕಾರು, 360 ಡಿಗ್ರಿ ಕ್ಯಾಮೆರಾ ಹೊತ್ತು ಹಾದುಹೋದಾಗ, ಊರಿಗೆ ಕಳ್ಳರು ಬಂದಿದ್ದಾರೆಂಬ ವದಂತಿ ಶರವೇಗದಲ್ಲಿ ಹಬ್ಬಿದೆ. ಇದಾದ ನಂತರ, ಗ್ರಾಮಸ್ಥರು ಕಾರನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದರು. ಕಾರನ್ನು ನಿಲ್ಲಿಸಲು ಅವರು ರಸ್ತೆಯ ಮೇಲೆ ಮರದ ದಿಮ್ಮಿಗಳನ್ನು ಹಾಕಿದರು. ಕಾರಿನಲ್ಲಿದ್ದ ಸಿಬ್ಬಂದಿ ಭಯಭೀತರಾಗಿದ್ದರು. ಗೂಗಲ್ ಮ್ಯಾಪ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಭಾಯಿಸಿ, ಹಳ್ಳಿ ಜನರಿಗೆ ಗೂಗಲ್ ಮ್ಯಾಪ್ ಬಗ್ಗೆ ವಿವರಿಸಿದರು. ಗ್ರಾಮಸ್ಥರಿಗೆ ವಿವರಿಸಿದ ನಂತರ ಕಾರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು ಎಂದು ಇನ್ಸ್ಪೆಕ್ಟರ್ ಹೇಳಿದರು.
ಅಂದ್ಹಾಗೆ ಹಳ್ಳಿ ಜನರು ಈ ರೀತಿ ಗಲಭೆ ಎಬ್ಬಿಸಲು ಕಾರಣ ಕೂಡ ಇದೆ. ಮಹೋಲಿಯಾ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಕಾರಿನಲ್ಲಿ ಬಂದು ಕಳ್ಳತನ ಮಾಡಿರುವ ಸಾಕಷ್ಟು ಘಟನೆಗಳು ನಡೆದಿವೆ. ಶಹಪುರ್ ಉಮ್ರಾ ಗ್ರಾಮದಲ್ಲಿ ಒಂಬತ್ತು ತಿಂಗಳ ಶಿಶುವಿನ ಹಣೆಗೆ ಬಂದೂಕಿಟ್ಟು, ದರೋಡೆ ಮಾಡಿದ ಪ್ರಕರಣವೂ ವರದಿಯಾಗಿದೆ. ಹೀಗಾಗಿ ಜನರು ಜಾಗರೂಕರಾಗಿದ್ದು, ಅಲ್ಲಿ ಓಡಾಡುವ ಎಲ್ಲಾ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ. ಆಗಸ್ಟ್ 28ರಂದು ಗೂಗಲ್ ಮ್ಯಾಪ್ ತಂಡವುಪೊಲೀಸರು ಅಥವಾ ಗ್ರಾಮ ಅಧಿಕಾರಿಗಳಿಗೆ ಪೂರ್ವ ಸೂಚನೆ ನೀಡದೆ ರಸ್ತೆ ಮಟ್ಟದ ಸಮೀಕ್ಷೆಯನ್ನು ನಡೆಸುತ್ತಿತ್ತು. ಆಗ ಊರಿನವರು ಅವರು ಕಳ್ಳರೆಂದು ಥಳಿಸಿದ್ದಾರೆ.
ಪೊಲೀಸರು ಗ್ರಾಮಸ್ಥರು ಮತ್ತು ಸಮೀಕ್ಷಾ ತಂಡವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಗ್ರಾಮಸ್ಥರು ನಮ್ಮನ್ನು ಸುತ್ತುವರೆದರು. ಅವರು ನಮ್ಮ ದಾಖಲೆಗಳನ್ನು ಪರಿಶೀಲಿಸಿದ್ದರೆ, ಅವರಿಗೆ ನಮ್ಮ ಉದ್ದೇಶ ಅರ್ಥವಾಗುತ್ತಿತ್ತು ಎಂದು ಆ ತಂಡದ ನಾಯಕ ಸಂದೀಪ್ ತಿಳಿಸಿದ್ದಾರೆ.

ನೋಡಿರಿ

