ನಟಿ ಶ್ರೀದೇವಿ ಸಾವಿಗೆ ಗಂಡನೇ ಕಾರಣ – ತನ್ನ ಮೇಲಿದ್ದ ಅನುಮಾನಕ್ಕೆ ತತ್ತರಿಸಿಹೋಗಿದ್ದರಂತೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್

ನಟಿ ಶ್ರೀದೇವಿ ಸಾವಿಗೆ ಗಂಡನೇ ಕಾರಣ – ತನ್ನ ಮೇಲಿದ್ದ ಅನುಮಾನಕ್ಕೆ ತತ್ತರಿಸಿಹೋಗಿದ್ದರಂತೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್

ಬಾಲಿವುಡ್ ನಟಿ ಶ್ರೀದೇವಿ ಕಪೂರ್ ಇವತ್ತು ನಮ್ಮೊಂದಿಗಿಲ್ಲ. ಇವರ ಸಾವಿನ ನೋವಿನಲ್ಲಿಯೇ ಬೋನಿ ಕಪೂರ್ ಹಲವೊಂದು ವಿಚಾರಗಳನ್ನು ಜನರ ಮುಂದೆ ತೆರೆದಿಟ್ಟಿದ್ದರು. ನವೆಂಬರ್ 11 ರಂದು ಬೋನಿ ಕಪೂರ್ ಜನ್ಮದಿನ. ತನ್ನ ಹುಟ್ಟುಹಬ್ಬದ ದಿನ ಬೋನಿ ಕಪೂರ್ ಶ್ರೀದೇವಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಶ್ರೀದೇವಿಯದ್ದು ಸಹಜ ಸಾವಲ್ಲ’ – ನಟಿಯ ಸಾವಿನ ಬಗ್ಗೆ ಕೊನೆಗೂ ಸತ್ಯ ಬಹಿರಂಗಪಡಿಸಿದ ಬೋನಿ ಕಪೂರ್

ನವೆಂಬರ್ 11ರಂದು ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಜನ್ಮದಿನ. ಬೋನಿ ಕಪೂರ್ ಅವರಿಗೆ ಕುಟುಂಬದವರು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇದೇ ವೇಳೆ ನಿರ್ಮಾಪಕ ಬೋನಿ ಕಪೂರ್ ತಮ್ಮ ಮುದ್ದಿನ ಸಂಗಾತಿ ನಟಿ ಶ್ರೀದೇವಿ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಬಗ್ಗೆ ಹೇಳುವುದಾದರೆ, ಅವರ ವೈಯಕ್ತಿಕ ಜೀವನ ಸಾಕಷ್ಟು ವಿವಾದಕ್ಕೀಡಾಗಿತ್ತು. ಮೊದಲ ಪತ್ನಿಯಿಂದ ವಿಚ್ಛೇದನ, ಶ್ರೀದೇವಿ ಮೇಲಿನ ಪ್ರೀತಿ, ನಂತರ ಶ್ರೇದೇವಿಯವರ ಸಾವಿಗೆ ಗಂಡನೇ ಕಾರಣ ಎಂಬ ಅನುಮಾನ ಇದೆಲ್ಲದರಿಂದ ಬೋನಿಕಪೂರ್ ಜರ್ಜರಿತರಾಗಿದ್ದರು.

1983ರಲ್ಲಿ ಮೋನಾ ಕಪೂರ್‌ ಅವರನ್ನು ಬೋನಿ ಕಪೂರ್ ಮದುವೆ ಆಗಿದ್ದರು. 1996ರಲ್ಲಿ ವಿಚ್ಛೇದನ ಪಡೆದರು. ಅದೇ ವರ್ಷ ಬೋನಿ ಕಪೂರ್ ಅವರು ಶ್ರೀದೇವಿಯನ್ನು ಮದುವೆ ಆದರು. 22 ವರ್ಷಗಳ ಕಾಲ ಸುಮಧುರ ದಾಂಪತ್ಯ ಇವರದ್ದಾಗಿತ್ತು. 2018ರ ಆಗಸ್ಟ್ ತಿಂಗಳಲ್ಲಿ ಶ್ರೀದೇವಿ ಅವರು ಮದುವೆಗೆಂದು ದುಬೈಗೆ ತೆರಳಿದ್ದರು. ಹೋಟೆಲ್ ರೂಂನ ಬಾತ್ ಟಬ್‌ನಲ್ಲಿ ಅವರು ಮೃತಪಟ್ಟರು. ಅಚಾನಕ್ಕಾಗಿ ಅವರು ಮುಳುಗಿ ಬಿದ್ದು ಮೃತಪಟ್ಟಿದ್ದಾಗಿ ವರದಿ ಬಂತು. ದುಬೈ ಪೊಲೀಸರು ಇದನ್ನೇ ಹೇಳಿದ್ದರು. ಶ್ರೀದೇವಿಯನ್ನು ಬೋನಿ ಕಪೂರ್ ಅವರೇ ಸಾಯಿಸಿದರು ಎಂದು ಅನುಮಾನಪಟ್ಟವರು ಅನೇಕರಿದ್ದಾರೆ. ಆದರೆ, ಈ ಬಗ್ಗೆ ಅವರು ಮೌನ ತಾಳಿದ್ದರು. ಯಾವುದೇ ಹೇಳಿಕೆಗೆ ಅವರು ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇತ್ತೀಚೆಗಷ್ಟೇ ಬೋನಿಕಪೂರ್ ಶ್ರೀದೇವಿ ಅವರ ಸಾವಿನ ಬಗ್ಗೆ ಮಾತನಾಡಿದ್ದರು. ಭಾರತ ಮಾಧ್ಯಮಗಳಿಂದ ಎದುರಿಸಿದ ಟೀಕೆ ಬಗ್ಗೆ ಅವರು ಮಾತನಾಡಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಬೋನಿ ಕಪೂರ್ ಅವರು, ‘ಶ್ರೀದೇವಿ ಅವರದ್ದು ಸಾಮಾನ್ಯ ಸಾವಲ್ಲ, ಅದು ಆಕಸ್ಮಿಕ ಸಾವು’ ಎಂದು ಹೇಳಿದ್ದರು. ‘ನಾನು ಈ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ದುಬೈನಲ್ಲಿ ನನ್ನ ವಿಚಾರಣೆ ಮಾಡಿದಾಗ 24-48 ಗಂಟೆ ಮಾತನಾಡಿದ್ದೆ. ಭಾರತದ ಮಾಧ್ಯಮಗಳಿಂದ ಒತ್ತಡ ಇರುವುದರಿಂದ ಅವರು ವಿಚಾರಣೆ ಮಾಡಲೇಬೇಕಿತ್ತು. ಪೊಲೀಸರ ಎದುರು ನಾನು ಎಲ್ಲವನ್ನೂ ಹೇಳಿರುವಾಗ ಮತ್ತೆ ಹೇಳಲು ಏನೂ ಇರಲಿಲ್ಲ. ಶ್ರೀದೇವಿ ಸಾವಿನಲ್ಲಿ ಯಾವುದೇ ಶಂಕೆ ಇರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲೂ ಇದೊಂದು ಆಕಸ್ಮಿಕ ಸಾವು ಎಂದು ಬಂದಿತ್ತು’ ಎಂದಿದ್ದರು ಅವರು. ‘ಶ್ರೀದೇವಿ ಯಾವಾಗಲೂ ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು, ದೇಹದ ಶೇಪ್‌ನ್ನು ಕಾಪಾಡಿಕೊಂಡು ಹೋಗಲು ಬಯಸುತ್ತಿದ್ದರು. ಅವರು ದೇಹದ ತೂಕವನ್ನು 46ಕ್ಕೆ ಇಳಿಸಿಕೊಂಡಿದ್ದರು. ಅವರು ಸಾಯುವುದಕ್ಕೂ ಮೊದಲು ವೈದ್ಯರು ಅವರಿಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ನಿಮ್ಮ ಬಿಪಿ ಕಡಿಮೆ ಆಗುತ್ತಿದೆ ಎನ್ನುತ್ತಿದ್ದರು. ಊಟದಲ್ಲಿ ಉಪ್ಪನ್ನು ತ್ಯಜಿಸಬೇಡಿ ಎನ್ನುತ್ತಿದ್ದರು’ ಎಂದಿದ್ದರು ಬೋನಿ ಕಪೂರ್.  ಒಮ್ಮೆ ಶ್ರೀದೇವಿಯವರು ಶೂಟಿಂಗ್ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಹಲ್ಲು ಮುರಿದುಕೊಂಡಿದ್ದರು. ಆ ಬಳಿಕ ಆರ್ಟಿಫೀಷಯಲ್ ಹಲ್ಲುಗಳನ್ನು ಹಾಕಿಕೊಂಡಿದ್ದರು’. ಹೀಗೆ ಶ್ರೀದೇವಿಯವರ ಡಯಟ್ ಬಗ್ಗೆ ಅಂದು ಬೋನಿ ಕಪೂರ್ ವಿವರವಾಗಿ ತಿಳಿಸಿದ್ದರು.

Sulekha