ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಗರು ಪುಟ್ಟಿ – ಕೊಂಕಣಿ ಸಂಪ್ರದಾಯದಂತೆ ಮದುವೆಯಾದ ಮಾನ್ವಿತಾ ಕಾಮತ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಗರು ಪುಟ್ಟಿ – ಕೊಂಕಣಿ ಸಂಪ್ರದಾಯದಂತೆ ಮದುವೆಯಾದ ಮಾನ್ವಿತಾ ಕಾಮತ್

ಸ್ಯಾಂಡಲ್‌ ವುಡ್‌ ನಟಿ ಮಾನ್ವಿತಾ ಕಾಮತ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಧವಾರ ಚಿಕ್ಕಮಗಳೂರಿನ ಕಳಸದಲ್ಲಿ ಮೈಸೂರು ಹುಡುಗ ಅರುಣ್ ಕುಮಾರ್ ಜೊತೆ ಸಪ್ತಪದಿ ತುಳಿದಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡಿದ್ರೆ ಸಿನಿಮಾ ನೋಡಲ್ಲ ಎಂದ ಫ್ಯಾನ್ಸ್‌ – ಕಾರಣವೇನು ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ‘ಟಗರು ಪುಟ್ಟಿ’ ಎಂದೇ ಜನಪ್ರಿಯರಾದ ಮಾನ್ವಿತಾ ಕಾಮತ್‌ ಅವರ ಮದುವೆ ಮೇ 1ರಂದು ಕೊಂಕಣಿ ಸಂಪ್ರದಾಯದಂತೆ ನಡೆದಿದೆ. ಟಗರು ಪುಟ್ಟಿ ಕಲ್ಯಾಣಕ್ಕೆ ಎರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಭಾಗಿಯಾಗಿದ್ದರು. ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ ಶ್ರುತಿ ಹರಿಹರನ್, ರಿಲಾಕ್ಸ್ ಸತ್ಯ ನಟ ಪ್ರಭು, ನಿರಂಜನ್‌ ದೇಶಪಾಂಡೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗಿದ್ದಾರೆ. ಮದುವೆಗೂ ಮುನ್ನ ಏಪ್ರಿಲ್‌ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದರು.

Shwetha M

Leave a Reply

Your email address will not be published. Required fields are marked *