ಕಂಚಿನ ರಾಣಿ ರೇಂಜೇ ಚೇಂಜ್..! – ಮನು ಬಾಕರ್ ಬ್ರ್ಯಾಂಡ್ ಮೌಲ್ಯ ಡಬಲ್
ಶೂಟರ್ ಹಿಂದೆ ಬಿದ್ದ 40 ಬ್ರ್ಯಾಂಡ್‌ಗಳು

ಕಂಚಿನ ರಾಣಿ ರೇಂಜೇ ಚೇಂಜ್..! – ಮನು ಬಾಕರ್ ಬ್ರ್ಯಾಂಡ್ ಮೌಲ್ಯ ಡಬಲ್ಶೂಟರ್ ಹಿಂದೆ ಬಿದ್ದ 40 ಬ್ರ್ಯಾಂಡ್‌ಗಳು

ಮನು ಬಾಕರ್.. ಕಂಚಿನ ರಾಣಿ.. ಒಲಿಂಪಿಕ್ಸ್ ನಲ್ಲಿ ಡಬಲ್ ಪದಕ ಗೆದ್ದ ಹೆಮ್ಮೆಯ ಶೂಟರ್.. ಈಗ ಎಲ್ಲಾ ಬ್ರ್ಯಾಂಡ್ ಗಳ ಚಿತ್ತ ಮನುಬಾಕರ್ ನತ್ತ ನೆಟ್ಟಿದೆ. ಕಳೆದ ಎರಡು ಮೂರು ದಿನಗಳಲ್ಲಿ ಮನು ಬಾಕರ್ ಮೊಬೈಲ್ ಎಷ್ಟು ಬ್ಯುಸಿ ಎಂದ್ರೆ ಯಾವ ಸ್ಟಾರ್‌ ಕ್ರಿಕೆಟರ್ಸ್, ಯಾವ ಸೆಲೆಬ್ರಿಟಿ ಕೂಡಾ ಇವರ ಮುಂದೆ ಇಲ್ಲ. ಅಷ್ಟೊಂದು ಬ್ಯಾಂಡ್ ವ್ಯಾಲ್ಯೂ ಹೆಚ್ಚು ಮಾಡಿಕೊಂಡಿದ್ದಾರೆ ಮನು ಬಾಕರ್. ಹಾಗಾದ್ರೆ, ಮನು ಬಾಕರ್ ಬ್ರಾಂಡ್ ವ್ಯಾಲ್ಯೂ ಮೊದಲೆಷ್ಟಿತ್ತು? ಈಗ ಎಷ್ಟಾಗಿದೆ? ಈ ಸಾಧಕಿಯ ಪ್ರಚಾರ ಕೂಡಾ ಎಷ್ಟರಮಟ್ಟಿಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಂಕಾ ಲಯನ್ಸ್ ಗೆ ಭಾರತ ಬಲಿ! – KL, ದುಬೆ, ಅಯ್ಯರ್ ಆಟ ಮರೆತ್ರಾ?

ಮನು ಭಾಕರ್. ಒನ್ ವೀಕ್ ನಿಂದ ಈಕೆಯದ್ದೇ ಹವಾ.. ಒಲಿಂಪಿಕ್‌ನಲ್ಲಿ ಇತಿಹಾಸ ಸೃಷ್ಟಿಸಿದ ಮನು ಬಾಕರ್, ಬಗ್ಗೆ 10 ದಿನಗಳ ಹಿಂದೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕೇವಲ 6 ದಿನಗಳ ಅಂತರದಲ್ಲಿ ದೇಶಕ್ಕೆ ಎರಡೆರಡು ಪದಕ ಗೆದ್ದುಕೊಟ್ಟ ಮನು ಭಾಕರ್, ಇಡೀ ದೇಶದ ಕಣ್ಮಣಿಯಾಗಿದ್ದಾರೆ. ಇದೀಗ ಕ್ರೀಡಾ ಜಗತನ್ನು ಹೊರತುಪಡಿಸಿಯೂ ಮನು ಹೆಸರು ಎಲ್ಲೆಡೆ ಸದ್ದು ಮಾಡುತ್ತಿದೆ. ಮನು ಫೇಮಸ್ ಆಗ್ತಿದ್ದಂತೆ, ಈಕೆಯ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಜಾಸ್ತಿ ಅಲರ್ಟ್ ಆಗಿದ್ದು ಯಾರು ಗೊತ್ತಾ.. ಹತ್ತು ಹಲವು ಕಂಪನಿಗಳು. ಯೆಸ್.. ಮನು ಪಾಪ್ಯೂಲಾರಿಟಿಯನ್ನೇ ಲಾಭವಾಗಿಸಿಕೊಳ್ಳುವ ಇರಾದೆಯಲ್ಲಿರುವ ಹಲವು ಕಂಪನಿಗಳು ಈಗ ಶೂಟರ್ ಹಿಂದೆ ಬಿದ್ದಿವೆ. ಮನು ಅವರನ್ನು ತಮ್ಮ ಬ್ರ್ಯಾಂಡ್​ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಸ್ಪರ್ಧೆಗೆ ಬಿದ್ದಿವೆ.  ವರದಿಯ ಪ್ರಕಾರ 40 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಮನು ಜೊತೆಗೆ ಜಾಹೀರಾತು ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿವೆ. ಇತ್ತ ಮನು ಭಾಕರ್ ಕೂಡ ಸುಮ್ಮನೆ ಕೂತಿಲ್ಲ. ತಮ್ಮ ಜನಪ್ರಿಯತೆಗೆ ಸರಿಯಾಗಿ ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಸಹ ಬರೋಬ್ಬರಿ 6 ಪಟ್ಟು ಹೆಚ್ಚಳ ಮಾಡಿಕೊಂಡಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದಕ್ಕೂ ಮುನ್ನ ಮನು ಅವರು ಒಂದು ಬ್ರ್ಯಾಂಡ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಲು ಸುಮಾರು 20 ಲಕ್ಷ ರೂಗಳನ್ನು ಶುಲ್ಕವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಅವರ ಬ್ರ್ಯಾಂಡ್ ಮೌಲ್ಯವನ್ನು 1 ರಿಂದ 1.5 ಕೋಟಿ ರೂಗೆ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮನು ಅವರ ಮ್ಯಾನೇಜಿಂಗ್ ಏಜೆನ್ಸಿ ಐಒಎಸ್ ಸ್ಪೋರ್ಟ್ಸ್ ಮತ್ತು ಎಂಟರ್‌ಟೈನ್‌ಮೆಂಟ್‌, ‘ಮನು ಪದಕ ಜಯಿಸಿದ ಬಳಿಕ 40 ಕ್ಕೂ ಹೆಚ್ಚು ಬ್ರ್ಯಾಂಡ್ಗಳು ಮನು ಅವರಿಗಾಗಿ ಹಿಂದೆ ಬಿದ್ದಿವೆ. ಅಲ್ಲದೆ ಕೆಲವು ಬ್ರಾಂಡ್‌ಗಳು ತಮ್ಮ ಲೋಗೋದೊಂದಿಗೆ ಮನು ಅವರ ಫೋಟೋವನ್ನು ಬಳಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುತ್ತಿವೆ. ಸುಮಾರು 150 ರಿಂದ 200 ಬ್ರ್ಯಾಂಡ್‌ಗಳು ಈ ಕೆಲಸ ಮಾಡಿವೆ. ಇದು ಕಾರ್ಪೊರೇಟ್ ಇಂಡಿಯಾದ ವೃತ್ತಿಪರವಲ್ಲದ ನಡವಳಿಕೆ. ಹೀಗಾಗಿ ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು’ ಎಂದಿದ್ದಾರೆ. ‘ಇದಲ್ಲದೆ ಮನು ಅವರ ಫೋಟೋವನ್ನು ಅನುಮತಿಯಲ್ಲಿದೆ ಬಳಸಿರುವ ಬ್ರ್ಯಾಂಡ್​ಗಳಿಗೆ ಏಜೆನ್ಸಿಯು ಈಗಾಗಲೇ ಸುಮಾರು 50 ಲೀಗಲ್ ನೋಟಿಸ್‌ಗಳನ್ನು ಕಳುಹಿಸಿದೆ. ಹಾಗೆಯೇ ಇತರ ಬ್ರ್ಯಾಂಡ್‌ಗಳಿಗೆ ಎಚ್ಚರಿಕೆಯನ್ನು ಸಹ ನೀಡುತ್ತಿದೆ. ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯ ಬೆಳೆಯುತ್ತಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಒಪ್ಪಂದಗಳು ಅಲ್ಪಾವಧಿಗೆ ಮತ್ತು ದೀರ್ಘಾವಧಿಗೆ ನಡೆಯುತ್ತಿವೆ’ ಎಂದಿದ್ದಾರೆ. ‘ಕಳೆದ 2-3 ದಿನಗಳಲ್ಲಿ ನಮ್ಮನ್ನು ಸುಮಾರು 40ಕ್ಕೂ ಹೆಚ್ಚು ಜನರು ಸಂಪರ್ಕಿಸಿದ್ದಾರೆ. ನಾವು ಇದೀಗ ದೀರ್ಘಾವಧಿಯ ಒಪ್ಪಂದಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಇದಲ್ಲದೆ ಈಗಾಗಲೇ ಕೆಲವು ಬ್ರ್ಯಾಂಡ್‌ಗಳ ಜೊತೆ ಒಪ್ಪಂದವನ್ನು ಸಹ ಪೂರ್ಣಗೊಳಿಸಿದ್ದೇವೆ. ಸಹಜವಾಗಿ, ಅವರ ಬ್ರ್ಯಾಂಡ್ ಮೌಲ್ಯವು ಐದರಿಂದ ಆರು ಪಟ್ಟು ಹೆಚ್ಚಾಗಿದೆ. ಈ ಮೊದಲು ನಾವು ಒಂದು ಜಾಹೀರಾತು ಒಪ್ಪಂದಕ್ಕೆ ಸುಮಾರು 20 ರಿಂದ 25 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದೆವು. ಈಗ ಒಂದು ಜಾಹೀರಾತಿನ ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ವಿಧಿಸಲಾಗುತ್ತದೆ’ ಎಂದು ಮನು ಅವರ ಮ್ಯಾನೇಜಿಂಗ್ ಏಜೆನ್ಸಿ ತಿಳಿಸಿದೆ.

ಮನು ಬಾಕರ್ ಗೆ ಈಗ ಕೇವಲ 22 ವರ್ಷ. ಈಗಾಗಲೇ ಶೂಟರ್ ಗೆ ಹಲವು ಕಂಪನಿಗಳಿಂದ ಬರುವ ಆಪರ್ ಗಳನ್ನು ನೋಡಿದ್ರೆ ನಿಜಕ್ಕೂ ಸರ್‌ಪ್ರೈಸ್ ಅನಿಸ್ತಿದೆ. ಈ ಹಿಂದೆ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್​ನಲ್ಲೂ ಮನು ಬಾಕರ್ ಅನೇಕ ಪದಕಗಳನ್ನು ಗೆದ್ದಿದ್ದಾರೆ. ಆದರೆ, ಯಾವಾಗ ಒಲಿಂಪಿಕ್ಸ್‌ನಲ್ಲಿ ಮನು ಹಿಸ್ಟರಿ ಕ್ರಿಯೇಟ್ ಮಾಡಿದ್ರೋ ಅಲ್ಲಿಂದ ಕಂಚಿನ ರಾಣಿಯ ರೇಂಜೇ ಜೇಂಚಾಗಿ ಹೋಯ್ತು.  ಎರಡು ಪದಕಗಳು ಇಂಡಿಯಾಕ್ಕೆ ಹೆಮ್ಮೆ ತಂದಿದ್ದು ಮಾತ್ರವಲ್ಲ. ಮನು ಬಾಕರ್ ಅವರ ಬ್ರಾಂಡ್ ಮೌಲ್ಯವನ್ನ ಕಂಡು ಕೇಳರಿಯದಷ್ಟು ಜಾಸ್ತಿಯಾಗುವಂತೆ ಮಾಡಿದೆ. ಈಗಂತೂ ಈ ಭಾರತೀಯ ಶೂಟರ್ ಮನು ಭಾಕರ್, ಭಾರತದ ಸ್ಟಾರ್ ಆಟಗಾರ್ತಿಯಾಗಿ ಮೆರೆಯುತ್ತಿದ್ದಾರೆ. ಜೊತೆಗೆ ಅದೃಷ್ಟ ಬಾಗಿಲು ಕೂಡಾ ಈ ರೀತಿ ತೆರೆದಿದೆ.

2024ರ ಮಾಹಿತಿ ಪ್ರಕಾರ, ಮನು ಭಾಕರ್ ಒಟ್ಟು ನಿವ್ವಳ ಆಸ್ತಿ ಮೌಲ್ಯ 12 ಕೋಟಿ ರೂಪಾಯಿವರೆಗೂ ಇತ್ತು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಕ್ಕಾಗಿ ಹರ್ಯಾಣ ಸರ್ಕಾರವು ಕೆಲವು ವರ್ಷಗಳ ಹಿಂದೆ ಮನು ಬಾಕರ್‌ ಅವರಿಗೆ 2 ಕೋಟಿ ರೂ. ಬಹುಮಾನ ನೀಡಿತ್ತು. ಈ ಬಾರಿ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಮನು ಬಾಕರ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡುತ್ತೇವೆ ಜೆಎಸ್​ಡಬ್ಲ್ಯೂ ಸಂಸ್ಥೇ ತಿಳಿಸಿದೆ. JSW ಇಂಡಿಯಾದಿಂದ MG ವಿಂಡ್ಸರ್ ಕಾರು ಮನು ಬಾಕರ್ ಗೆ ಉಡುಗೊರೆಯಾಗಿ ಸಿಗಲಿದೆ. ಜೊತೆಗೆ ಹರಿಯಾಣ ಸರ್ಕಾರ, ಕೇಂದ್ರ ಸರ್ಕಾರದಿಂದಲೂ ಕೋಟಿ ಕೋಟಿ ರೂಪಾಯಿ ಕಂಚಿನ ರಾಣಿಯ ಖಜಾನೆ ಸೇರಲಿದೆ. ಮನು ಬಾಕರ್ ಗಾಗಿ ಜಾಹಿರಾತು ಕಂಪೆನಿಗಳು ಹಿಂದೆ ಬೀಳಲು ಮತ್ತೊಂದು ಕಾರಣ ಕಂಚಿನ ರಾಣಿಯ ಬ್ಯೂಟಿ. ಇಂಡಿಯಾ ಶೂಟರ್ ಮನು ಬಾಕರ್ ನೋಡಲು ಕೂಡಾ ಅಷ್ಟೇ ಚೆಲುವೆ. ಇದು ಕೂಡಾ ಶೂಟರ್ ಗೆ ಪ್ಲಸ್ ಆಗಿದೆ. ಜೊತೆಗೆ ಖುದ್ದು ಮನು ಬಾಕರ್ ಕೂಡಾ ತನ್ನ ವ್ಯಾಲ್ಯೂ ಜಾಸ್ತಿ ಮಾಡಿಕೊಂಡಿದ್ದಾರೆ. ಅದೇನೇ ಇರಲಿ,

ಭಾರತೀಯ ಶೂಟಿಂಗ್ ಕ್ರೀಡಾ ಕ್ಷೇತ್ರದ ಹೊಸ ಸೆನ್ಸೇಷನ್ ಎಂದೇ ಕರೆಸಿಕೊಳ್ಳುತ್ತಿರೋ ಮನು ಬಾಕರ್ ಚಿನ್ನ ಗೆಲ್ಲಲಿಲ್ಲ. ಆದ್ರೆ, ಈಕೆಯ ಸಾಧನೆ ನಿಜಕ್ಕೂ ಚಿನ್ನದಂತಾ ಸಾಧನೆಯೇ. ಅದಕ್ಕಾಗಿ ಮನುಗೆ ಏನು ಸಲ್ಲಬೇಕೋ ಅದು ಸಿಗಲೇಬೇಕು..

Sulekha

Leave a Reply

Your email address will not be published. Required fields are marked *