ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ – 22 ದಿನಗಳಲ್ಲೇ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ
ಸಾಲು ಸಾಲು ರಜೆ. ರಾಯರ ಮೇಲಿನ ಭಕ್ತಿ. ಮಂತ್ರಾಲಯಕ್ಕೆ ಭಕ್ತರ ದಂಡೇ ಭೇಟಿ ನೀಡುತ್ತಿದ್ದು, ಕಾಣಿಕೆ ಕೂಡ ಹೆಚ್ಚಾಗುತ್ತಿದೆ. ಮಂತ್ರಾಲಯದ ರಾಯರ ಮಠದಲ್ಲಿನ ಕಾಣಿಕೆ ಹುಂಡಿಗಳನ್ನು ತೆರೆಯಲಾಗಿದ್ದು ಮಠದ ಸಿಬ್ಬಂದಿಯಿಂದ ಹಣದ ಎಣಿಕೆಯೂ ಆಗಿದೆ. ಈ ವೇಳೆ ಭಕ್ಯರು ಕೋಟಿ ಕೋಟಿ ಕಾಣಿಕೆ ಹಾಕಿರೋದು ಗೊತ್ತಾಗಿದೆ.
ಭಾರತದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ತುಂಗಭದ್ರಾ ನದಿಯ ದಡದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಕರ್ನಾಟಕದಿಂದಲೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಅಪಾರ ಸಂಖ್ಯೆಯ ಭಕ್ತಾಧಿಗಳನ್ನು ಒಳಗೊಂಡಿರುವ ಪವಿತ್ರ ಸ್ಥಾನವಿದು. ಶ್ರೀರಾಘವೇಂದ್ರ ಸ್ವಾಮಿ ಮಠವು ರಾಯರ ಮಠವೆಂದೇ ಪ್ರಸಿದ್ಧ. ಈ ಮಠವನ್ನು ಹಿಂದೆ ಕುಂಭಕೋಣಂ ಮಠ ಅಥವಾ ವಿಜಯೇಂದ್ರ ಮಠ, ದಕ್ಷಿಣಾದಿ ಕವೀಂದ್ರ ಮಠ ಅಥವಾ ದಕ್ಷಿಣಾದಿ ಮಠ ಎಂದು ಕರೆಯಲಾಗುತ್ತಿತ್ತು. ಪ್ರಸ್ತುತ ಇದನ್ನು ಶ್ರೀರಾಘವೇಂದ್ರ ಸ್ವಾಮಿ ಮಠ ಎಂದು ಕರೆಯಲಾಗುತ್ತದೆ. ಲಕ್ಷಾಂತರ ಭಕ್ತರು ಆರಾಧಿಸುವ ಮಂತ್ರಾಲಯ ಮಠಕ್ಕೆ ಇತ್ತೀಚೆಗೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇದನ್ನೂ ಓದಿ : ನಾಗಿನ್ ಡ್ಯಾನ್ಸ್ ಮಾಡುತ್ತಿದ್ದ ವೇಳೆ ನಾಗರಹಾವು ಪ್ರತ್ಯಕ್ಷ! – ಹುಟ್ಟುಹಬ್ಬದಂದೇ ಆಸ್ಪತ್ರೆ ಸೇರಿದ ಯುವಕ!
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ ಮಠದ (Mantralayam Raghavendra Swamy Mutt) ಕಾಣಿಕೆ ಹುಂಡಿಗಳನ್ನು ತೆರೆಯಲಾಗಿದ್ದು ಮಠದ ಸಿಬ್ಬಂದಿಯಿಂದ (mutt staff) ಹಣದ ಎಣಿಕೆಯೂ ಆಗಿದೆ. ಭಕ್ತರು ಹಾಕಿರುವ ಕಾಣಿಕೆಗಳಲ್ಲಿ 5 ಲಕ್ಷ ರೂ. ಮೌಲ್ಯದ ನಾಣ್ಯಗಳಿವೆ! ಹಾಗೇ ಹೆಚ್ಚಿನ ಮುಖಬೆಲೆಯ ನೋಟು ಮತ್ತು ಚಿನ್ನ ಬೆಳ್ಳಿಯನ್ನು ಹುಂಡಿಗೆ ಹಾಕಿ ಭಕ್ತಿ ಸಮರ್ಪಿಸಿದ್ದಾರೆ. ಕಳೆದ 22 ದಿನಗಳ ಅವಧಿಯಲ್ಲಿ ಮಠದ ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣದ ಮೊತ್ತ ಎಷ್ಟು ಗೊತ್ತಾ? ನಾಣ್ಯಗಳೂ ಸೇರಿದಂತೆ ರೂ. 2.35 ಕೋಟಿ. ಅಷ್ಟು ಮಾತ್ರವಲ್ಲದೆ ಭಕ್ತರು 65 ಗ್ರಾಂ ಚಿನ್ನ ಮತ್ತು 85 ಗ್ರಾಂ ಬೆಳ್ಳಿಯ ಆಭರಣಗಳನ್ನೂ ಹುಂಡಿಗೆ ಹಾಕಿದ್ದಾರೆ. ಹಣ ಎಣಿಕೆ ಕಾರ್ಯ ಮಠದ ಸಿಬ್ಬಂದಿಯಿಂದ ಸುಮಾರು 8 ಗಂಟೆಗಳ ಕಾಲ ನಡೆದಿದೆ ಎಂದು ರಾಘವೇಂದ್ರಸ್ವಾಮಿ ಮಠದ ಮೂಲಗಳಿಂದ ಗೊತ್ತಾಗಿದೆ.