ದೊಡ್ಮನೆಯಲ್ಲಿ ತ್ರಿವಿಕ್ರಮ್- ಮಂಜು ಮಧ್ಯೆ ಫೈಟ್! – ರೂಲ್ಸ್ ಬ್ರೇಕ್ ಮಾಡಿದ್ರಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಫಿನಾಲೆ ಹಂತಕ್ಕೆ ಬಂದಿದೆ. ದಿನದಿಂದ ದಿನಕ್ಕೆ ಆಟ ರೋಚಕತೆ ಪಡೆದುಕೊಂಡಿದೆ. ಫಿನಾಲೆಗೆ ಎಂಟ್ರಿಕೊಡಲು ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಇದೀಗ ತ್ರಿವಿಕ್ರಮ್ ಹಾಗೂ ಮಂಜು ಮಧ್ಯೆ ಜಗಳ ನಡೆದಿದೆ.
ಇದನ್ನೂ ಓದಿ: ಟೆಸ್ಟ್ ನ ಬೆಸ್ಟ್ ಕ್ಯಾಪ್ಟನ್ ವಿರಾಟ್ – ಕೊಹ್ಲಿಗಿದ್ದ ಅದೃಷ್ಟ ರೋಹಿತ್ ಗೆ ಬದಲಾಗಿದ್ದೆಲ್ಲಿ?
ಮನೆಯಲ್ಲಿನ ಸದಸ್ಯರಿಗೆ ನೀಡಿರುವ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದೆ ಹೆಚ್ಚು ಕಾಣುತ್ತದೆ. ಟಾಸ್ಕ್ ಪ್ರಕಾರ ಒಂದು ಕೈಯಲ್ಲಿ ಪೋಲ್ ಮತ್ತೊಂದು ಕೈಯಲ್ಲಿ ಬಣ್ಣದ ನೀರಿನ ಬಾಟಲ್ ಕೊಟ್ಟಿರುತ್ತಾರೆ. ಒಂದು ಬಾರಿಗೆ ಇಬ್ಬರು ಸ್ಪರ್ಧಿಗಳು ಆಡಬೇಕು. ಕೈಯಲ್ಲಿರುವ ಪೋಲ್ನಿಂದ ಹೊಡೆದು ಬಾಟಲ್ ಒಳಗಿನ ಬಣ್ಣದ ನೀರಿನ್ನು ಚೆಲ್ಲಬೇಕು. ಯಾರ ನೀರು ಹೆಚ್ಚಿಗೆ ಚೆಲ್ಲುತ್ತಾವೋ ಅವರು ಸೋತಂತೆ. ಒಂದು ವೇಳೆ ಬಾಟಲ್ ಕೆಳಗೆ ಬಿದ್ದರೂ ಸ್ಪರ್ಧಿ ಸೋತಾಗೆ.
ಸದ್ಯ ಈ ರೀತಿಯ ಗೇಮ್ ಆಡುವಾಗ ತ್ರಿವಿಕ್ರಮ್ ಮುಖ, ಮುಖಕ್ಕೆ ಮಂಜು ಪೋಲ್ನಿಂದ ಹೊಡೆದರು. ಹೆಂಗೆ ಬಿತ್ತು, ಹೇಗೆ ಬಿತ್ತು ಎಂದು ಹೇಳಿದರೆ, ಹೀಗೆ ಹೊಡೆದರೆ ಹೆಂಗೆ?. ನಾನು ಹೊಡೆಯುತ್ತೇನೆ ಎಂದು 2 ಸೆಕೆಂಡ್ಗೆ ಮಂಜು ಕೈಯಲ್ಲಿನ ಬಾಟಲ್ ಬೀಳಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಪೋಲ್ನಿಂದ ತ್ರಿವಿಕ್ರಮ್ ಹೊಡೆದಿರುವುದು ವಿಡಿಯೋದಲ್ಲಿದೆ. ಆದರೆ ಮಂಜು ಕೈಯಿಂದ ಬಾಟಲ್ ಕೆಳಗೆ ಬಿದ್ದಿಲ್ಲ. ಆಡುವಾಗ ಎಲ್ಲ ಸ್ಪರ್ಧಿಗಳು ನಿಯಮ ಮೀರಿದ್ದಾರೆ ಎನ್ನಲಾಗಿದೆ. ಆದರೆ ಈ ಟಾಸ್ಕ್ನಲ್ಲಿ ಯಾರು ಗೆದ್ದಿದಾರೆ ಎನ್ನುವುದು ಕುತೂಹಲ ವಿದೆ.
ಇನ್ನು ತ್ರಿವಿಕ್ರಮ್ ಹಾಗೂ ಮಂಜು ನಡುವೆ ಮಾತಿನ ಸಮರ ನಡೆದಿದ್ದು ಟಾಸ್ಕ್ನಲ್ಲೂ ಇಬ್ಬರು ಕೋಪದಲ್ಲೇ ಆಡಿದ್ದಾರೆ. ಮನೆ ಕ್ಯಾಪ್ಟನ್ ಆಗಿರುವ ರಜತ್ ಅವರು ಏನು ಮಾಡೋಕೆ ಆಗಲ್ಲ ಗುರು, ಕಾಪಾಡಿಕೋ ಎಂದು ಮಂಜುಗೆ ಹೇಳಿದ್ದಾರೆ. ಬಿಗ್ಬಾಸ್ ಪ್ರಕಾರ ಯಾರು ಟಾಸ್ಕ್ ಚೆನ್ನಾಗಿ ಪೂರ್ಣಗೊಳಿಸಿ ಗೆಲವು ಪಡೆಯುತ್ತಾರೋ ಅವರಿಗೆ ಫಿನಾಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರು ಆ ಅದೃಷ್ಣಶಾಲಿಗಳು ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.