ಎಕ್ಸಾಂ ಬರೆದು ಮನೆಗೆ ಬರುತ್ತಿದ್ದ ವಿದ್ಯಾರ್ಥಿಯ ಜೀವ ತೆಗೆದ ಗಾಳಿಪಟದ ದಾರ!

ಎಕ್ಸಾಂ ಬರೆದು ಮನೆಗೆ ಬರುತ್ತಿದ್ದ ವಿದ್ಯಾರ್ಥಿಯ ಜೀವ ತೆಗೆದ ಗಾಳಿಪಟದ ದಾರ!

ಪರೀಕ್ಷೆ ಬರೆದು ಖುಷಿಯಿಂದ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ, ಗಾಳಿಪಟದ ಮಾಂಜಾ ದಾರ ಯಮನಾಗಿ ಪರಿಣಮಿಸಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಗಾಂಧಿ ನಗರದ ಸಮೀಪದ ಪೂಣಾ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಪರೀಕ್ಷೆ ಮುಗಿಸಿಕೊಂಡು ವಿದ್ಯಾರ್ಥಿ ಬೈಕ್‌ನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ರಸ್ತೆಯಲ್ಲಿ ಅಡ್ಡಲಾಗಿ ಬಂದ ಮಾಂಜಾ ದಾರ ಏಕಾಏಕಿ ಆತನ ಕುತ್ತಿಗೆಗೆ ಸಿಲುಕಿದೆ.

ಇದನ್ನೂ ಓದಿ: ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ದುಬೈಗೆ ಏರ್‌ಲಿಫ್ಟ್ -ಗುಜರಾತ್ ಸರ್ಕಾರದಿಂದ ಗುಜರಾತ್ ಗರಿಮಾ ಪ್ರಶಸ್ತಿ

ಮಾಂಜಾ ದಾರ ಅತ್ಯಂತ ಹರಿತವಾಗಿದ್ದರಿಂದ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ವಿದ್ಯಾರ್ಥಿ ಬೈಕ್‌ನಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಗಾಳಿಪಟ ಹಾರಿಸುವ ವೇಳೆ ಬಳಸುವ ಮಾಂಜಾ ದಾರ ಮನುಷ್ಯರು ಮಾತ್ರವಲ್ಲದೆ, ಪಕ್ಷಿಗಳು ಹಾಗೂ ಪ್ರಾಣಿಗಳಿಗೂ ಅಪಾಯಕಾರಿಯಾಗಿದೆ. ರಸ್ತೆ ಬದಿಯಲ್ಲಿ, ವಿದ್ಯುತ್ ತಂತಿಗಳ ಬಳಿ ಅಥವಾ ವಾಹನ ಸಂಚಾರವಿರುವ ಪ್ರದೇಶಗಳಲ್ಲಿ ಮಾಂಜಾ ದಾರ ಬಳಕೆ ಮಾಡಿದರೆ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಘಟನೆ ಮತ್ತೊಮ್ಮೆ ಮಾಂಜಾ ದಾರದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಹಬ್ಬದ ಸಂಭ್ರಮದಲ್ಲಿ ಇತರರ ಜೀವಕ್ಕೆ ಅಪಾಯವಾಗದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

Kishor KV

Leave a Reply

Your email address will not be published. Required fields are marked *