ಮನೀಶ್ ದಾಂಪತ್ಯದಲ್ಲಿ ಬಿರುಕು – ಶೆಟ್ಟಿಗೆ ಕೈ ಕೊಟ್ರಾ ಪಾಂಡೆ?
ಪೋಸ್ಟ್ ಬಿಚ್ಚಿಟ್ಟ ಸತ್ಯವೇನು?

ಮನೀಶ್ ದಾಂಪತ್ಯದಲ್ಲಿ ಬಿರುಕು – ಶೆಟ್ಟಿಗೆ ಕೈ ಕೊಟ್ರಾ ಪಾಂಡೆ?ಪೋಸ್ಟ್ ಬಿಚ್ಚಿಟ್ಟ ಸತ್ಯವೇನು?

ಡಿವೋರ್ಸ್.. ಡಿವೋರ್ಸ್..‌ ಡಿವೋರ್ಸ್.. ಈಗಂತೂ ಸ್ಟಾರ್ ಜೋಡಿಗಳ  ಡಿವೋರ್ಸ್ ವಿಚಾರ ಭಾರಿ ಸುದ್ದಿಯಾಗುತ್ತಲೇ ಇದೆ.. ಹಾರ್ದಿಕ್ ಪಾಂಡ್ಯ-ನತಾಶಾ  ಡಿವೋರ್ಸ್ ಸುದ್ದಿಯ ನಡುವೆಯೇ ಸ್ಯಾಂಡಲ್​ವುಡ್​ನಲ್ಲಿ ನಿವೇದಿತಾ ಗೌಡ-ಚಂದನ್ ಶೆಟ್ಟಿ ಮತ್ತು ಯುವ ರಾಜ್​ ಕುಮಾರ್​ -ಶ್ರೀದೇವಿ ವಿಚ್ಛೇದನದ ವಿಚಾರ ಸದ್ದು ಮಾಡಿತ್ತು.. ಇದೀಗ ಟೀಮ್ ಇಂಡಿಯಾದ  ಆಟಗಾರನ ದಾಂಪತ್ಯದಲ್ಲಿ ಬಿರುಕು ಬಿದ್ದಿದ್ಯಾ ಅನ್ನೋ ಪ್ರಶ್ನೆ ಎದುರಾಗಿದೆ.‌. ಕನ್ನಡಿಗ ಮಾನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ಡಿವೋರ್ಸ್ ಪಡೆಯುತ್ತಿದ್ದಾರಾ ಎನ್ನೋ ಪ್ರಶ್ನೆ ಎದುರಾಗಿದೆ.‌.

ಟೀಮ್ ಇಂಡಿಯಾ ಆಟಗಾರ  ಮನೀಶ್ ಪಾಂಡೆ ಈ ಬಾರಿಯ ಐಪಿಎಲ್ ನಲ್ಲಿ ಕೆಕೆಆರ್ ತಂಡದಲ್ಲಿ ಆಡಿದ್ರು.. ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ರು.. ಆದ್ರೆ ಇದೀಗ ಪಾಂಡೆ ಬದುಕಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ‌ಚರ್ಚೆ ಶುರುವಾಗಿದೆ.. ಮನೀಶ್  ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಮನೀಶ್‌ ಪಾಂಡೆ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಸುದ್ದಿ ಸಾಮಾಜಿಕ ತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.. ಈ ಸ್ಟಾರ್ ಜೋಡಿ ಸದ್ಯದಲ್ಲೇ ದೂರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸುದ್ದಿ ವ್ಯಾಪಕವಾಗಿ ಹರಿದಾಡಲು ಕಾರಣವಾಗಿದ್ದು, ದಂಪತಿಯ ಇನ್‌ಸ್ಟಾಗ್ರಾಮ್‌  ಪೋಸ್ಟ್‌‌.

ಟೀಮ್ ಇಂಡಿಯಾ ಆಟಗಾರ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ತಮ್ಮ  ಇನ್‌ಸ್ಟಾಗ್ರಾಮ್‌ ನಲ್ಲಿ ಹಾಕಿಕೊಂಡಿದ್ದ ಮದುವೆಯ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಈ ಬೆನ್ನಲ್ಲೇ  ಪಾಂಡೆ ಬಾಳಲ್ಲಿ ಎಲ್ಲವೂ ಸರಿಯಿಲ್ಲ.. ಇಬ್ಬರೂ ಪರಸ್ಪರ ಬೇರೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.  ಆಶ್ರಿತಾ ಜೊತೆ ಮನೀಷ್ ಅವರು ವಿಚ್ಛೇದನ ಪಡೆದಿದ್ದಾರೆ ಎಂದು ಪೋಸ್ಟ್​​ಗಳನ್ನು ಹಾಕುತ್ತಿದ್ದಾರೆ.

ಮನೀಶ್ ಇತ್ತೀಚೆಗೆ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದಾಗ ಈ ಗಾಸಿಪ್ ಶುರುವಾಯ್ತು.. ಆಟಗಾರನು ತನ್ನ ಇನ್‌ಸ್ಟಾ ಹ್ಯಾಂಡಲ್‌ನಲ್ಲಿ ತನ್ನ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕೋಲ್ಕತ್ತಾ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದಾಗ ಮನೀಶ್‌ ಪಾಂಡೆ, ಟ್ರೋಫಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಇದ್ರಲ್ಲಿ ಅವರ ಪತ್ನಿ ಮಿಸ್ ಆಗಿದ್ದು ಎದ್ದು ಕಾಣುತ್ತದೆ. ಬಳಿಕ ಈ ಇಬ್ಬರು ಮದುವೆ ಪೋಸ್ಟ್ ಅನ್ನ ಕೂಡ ಡಿಲೀಟ್ ಮಾಡಿರೋದು ಭಾರಿ ಚರ್ಚೆಗೆ ಗ್ರಾಸವಾಗಿದೆ..

ಅಂದಹಾಗೆ ಮನೀಶ್ ಪಾಂಡೆ ಹಾಗೂ ಆಶ್ರಿತಾ ಅವರದ್ದು ಲವ್ ಮ್ಯಾರೆಜ್‌‌.. ಮದುವೆಗೂ ಮುನ್ನ ಗುಟ್ಟಾಗಿ ಡೇಟಿಂಗ್ ಮಾಡ್ತಾ ಇದ್ರು.. ಇವರಿಬ್ರು ಡೇಟಿಂಗ್ ಮಾಡ್ತಿರುವ ಬಗ್ಗೆ ಎಲ್ಲೂ ಒಂಚೂರು ಸುಳಿವು ಬಿಟ್ಟುಕೊಟ್ಟಿರ್ಲಿಲ್ಲ.. ಅವರ ಮದುವೆಗೆ ಒಂದು ದಿನ ಮೊದಲು ಸಂದರ್ಶನವೊಂದರಲ್ಲಿ ಮನೀಶ್ ಈ ಸುದ್ದಿಯನ್ನು ರಿವೀಲ್ ಮಾಡಿದ್ರು..ಆ ಮೇಲೆಯೇ ಈ ವಿಚಾರ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಾಗಿದ್ದು..‌ 2019ರಲ್ಲಿ ಮನೀಶ್‌ ಪಾಂಡೆ,  ನಟಿ ಆಶ್ರಿತಾ ಶೆಟ್ಟಿ ಅವರನ್ನು ಕೈ ಹಿಡಿದರು.  ಮನೀಶ್ ಪಾಂಡೆ ಪತ್ನಿ, ತುಳು ಚಿತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡರು. ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಸಾಮಾಜಿಕ ತಾಣದಲ್ಲಿ ಡಿವರ್ಸ್‌ ಸುದ್ದಿ ಹರಿದಾಡುತ್ತಿದೆ.

ಮನೀಶ್ ಫೋಟೋಗಳ ಲಿಸ್ಟ್ ನಲ್ಲಿ ಪತ್ನಿ ಆಶ್ರಿತಾ ಜತೆಗಿರುವ ಫೋಟೋ ಮಾಯವಾಗಿದೆ. ಇದು ಅಭಿಮಾನಿಗಳ ಶಂಕೆಗೆ ಕಾರಣವಾಗಿದ್ದು ಇಬ್ಬರೂ ಪರಸ್ಪರ ಬೇರೆ ಬೇರೆಯಾಗುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಮನೀಶ್ ಪಾಂಡೆ, ಆಶ್ರಿತಾ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರಿಬ್ಬರ ನಡುವೆ ಏನಾದರೂ ಸಮಸ್ಯೆ ಇದೆಯಾ? ಯಾಕೆ ಬೇರೆಯಾಗುತ್ತಿದ್ದಾರೆ ಅಂತಾ ಅಭಿಮಾನಿಗಳು ಮಾತ್ರ ಕೇಳ್ತಾ ಇದ್ದಾರೆ..‌

ಅಂದಹಾಗೆ ಮನೀಶ್‌ ಪಾಂಡೆ  ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಅಂಡರ್‌ 19 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾದ ಸದಸ್ಯರಾಗಿದ್ರು..  ಈ ವರ್ಷದ ಐಪಿಎಲ್ ನಲ್ಲಿ ಕೆಕೆಆರ್ ತಂಡ ಸೇರಿದ್ದ  ಮನೀಶ್ ಗೆ ಒಂದೇ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಸಿಕ್ಕಿತ್ತು.. ಅದ್ರಲ್ಲಿ 42 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ರು..  ಇದೀಗ ಪಾಂಡೆ ದಾಂಪತ್ಯದಲ್ಲಿ ಬಿರುಕು ಬಿದ್ದಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ.. ಹರಿದಾಡುತ್ತಿರುವ ಸುದ್ದಿ ಸುಳ್ಳಾಗ್ಲಿ ಅಂತಾ ಫ್ಯಾನ್ಸ್ ಕೇಳಿಕೊಳ್ಳುತ್ತಿದ್ದಾರೆ..‌

Shwetha M

Leave a Reply

Your email address will not be published. Required fields are marked *