ಏಷ್ಯಾಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಭಾರತದ ಮಣಿಕಾ ಬಾತ್ರಾ
ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಗರಿಮೆ

ಏಷ್ಯಾಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಭಾರತದ ಮಣಿಕಾ ಬಾತ್ರಾಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಗರಿಮೆ

ಬ್ಯಾಂಕಾಕ್: ಏಷ್ಯಾಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಮಣಿಕಾ ಬಾತ್ರಾ ಸೆಮಿಫೈನಲ್ ಗೆ ತಲುಪಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಟೂರ್ನಿಯ ಎಂಟರಘಟ್ಟದ ಪಂದ್ಯದಲ್ಲಿ ಮಣಿಕಾ 6-11, 11-6, 11-5, 11-7, 8-11, 9-11, 11-9 ರಿಂದ (4-3) ತನಗಿಂತ ಮೇಲಿನ ರ್ಯಾಂಕಿನ ಚೀನಾ ತೈಪೆ ಆಟಗಾರ್ತಿ ಚೆನ್ ಜು ಯು ಅವರನ್ನು ಪರಾಭವಗೊಳಿಸಿದರು. ಭಾರತದ ಆಟಗಾರ್ತಿ, ವಿಶ್ವ ರ್ಯಾಂಕಿಂಗ್ 44 ನೇ ಸ್ಥಾನದಲ್ಲಿದ್ದರೆ, ಚೆನ್ 23ನೇ ಕ್ರಮಾಂಕದಲ್ಲಿದ್ದಾರೆ.

ಇದನ್ನೂ ಓದಿ: ಹಾಲಿ ಕೋಚ್‌ಗೆ ಮಾತಿನಲ್ಲೇ ಚುಚ್ಚಿದ ಮಾಜಿ ಕೋಚ್ -ವಿಶ್ರಾಂತಿ ಬಗ್ಗೆ ಶಾಸ್ತ್ರಿ ಪಾಠ

ಇದಕ್ಕೂ ಮೊದಲು ಮಣಿಕಾ ಅವರು ಪ್ರೀಕ್ವಾರ್ಟರ್ ಫೈನಲ್ ನಲ್ಲಿ ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ, ಚೀನಾದ ಚೆನ್ ಷಿಂಗ್  ಟಾಂಗ್ ಅವರನ್ನು ಸೋಲಿಸಿದ್ದರು.

ಸೆಮಿಫೈನಲ್ ನಲ್ಲಿ ಮಣಿಕಾ ಅವರು ಕೊರಿಯಾದ ಜಿಯೊನ್ ಜಿಹಿ ಮತ್ತು ಮಿಮೊ ಇಟೊ ನಡುವಣ ಪಂದ್ಯದ ವಿಜೇತರನ್ನು ಎದುರಿಸಿದರು.

suddiyaana