1962ರಲ್ಲಿ ಭಾರತದ ಮೇಲೆ ಚೀನಾ ದಾಳಿ – ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ!

1962ರಲ್ಲಿ ಭಾರತದ ಮೇಲೆ ಚೀನಾ ದಾಳಿ – ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ!

ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 1962ರ ಅಕ್ಟೋಬರ್‌ನಲ್ಲಿ ಭಾರತದ ಮೇಲೆ ಚೀನಾ ಆಕ್ರಮಣ ಎಸಗಿತು ಎನ್ನಲಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಭಾರಿ ವಿವಾದ ಎಬ್ಬಿಸಿದೆ.

ಇದನ್ನೂ ಓದಿ:   ವಿಧಾನ ಪರಿಷತ್ ಚುನಾವಣೆಗೆ 20 ಅಭ್ಯರ್ಥಿಗಳ ಕಾಂಗ್ರೆಸ್ ಶಾರ್ಟ್​ ಲಿಸ್ಟ್​ ರೆಡಿ!‌ – ಕೈ ಟಿಕೆಟ್‌ ಯಾರ್ಯಾರಿಗೆ?  

ದೆಹಲಿಯಲ್ಲಿ ನೆಹರೂಸ್ ಫಸ್ಟ್ ರಿಕ್ರೂಟ್ಸ್ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಣಿಶಂಕರ್ ಅಯ್ಯರ್, 1962ರ ಅಕ್ಟೋಬರ್‌ನಲ್ಲಿ ಭಾರತದ ಮೇಲೆ ಚೀನಾ ಆಕ್ರಮಣ ಎಸಗಿತು ಎನ್ನಲಾಗಿದೆ ಎಂದು ಭಾರತ- ಚೀನಾ ಯುದ್ಧದ ಕುರಿತು ಹೇಳಿದ್ದಾರೆ, ಇದೀಗ ಈ ಹೇಳಿಕೆ ವಿವಾದಕ್ಕೆ ಈಡಾಗಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

38,000 ಚದರ ಕಿಲೋಮೀಟರ್ ನಷ್ಟು ನಮ್ಮ ಭೂಭಾಗವನ್ನು ಆಕ್ರಮಿಸಿಕೊಂಡ ಅಂದಿನ ಚೀನಾ ದಂಡಯಾತ್ರೆಯನ್ನೇ ಚರಿತ್ರೆಯ ಪುಟಗಳಿಂದ ಅಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ ಎಂದು ಕಿಡಿಕಾರಿದೆ. ಈ ಹಿಂದೆಯೂ ಚೀನಾಗೆ ಅನುಕೂಲವಾಗಿ ಕಾಂಗ್ರೆಸ್ ವರ್ತಿಸಿದೆ ಅಂತಾ ಆರೋಪಿಸಿದೆ. ಈ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್ ಎಂದಿನಂತೆ, ಅಯ್ಯರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದೆ.

2020ರ ಲಡಾಖ್ ಘರ್ಷಣೆ ಪ್ರಸ್ತಾಪಿಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಏನೂ ಆಗಿಲ್ಲ ಎಂಬಂತೆ ಮಾತಾಡಿದ್ರು. ಇದು ಆರೋಪ ಅಷ್ಟೇ ಎಂದಿದ್ರು. ಎಂಬುದನ್ನು ನೆನಪಿಸಿ ಬಿಜೆಪಿಗೆ ಟಕ್ಕರ್ ನೀಡಿದೆ. ಈ ಮಧ್ಯೆ ಆಕಸ್ಮಾತ್ ಆಗಿ ಆರೋಪ ಎಂಬ ಪದ ಬಳಸಿದೆ ಎಂದಿರುವ ಮಣಿಶಂಕರ್ ಅಯ್ಯರ್, ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

Shwetha M