ಮಾವು ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣಿನ ಪ್ರದರ್ಶನ –ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟ..!

ಮಾವು ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣಿನ ಪ್ರದರ್ಶನ –ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟ..!

ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ನಾನಾ ರೀತಿಯ ತಳಿಗಳು ಇರುತ್ತವೆ. ಆಯಾ ತಳಿಗೆ ತಕ್ಕಂತೆ ದರವೂ ಫಿಕ್ಸ್ ಆಗಿರುತ್ತದೆ. ಆದರೆ, ಮಾವಿನ ಹಣ್ಣಿನ ಕೆ.ಜಿಗೆ ಲಕ್ಷ ಲಕ್ಷ ರೂಪಾಯಿ ಇರುತ್ತದೆ ಅನ್ನೋದು ಕೂಡಾ ನಿಜವೇ. ಇದೀಗ ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ ಮಿಯಾಝಾಕಿ ಮಾವಿನ ಹಣ್ಣು ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 1.82 ಲಕ್ಷ ಮೌಲ್ಯವನ್ನು ಹೊಂದಿರುವ ಈ ದುಬಾರಿ ಮಾವನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದೀಗ ಈ ಮಾವಿನ ಹಣ್ಣು ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಇದನ್ನೂ ಓದಿ: ಮೊಟ್ಟೆ ಮೊದಲಾ.. ಕೋಳಿ ಮೊದಲಾ..? – ವೈಜ್ಞಾನಿಕ ಅಧ್ಯಯನ ಏನು ಹೇಳುತ್ತೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಜಪಾನ್ ಮೂಲದ ಮಿಯಾಝಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಖ್ಯಾತಿ ಹೊಂದಿದೆ. ಜೂನ್ 17ರಿಂದ 19ರ ವರೆಗೆ ಛತ್ತೀಸ್‌ಗಡದ ರಾಯ್ಪುರದಲ್ಲಿ ಮಾವಿನ ಮೇಳವನ್ನು  ಆಯೋಜಿಸಲಾಗಿತ್ತು. ಈ ಮಾವು ಕೆ.ಜಿಗೆ ಸುಮಾರು 2.70 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಕೋಲ್ ಇಂಡಿಯಾದ ನಿವೃತ್ತ ಮ್ಯಾನೇಜರ್ ಆರ್ಪಿ ಗುಪ್ತಾ ಈ ದುಬಾರಿ ಮಾವನ್ನು ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಈ ಮಾವಿನ ಹಣ್ಣು ಬೆಳೆಯಬೇಕೆಂದರೆ ಅಷ್ಟೇ ಕಾಳಜಿವಹಿಸಬೇಕು. ಸಾಮಾನ್ಯವಾಗಿ ಮಾವಿನ ಮರಗಳು ಹೂ ಬಿಟ್ಟ ಮೇಲೆ ಹಸಿರು ಕಾಯಿ ಬಿಡುತ್ತದೆ. ನಂತರ ಕಾಯಿ ಮಾಗಿ ಹಣ್ಣಾಗುವಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ್ರೆ, ಈ ಮಿಯಾಝಾಕಿ ಮಾವು ಕಾಯಿ ಇರುವಾಗ ಕಡು ನೇರಳೆ ಬಣ್ಣ ಹೊಂದಿರುತ್ತದೆ. ಅದು ಮಾಗಿ ಹಣ್ಣಾದ ಮೇಲೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಹಣ್ಣು ಸಾಮಾನ್ಯವಾಗಿ 350 ಗ್ರಾಮ್ ಇದ್ದು ಸಕ್ಕರೆ ಅಂಶ ಶೇಕಡಾ 15 ರಷ್ಟು ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಸೂರ್ಯನ ಬೆಳಕು ಬಿದ್ದ ಮಾವಿನ ಭಾಗವು ಒಂದು ರೀತಿಯ ರುಚಿಯನ್ನು ನೀಡಿದರೆ ಮತ್ತೊಂದು ಭಾಗ ವಿಭಿನ್ನ ರುಚಿಯನ್ನು ನೀಡುತ್ತದೆ. ಇದು ಈ ಮಾವಿನ ಹಣ್ಣಿನ ವಿಶೇಷತೆಯಾಗಿದೆ. ಇನ್ನು ಈ ಮಾವು ಮೇಳದಲ್ಲಿ ಪ್ರದರ್ಶನದಲ್ಲಿ ಇರಿಸಲಾದ ಮಾವು 639 ಗ್ರಾಂ. ತೂಕವನ್ನು ಹೊಂದಿದೆ.

suddiyaana