ಬೆಂಗಳೂರಿನ 8 ಕಡೆ ಮಾವು ಮತ್ತು ಹಲಸು ಮೇಳ – ನಮ್ಮ ಮೆಟ್ರೋ ನಿಲ್ದಾಣದಲ್ಲೂ ಮಾವು ಮೇಳ ಆಯೋಜನೆ

ಬೆಂಗಳೂರಿನಲ್ಲಿ ಮಾವು ಮತ್ತು ಹಲಸಿನ ಘಮ ಹರಡಲು ತಯಾರಿ ನಡೆದಿದೆ. ಮಾವು ಪ್ರಿಯರಿಗೆ ಇದು ಸಿಹಿ ಸುದ್ದಿ ಕೂಡಾ ಹೌದು. ಮೇ 8 ರಿಂದ 17 ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮಾವು ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ:ಮಲೆ ಮಹದೇಶ್ವರನ ಬೆಟ್ಟದಲ್ಲಿ ಶ್ವೇತ ಜಿಂಕೆಯ ದರ್ಶನ – ಸಫಾರಿಗೆ ಬಂದವರಿಗೆ ಸಂಭ್ರಮವೋ ಸಂಭ್ರಮ
ಬೆಂಗಳೂರಿನಲ್ಲಿ ಈ ಬಾರಿ ಮಾವು ಮತ್ತು ಹಲಸು ಪ್ರಿಯರಿಗೆ ಸುಗ್ಗಿ. ಯಾಕೆಂದರೆ, ಬೆಂಗಳೂರಿನ 8 ಕಡೆ ಮಾವು ಮತ್ತು ಹಲಸಿನ ಮೇಳ ನಡೆಯಲಿದೆ. ಮೇ 8 ರಿಂದ 17 ರವರೆಗೆ ಈ ಮಾವು ಮೇಳ ನಡೆಯಲಿದೆ. ಕಬ್ಬನ್ ಪಾರ್ಕ್ ಬ್ಯಾಂಡ್ ಸ್ಟ್ಯಾಂಡ್ ಬಳಿ ಕರ್ನಾಟಕ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಮಾವು ಮೇಳ ನಡೆಯಲಿದೆ. ಇದೇ ಮೊದಲ ಬಾರಿಗೆ ನಗರದ 8 ಕಡೆಗಳಲ್ಲಿ ಮಾವು ಮೇಳ ಆಯೋಜಿಸಲಾಗಿದೆ.
ಉತ್ತರ ಬೆಂಗಳೂರು – ಸಹಕಾರ ನಗರ ಗಣೇಶ ಗ್ರೌಂಡ್ಸ್, ಪೂರ್ವ ಬೆಂಗಳೂರು – ವೈಟ್ ಫೀಲ್ಡ್ ಗ್ರೌಂಡ್, ದಕ್ಷಿಣ ಬೆಂಗಳೂರು – ಬಸವನಗುಡಿ ನ್ಯಾಷನಲ್ ಕಾಲೇಜು ಗ್ರೌಂಡ್, ಪಶ್ಚಿಮ ಬೆಂಗಳೂರು – ಜಿಬಿಎ ಮೈದಾನ, ನಮ್ಮ ಮೆಟ್ರೋ ನಿಲ್ದಾಣದಲ್ಲೂ ಈ ಬಾರಿಯ ಮಾವು ಮೇಳ ನಡೆಯಲಿದೆ. ಈ ಬಾರಿ ಕೂಡ ರಾಷ್ಟ್ರೀಯ, ಅಂತರಾಷ್ಟ್ರೀಯ ಮಾವುಗಳ ಪ್ರದರ್ಶನ, ಖರೀದಿಗೆ ಅವಕಾಶ ನೀಡಲಾಗಿದೆ.
50 ಮಾವು ಮಳಿಗೆ ಹಾಗೂ 7 ಹಲಸು ಮಳಿಗೆ ಇರಲಿದೆ. ಖುದ್ದು ರೈತರೇ ನೇರವಾಗಿ ಮೇಳದಲ್ಲಿ ಮಾವು ಮಾರಾಟ ಮಾಡಲಿದ್ದಾರೆ. ಒಂದೇ ಜಾಗದಲ್ಲಿ ಮೇಳ ಮಾಡಿದರೆ ಜನರಿಗೆ ಬರುವುದು ಕಷ್ಟ ಆಗಲಿದೆ. ಹೀಗಾಗಿ ಈ ಬಾರಿ ನಗರದ ಹಲವು ಭಾಗದಲ್ಲಿ ಮಾವು ಮೇಳ ನಡೆಯಲಿದ್ದು, ಇಳುವರಿ ಬಂದಂತೆ ಒಂದೊಂದು ಕಡೆಗಳಲ್ಲಿ ಮಾವು ಮೇಳ ನಡೆಸಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಮಾವು ನಿಗಮ ಅಧ್ಯಕ್ಷ ಮುದ್ದುಗೌಡ, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಾವು ಬೆಳೆ ಬಂದಿದೆ. ಈ ಬಾರಿ ನಮ್ಮಲ್ಲಿ ಇಳುವರಿ ಕಡಿಮೆ ಆಗುವ ಆತಂಕ ಇತ್ತು, ಆದರೆ ಈ ಬಾರಿ ನಿರೀಕ್ಷೆಗೂ ಮೀರಿದ ಬೆಳೆ ಬಂದಿದೆ. 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬೆಳೆಯಲಾಗಿದೆ. ಮಾವು ಮೇಳದಲ್ಲಿ 50 ಮಾವು ಮಳಿಗೆ ಹಾಗೂ 7 ಹಲಸು ಮಳಿಗೆ ಇರಲಿದೆ. ಖುದ್ದು ರೈತರೇ ನೇರವಾಗಿ ಮೇಳದಲ್ಲಿ ಮಾವು ಮಾರಾಟ ಮಾಡುವುದರಿಂದ ರೈತರಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ. ಈ ಮೇಳದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಭಾಗಿಯಾಗಲಿದ್ದಾರೆ. ಒಂದೇ ಸ್ಥಳದಲ್ಲಿ ನಿಮಗೆ ಸುಮಾರು 40 ರಿಂದ 50 ತಳಿಯ ಮಾವು ಖರೀದಿಗೆ ಲಭ್ಯವಾಗಲಿದೆ. ವಿಶೇಷ ಎಂದರೇ, 10 ರಿಂದ 12 ತಳಿಯ ಹಲಸು ಕೂಡ ಲಭ್ಯವಿರಲಿದೆ. ವಿಶೇಷವಾಗಿ ಉತ್ತರ ಕನ್ನಡದಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿರುವ ಕರಿ ಇಶಾಡ್ ಮಾವು ಕೂಡ ಮೇಳದಲ್ಲಿ ಲಭ್ಯ ಇರಲಿದೆ.

ನೋಡಿರಿ

