ಬೆಂಗಳೂರಲ್ಲಿ ಗಿಳಿವಿಂಡು ಕಲರವ -ಕನ್ನಡ ಉಳಿಯಬೇಕು.. ಸಾಹಿತ್ಯದ ಭಾಷೆ ಹೇಳಿಕೊಡಬೇಕು – ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರಲ್ಲಿ ಗಿಳಿವಿಂಡು ಕಲರವ -ಕನ್ನಡ ಉಳಿಯಬೇಕು.. ಸಾಹಿತ್ಯದ ಭಾಷೆ ಹೇಳಿಕೊಡಬೇಕು – ಡಾ. ಪುರುಷೋತ್ತಮ ಬಿಳಿಮಲೆ

ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಬೆಂಗಳೂರು ವಲಯದ ಗಿಳಿವಿಂಡು ಪ್ರಾಂತೀಯ ಸಮಾವೇಶ ಸಮಾರಂಭ ಇಂದು ನಡೆಯಿತು. ಈ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಶಾಲೆಗಳಲ್ಲಿ ಕನ್ನಡದ ಕಲಿಕೆ ಕಡಿಮೆಯಾಗಿದೆ. ಇನ್ನು ಕೆಲ ವರ್ಷಗಳಲ್ಲಿ ಕನ್ನಡ ಬರೆಯುವವರ ಸಂಖ್ಯೆ ಕಡಿಮೆಯಾಗಬಹುದು. ಬರೀ ಮಾತನಾಡುವ ಭಾಷೆಯಾಗಿ ಮಾತ್ರ ಕನ್ನಡ ಉಳಿಯಬಹುದು. ಕನ್ನಡ ಉಳಿಯಬೇಕು.. ಸಾಹಿತ್ಯದ ಭಾಷೆ ಹೇಳಿಕೊಡಬೇಕು ಎಂದು ಹೇಳಿದರು.

ಇದನ್ನೂ ಓದಿ:ನಾವು ಬೆಂಗಳೂರಿನಲ್ಲಿ7 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿ ಮುಚ್ಚಿದ್ದೇವೆ – ಬಿಜೆಪಿ ಏನ್ ಮಾಡಿದೆ ಡಿಕೆಶಿ ಪ್ರೆಶ್ನೆ?

ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಬೆಂಗಳೂರು ವಲಯದ ಗಿಳಿವಿಂಡು ಪ್ರಾಂತೀಯ ಸಮಾವೇಶ ಸಮಾರಂಭ ಇಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿ.ವಿ.ರಾಮನ್ ಸಭಾಂಗಣದಲ್ಲಿ ನಡೆದಿದೆ.  ಮಂಗಳೂರು ವಿವಿ ಕನ್ನಡ ವಿಭಾಗದ ಹಳೆ ವಿದ್ಯಾರ್ಥಿ, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ  ರಂಗೇಗೌಡ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಇನ್ನು ಮಂಗಳೂರು ವಿಶ್ವವಿದ್ಯಾನಿಲಯ ಗಿಳಿವಿಂಡು ಅಧ್ಯಕ್ಷರು ಪ್ರೊ. ಬಿ ಶಿವರಾಮ ಶೆಟ್ಟಿ, ಸಾಹಿತಿಗಳಾದ ಸಿ.ಪಿ. ನಾಗರಾಜ್, ವರದಾ ಶ್ರೀನಿವಾಸ, ಸಂಧ್ಯಾರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ರು. ಈ ವೇಳೆ ಮಂಗಳೂರು ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಉಳಿವಿಗಾಗಿ ಗಿಳಿವಿಂಡು ಸಂಘಟನೆ

ಮಂಗಳೂರು ವಿವಿ ಎಸ್​ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರೂಪುಗೊಂಡ ಗಿಳಿವಿಂಡು, ಸ್ನಾತಕೋತ್ತರ ಶಿಕ್ಷಣದ ಬಳಿಕ ಚದುರಿ ಹೋಗಿರುವ ಎಲ್ಲಾ ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡ್ತಿರೋ ಸಂಘಟನೆ. 1968ರಲ್ಲಿ ಆರಂಭಗೊಂಡ ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರ ಮತ್ತು 1980ರಲ್ಲಿ ಆರಂಭಗೊಂಡ ಮಂಗಳೂರು ವಿವಿ ಕನ್ನಡ ವಿಭಾಗದ ಎಂಎ, ಎಂಫಿಲ್, PHD ಅಭ್ಯರ್ಥಿಗಳು ಮತ್ತು ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳನ್ನು ಒಟ್ಟುಗೂಡಿಸುವ ಕೆಲಸವನ್ನು ಗಿಳಿವಿಂಡು ಸಂಘಟನೆ ನಡೆಸುತ್ತಾ ಬರುತ್ತಿದೆ. 2015ರಲ್ಲಿ ಗಿಳಿವಿಂಡು ಮೊದಲ ಸಮಾವೇಶ ನಡೆದಿತ್ತು. ಬಳಿಕ 2016, 2019ರಲ್ಲೂ 2 ಮತ್ತು 3ನೇ ಸಮಾವೇಶಗಳು ಮಂಗಳೂರಿನಲ್ಲಿ ನಡೆದಿವೆ. 2025ರ ನವೆಂಬರ್​ 9ರ ಭಾನುವಾರ ಮಂಗಳ ಗಂಗೋತ್ರಿಯಲ್ಲಿ ಗಿಳಿವಿಂಡಿನ 4ನೇ ಸಮಾವೇಶ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರು ವಲಯದ ಪ್ರಾಂತೀಯ ಸಮಾವೇಶ ಶನಿವಾರ ಬೆಂಗಳೂರಿನಲ್ಲಿ ನಡೆಯಿತು.

Shwetha M