ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ – ಇಬ್ಬರು ಕಾರ್ಮಿಕರು ಸಾ*ವು

ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ –  ಇಬ್ಬರು ಕಾರ್ಮಿಕರು ಸಾ*ವು

ಸುರತ್ಕಲ್ ಸಮೀಪದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ ಲಿ.ನ ಎಚ್2ಎಸ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಭೀಕರ ಘಟನೆ ನಡೆದಿದೆ.  ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಉತ್ತರಪ್ರದೇಶ ಮೂಲದ ದೀಪ್‌ಚಂದ್ರ ಮತ್ತು ಕೇರಳದ ನಿಖಿಲ್ ಪ್ರಸಾದ್ ಮೃತ ದುರ್ದೈವಿಗಳು.. ಗಾಯ ಗೊಂಡವರನ್ನ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಈ ಮೂವರು ಕಾರ್ಮಿಕರು ಎಂಆರ್‌ಪಿಎಲ್‌ನ  ಎಚ್2ಎಸ್ ಘಟಕದ ಶೇಖರಣಾ ಪ್ರದೇಶದಲ್ಲಿ ನಿರ್ವಹಣೆ ಕಾರ್ಮಿಕರಾಗಿ ದುಡಿಯುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಸಣ್ಣ ಪ್ರಮಾಣದ ಎಚ್‌2ಎಸ್‌ ಅನಿಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಮಾಸ್ಕ್ ಧರಿಸಿ ಅನಿಲವನ್ನು ಪರೀಕ್ಷಿಸುವಾಗ ಈ ದುರ್ಘಟನೆ ಸಂಭವಿಸಿದೆ. ಬಳಿಕ ಎಂಆರ್‌ಪಿಎಲ್‌ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದೆ.

ಮೃತರನ್ನು ದೀಪ್ ಚಂದ್ರ  33  ಮತ್ತು ಬಿಜಿಲ್ ಪ್ರಸಾದ್  ಎಂದು ಗುರುತಿಸಲಾಗಿದೆ. ಇಬ್ಬರೂ ಎಂಆರ್‌ಪಿಎಲ್‌ ಘಟಕದಲ್ಲಿ ಅನುಭವಿ ಆಪರೇಟರ್‌ಗಳಾಗಿದ್ದರು. ವಿಪತ್ತು ಸಂಭವಿಸಿದಾಗ ರಕ್ಷಣೆಗೆ ಧಾವಿಸಿದ ಗದಗಿನ ವಿನಾಯಕ ಎಂಬುವವರಿಗೆ ಗಾಯಗಳಾಗಿವೆ. ಅವರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.  ಮೃತರ ಕುಟುಂಬದವರ ಹೇಳಿಕೆ ಆಧಾರದ ಮೇಲೆ ಕೇಸ್ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Kishor KV