ಕೆಜಿಎಫ್ ಸಿನಿಮಾ ಖ್ಯಾತಿಯ ನಟ ನಿಧನ! – ಮಂಗಳೂರು ದಿನೇಶ್ ಇನ್ನಿಲ್ಲ!

ಸ್ಯಾಂಡಲ್‌ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಇಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ಇಂದು ಬೆಳಗ್ಗೆ 3.30ಕ್ಕೆ ನಿಧನರಾಗಿದ್ದಾರೆ.
ಇದನ್ನೂ ಓದಿ:ದಿನಕ್ಕೆ ಒಂದು ಬಾರಿಯೂ ಕೂದಲು ಬಾಚೋದಿಲ್ವಾ? – ತಲೆಯಲ್ಲಿರುವ ಕೂದಲು ಖಾಲಿಯಾಗೋ ಮೊದಲು ಈ ವಿಚಾರ ತಿಳ್ಕೊಳಿ!
ನಟ ದಿನೇಶ್ ಅವರಿಗೆ ಕಳೆದ ಒಂದು ವಾರದ ಹಿಂದೆ ಬ್ರೇನ್ ಹ್ಯಾಮರೇಜ್ ಆಗಿತ್ತು. ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ಇಂದು ಬೆಳಗ್ಗೆ 3.30ಕ್ಕೆ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಪವನ್, ಸಜ್ಜನ್ ಹಾಗೂ ಪತ್ನಿ ಭಾರತಿ ಡಿ. ಪೈ ಅವರನ್ನು ಅಗಲಿದ್ದಾರೆ. ದಿನೇಶ್ ಅವರ ಪಾರ್ಥಿವ ಶರೀರವನ್ನು ನಾಳೆ (ಮಂಗಳವಾರ) ಬೆಳಿಗ್ಗೆ 8 ಘಂಟೆಯಿಂದ ಲಗ್ಗೆರೆಯ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಇನ್ನು ಕಾಂತಾರ ಚಿತ್ರದ ಶೂಟಿಂಗ್ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು.
ಬಣ್ಣದ ಲೋಕದಲ್ಲಿ ದಿನೇಶ್ ಮಂಗಳೂರು ಅವರು ಅಪಾರ ಅನುಭವ ಹೊಂದಿದ್ದರು. ಅವರು ಕೆಜಿಎಫ್, ಉಳಿದವರು ಕಂಡಂತೆ, ರಿಕ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ನೋಡಿರಿ

