ಕರಾವಳಿಯಲ್ಲಿ ಸ್ಥಾಪನೆಯಾಯ್ತಾ ಹೊಸ ಉಗ್ರ ಸಂಘಟನೆ?
ಮಂಗಳೂರು ಸ್ಫೋಟ ಕೇಸ್ ಗೆ ಬಿಗ್ ಟ್ವಿಸ್ಟ್?

ಕರಾವಳಿಯಲ್ಲಿ ಸ್ಥಾಪನೆಯಾಯ್ತಾ ಹೊಸ ಉಗ್ರ ಸಂಘಟನೆ?ಮಂಗಳೂರು ಸ್ಫೋಟ ಕೇಸ್ ಗೆ ಬಿಗ್ ಟ್ವಿಸ್ಟ್?

ಮಂಗಳೂರು: ನಾಗುರಿಯಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ನಡೆದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ನಿಂದ ಮತ್ತೊಂದು ಉಗ್ರ ಸಂಘಟನೆಯ ಸ್ಥಾಪನೆಗೆ ಕರ್ನಾಟಕ ವೇದಿಕೆಯಾಗುತ್ತಿದೆಯಾ ಎಂಬ ಗಂಭೀರ ಪ್ರಶ್ನೆ ಎಲ್ಲರಲ್ಲೂ ಎದ್ದಿದೆ.

ಈ ಹಿಂದೆ ಭಟ್ಕಳದ ಯಾಸಿನ್‌ ಹಾಗೂ ರಿಯಾಜ್ ಭಟ್ಕಳ ಇಂಡಿಯನ್ ಮುಜಾಹಿದ್ದೀನ್ ನ ಸಹ ಸಂಸ್ಥಾಪಕರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಘಟನೆ ಭೀತಿ ಹುಟ್ಟಿಸಿತ್ತು. ಇದೀಗ  ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಹೊಸ ಸಂಘಟನೆಯನ್ನು ಬಹಿರಂಗವಾಗಿ ಪ್ರಕಟ ಮಾಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಂತೆ ಇದು ಕೂಡ ಆ ಸಾಲಿಗೆ ಸೇರ್ಪಡೆಯಾಗುತ್ತಾ ಎನ್ನುವ ಅನುಮಾನಗಳು ಮೂಡಿವೆ. ಅಲ್ಲದೇ ಮಂಗಳೂರು ಕೃತ್ಯದ ಹೊಣೆಯನ್ನು ಹೊತ್ತುಕೊಂಡ ಹೊಸ ಉಗ್ರ ಸಂಘಟನೆಯೇ ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳ ಉನ್ನತ ಮೂಲಗಳು ಹೌದು ಎನ್ನುತ್ತಿವೆ. ಇದಕ್ಕಾಗಿ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಇದರ ಮೂಲ ಹುಡುಕಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಸ್ಫೋಟ ಪ್ರಕರಣ- ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ, ಪರಿಶೀಲನೆ

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮಿಕ್‌ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ ಅರೆಬಿಕ್‌ ಭಾಷೆಯಲ್ಲಿ ಫೋಸ್ಟ್ ವೊಂದ್ನ್ನು ಹಾಕಿದೆ. ಇದರಲ್ಲಿ ನಮ್ಮ ದಾಳಿ ಕದ್ರಿ ದೇವಸ್ಥಾನ ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್‌ ಸ್ಫೋಟಗೊಂಡಿದೆ. ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಬರೆಯಲಾಗಿದೆ.

ಈ ಸಂಘಟನೆ ತೀರ್ಥಹಳ್ಳಿ ಮೂಲದವರಿಂದ ಶುರುವಾಗಿದೆ ಎಂಬ ಅನುಮಾನವಿದೆ. ಅಲ್ಲದೇ ಅರಾಫತ್ ಅಲಿ, ಮತೀನ್ ಶಾರೀಕ್‌, ಎಲ್ಲರೂ ಇದರಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲದೇ ಈಗಾಗಲೇ ಇನ್ನು ಹಲವರನ್ನು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನೇಮಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಇದರ ಜಾಡು ಎನ್ಐಎ ತನಿಖೆ ಆರಂಭಿಸಿದೆ.

suddiyaana