ಮಂಗಳ ನೆನಪಿನಂಗಳಕ್ಕೆ! – ಕನ್ನಡ ಓದುಗರ ಮನೆ ಮಾತಾಗಿದ್ದ ಮಂಗಳ ವಾರ ಪತ್ರಿಕೆ ಪ್ರಕಟಣೆ ಸ್ಥಗಿತ
ಕನ್ನಡ ಓದುಗರ ಮನೆಮಾತಾಗಿದ್ದ ಮಂಗಳ ವಾರ ಪತ್ರಿಕೆ ತನ್ನ ಯಾನ ನಿಲ್ಲಿಸಿದೆ. ಸುಮಾರು 40 ವರ್ಷಗಳಿಂದ ಕನ್ನಡ ಪತ್ರಿಕಾರಂಗದಲ್ಲಿ ವರ್ಷಗಳಿಂದ ಗುರುತಿಸಿಕೊಂಡಿದ್ದ ಮಂಗಳ ವಾರಪತ್ರಿಕೆ ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ.
ಈ ಕುರಿತು ಮಂಗಳ ವಾರ ಪತ್ರಿಕೆ ಸಂಪಾದಕರು ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದು, ಈ ವಾರ ಕೊನೆಯ ಸಂಚಿಕೆ ಮುದ್ರಣಗೊಳ್ಳಲಿದೆ. ಈ ವಾರ ಕೊನೆಯ ಸಂಚಿಕೆ ಮುದ್ರಣಗೊಂಡಿದೆ ಎಂದು ತಿಳಿಸಿದ್ದಾರೆ. 40 ವರ್ಷಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪತ್ರಿಕೆ ತನ್ನ ಯಾನ ನಿಲ್ಲಿಸಿರುವುದರಿಂದಾಗಿ ಅನೇಕ ಓದುಗರ ನಿರಾಸೆಗೊಂಡಿದ್ದಾರೆ.
ಇದನ್ನೂ ಓದಿ: ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ಬಂಪರ್ – ಸರ್ಕಾರದಿಂದ ಸಿಗುತ್ತೆ ಲಕ್ಷಾಂತರ ರೂಪಾಯಿ ಪ್ರೋತ್ಸಾಹ ಧನ!
ಕೊರೋನಾ ನಂತರ ಪತ್ರಿಕೋದ್ಯಮಕ್ಕೆ ಸಾಕಷ್ಟು ಸಂಕಟವಾಗಿತ್ತು. ಡಿಜಿಟಲ್ ಮಾಧ್ಯಮಗಳು ವೇಗ ಪಡೆದುಕೊಂಡವು. ಹಾಗಿದ್ದೂ ಕಳೆದ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿದರು.ಇದೀಗ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಂಡಿದೆ.
ಮಂಗಳ ಪತ್ರಿಕೆ ಓದುಗ ವಲಯದಲ್ಲಿ ವಿಶೇಷ ಸ್ಥಾನಪಡೆದುಕೊಂಡಿತ್ತು. ಗ್ರಾಮೀಣ ಭಾಗದಲ್ಲಿ ಓದು ಆರಂಭವಾಗಿದ್ದೇ ಮಂಗಳ ವಾರಪತ್ರಿಕೆ ಮೂಲಕ. ಮಕ್ಕಳಿಗೆ ಬಾಲಮಂಗಳದ ಮೂಲಕ ಓದು ಆರಂಭಿಸಿ ಮಂಗಳ ಓದುವಂತೆ ಮಾಡಿ ಇತರ ಪತ್ರಿಕೆಗಳೂ ಓದುವ ಹಾಗೆ ಕಳೆದ 40 ವರ್ಷಗಳಲ್ಲಿ ಮಂಗಳ ಮಾಡಿತ್ತು. ಮಂಗಳ ವಾರಪತ್ರಿಕೆ ಈ ವಾರ ಕೊನೆಯ ಸಂಚಿಕೆ ಪ್ರಕಟಿಸಿದೆ.