ಸಿಗರೇಟ್ ವಿಚಾರಕ್ಕೆ ಕಿರಿಕ್ – ಸಕ್ಕರೆನಾಡು ಮಂಡ್ಯದಲ್ಲಿ ರೌಡಿಶೀಟರ್ ಹತ್ಯೆ

ರಾತ್ರೋ ರಾತ್ರಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಗ್ಯಾಂಗ್ ವಾರ್ ನಡೆದಿದೆ. ಹೊಳೆ ಆಂಜನೇಯ ಸ್ವಾಮಿ ದೇಗುಲದ ಬಳಿಯೇ ನೆತ್ತರು ಹರಿದಿದ್ದು, ಓರ್ವ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಲಕ್ನೋ ಗೆಲುವಿಗೆ ಸಂಜೀವ್ ಗೋಯೆಂಕಾ ಕಣ್ಣೀರು – ತಂಡದ ಗೆಲುವಿಗಾಗಿ ಜೊತೆಯಲ್ಲೇ ನಿಂತ ಮಾಲೀಕ
ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇಗುಲದ ಬಳಿಯ ಪಟೇಲ್ ಸಾಮಿಲ್ ಹತ್ತಿರ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಿಗರೇಟ್ ವಿಚಾರವಾಗಿ ಎದ್ದ ತಗಾದೆ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿದ್ದು, ಇದರಲ್ಲಿ ರೌಡಿ ಶೀಟರ್, ಮರಳಿಗ ಗ್ರಾಮದ ಯಶ್ವಂತ್ @ಕಜ್ಜಿ ಅಭಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಹೊಡೆದಾಟದಲ್ಲಿ ಮತ್ತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದ ಯಶ್ವಂತ್ ಮೂಲತಃ ಮದ್ದೂರಿನ ನಿವಾಸಿ.
ಯಶ್ವಂತ್ ಜೊತೆಗೆ ಸಚಿನ್, ದರ್ಶನ್ ಎಂಬುವವರ ಮೇಲೂ ಹಲ್ಲೆ ನಡೆದಿದೆ. ಗಾಯಗೊಂಡಿರುವ ಸಚಿನ್ ಮತ್ತು ದರ್ಶನ್ ಇಬ್ಬರಿಗೆ ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ, ಪರಿಶೀಲನೆ ನಡೆದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನೋಡಿರಿ

