ಮೆಡಿಕಲ್ ಶಾಪ್ ಇಡೋ ವಿಚಾರಕ್ಕೆ ಕಿರಿಕ್ – ಗಂಡ ಹೆಂಡತಿ ಸೂ*ಸೈಡ್

ಮೆಡಿಕಲ್ ಶಾಪ್ ಇಡೋ ವಿಚಾರಕ್ಕೆ ಕಿರಿಕ್ – ಗಂಡ ಹೆಂಡತಿ ಸೂ*ಸೈಡ್

ಕೌಟುಂಬಿಕ ಕಲಹ ಉಲ್ಬಣಿಸಿ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣಿಗೆ   ಶರಣಾಗಿದ್ದಾರೆ. ಕತ್ತು ಹಿಸುಕಿದ್ದರಿಂದ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪಾರಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದ  ಕೆ.ಆರ್.ಪೇಟೆ  ಪಟ್ಟಣದಲ್ಲಿ ನಡೆದಿದೆ.

ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ನೇಣಿಗೆ ಶರಣಾದ ದಂಪತಿ. ತಮ್ಮ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದಂಪತಿ ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ದಂಪತಿ ಬಾಡಿಗೆಗೆ ಇದ್ದರು. ಇಂದು (ಮಾ.9) ಬೆಳಿಗ್ಗೆ ಕೌಟುಂಬಿಕ ಕಲಹದಿಂದಾಗಿ ತಮ್ಮ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ.

ಇದನ್ನೂ ಓಧಿ: ಸ್ನೇಹಿತೆಯ ಬಾಯ್‌ಫ್ರೆಂಡ್‌ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ, ಹೆಂಡತಿ ಮಧ್ಯೆ ಜಗಳ! – ಆಮೇಲೆ ಆಗಿದ್ದು ಘೋರ ದುರಂತ!

ಈ ವೇಳೆ ಮಗು ಅಸ್ವಸ್ಥಗೊಂಡಿದೆ. ಬಳಿಕ ದಂಪತಿ ನೇಣಿಗೆ ಶರಣಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಬದುಕುಳಿದಿದೆ. ಮೆಡಿಕಲ್ ಶಾಪ್ ಇಡೋ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಆತ್ಮಹತ್ಯೆಯಲ್ಲಿ ಅಂತ್ಯಕಂಡಿದೆ.

Kishor KV

Leave a Reply

Your email address will not be published. Required fields are marked *