18 ಶತಕ.. 10,868* ರನ್ಸ್ – ಮಹಿಳಾ ಕ್ರಿಕೆಟ್ ಮಹಾರಾಣಿ ಸ್ಮೃತಿ
ಒಡೆದ ಹೃದಯ.. ಮೆರೆದ ಮಂದಾನ

18 ಶತಕ.. 10,868* ರನ್ಸ್ – ಮಹಿಳಾ ಕ್ರಿಕೆಟ್ ಮಹಾರಾಣಿ ಸ್ಮೃತಿಒಡೆದ ಹೃದಯ.. ಮೆರೆದ ಮಂದಾನ

ಸಾಧಿಸಲೇಬೇಕು ಅನ್ನೋ ಹಠ ಇದ್ದವ್ರಿಗೆ ಎದೆಯಲ್ಲಿ ಎಷ್ಟೇ ನೋವಿದ್ರೂ ನಾಟಲ್ಲ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಸ್ಮೃತಿ ಮಂದಾನ. ಛಿದ್ರವಾದ ಹೃದಯಕ್ಕೆ ಬ್ಯಾಟ್​ನಲ್ಲೇ ಟಾನಿಕ್ ನೀಡ್ತಾ ರನ್​ಗಳ ಮುಲಾಮು ಹಚ್ಚುತ್ತಾ ಇಂದು ಜಗತ್ತನ್ನೇ ಗೆದ್ದು ನಿಂತಿದ್ದಾರೆ. ವಿಶ್ವಮಹಿಳಾ ಕ್ರಿಕೆಟ್​ನಲ್ಲಿ ಸ್ಮೃತಿ ಈಗ ಮಹಾರಾಣಿ. ದುಬೈನಲ್ಲಿ ನಡೆಯುತ್ತಿರೋ T20 ಏಷ್ಯಾಕಪ್‌ನಲ್ಲಿ ಹಾಂಗ್ ಕಾಂಗ್ ಚೀನಾ ವಿರುದ್ಧ ಸ್ಮೃತಿ ಬ್ಯಾಟಿಂದ ಬಂದ ರನ್ಸ್ ಚರಿತ್ರೆಯನ್ನೇ ಸೃಷ್ಟಿಸಿದೆ.

ಇದನ್ನೂ ಓದಿ : ಪಂತ್, ಧೋನಿ ಭರ್ಜರಿ ಎಣ್ಣೆ ಪಾರ್ಟಿ- ಏರಿದ ಪಡಿಕ್ಕಲ್, ಜಾರಿದ ಗಿಲ್, ಬುಮ್ರಾ

ಥೈಲ್ಯಾಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಏಷ್ಯಾಕಪ್​ನಲ್ಲಿ ಶುಭಾರಂಭ ಮಾಡಿದ್ದ ಭಾರತ ಮಹಿಳಾ ಪಡೆ ಹಾಂಗ್ ಕಾಂಗ್ ವಿರುದ್ಧ ಧೂಳೆಬ್ಬಿಸಿದೆ. ಈ ಮ್ಯಾಚಲ್ಲಿ ಭಾರತದ ಸ್ಮೃತಿ ಮಂದಾನ ಅಕ್ಷರಶಃ ವಿರಾಟ ರೂಪ ತಾಳಿದ್ರು. 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಮಂದಾನ ನೆಕ್ಸ್​ಟ್ 17 ಬಾಲಲ್ಲೇ ತಮ್ಮ ಸೆಂಚುರಿ ಕಂಪ್ಲೀಟ್ ಮಾಡಿದ್ರು. ಒಟ್ಟಾರೆ 64 ಎಸೆತಗಳನ್ನ ಫೇಸ್ ಮಾಡಿ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 124 ರನ್ ಬಾರಿಸಿದ್ರು. ಈ ಇನ್ನಿಂಗ್ಸ್ ಮೂಲಕ ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಸ್ಮೃತಿ ನಂಬರ್ 1 ಪಟ್ಟಕ್ಕೇರಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರನ್ಸ್ & ಶತಕದಲ್ಲೂ ಸ್ಮೃತಿಯೇ ನಂಬರ್ 1

ಹಾಂಗ್ ಕಾಂಗ್ ವಿರುದ್ಧದ ಪ್ರದರ್ಶನದೊಂದಿಗೆ ಸ್ಮೃತಿ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನ್ನುವ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಇಲ್ಲೀವರೆಗೆ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ 333 ಪಂದ್ಯಗಳಲ್ಲಿ 10,868 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹೊಂದಿದ್ದರು. ಕೇವಲ 302 ಪಂದ್ಯಗಳಲ್ಲಿ 10,880 ರನ್ ಗಳಿಸುವ ಮೂಲಕ ಮಂಧಾನ, ಮಿಥಾಲಿಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್​ನಲ್ಲಿ ಸ್ಮೃತಿಯೇ ಅರಸಿಯಾಗಿದ್ದಾರೆ. ಕೇವಲ ರನ್ಸ್ ಅಷ್ಟೇ ಅಲ್ಲದೆ ಅತೀಹೆಚ್ಚು ಅಂತಾರಾಷ್ಟ್ರೀಯ ಶತಕಗಳ ಲಿಸ್ಟ್​ನಲ್ಲೂ ಸ್ಮೃತಿಯೇ ನಂಬರ್ 1. ಮಂಧಾನ ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 18 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 14 ಏಕದಿನ ಶತಕಗಳು ಇದ್ರೆ, ಟೆಸ್ಟ್ ಮತ್ತು ಟಿ20ಕ್ರಿಕೆಟ್​ನಲ್ಲಿ ತಲಾ ಎರಡು ಶತಕಗಳನ್ನು ಬಾರಿಸಿದ್ದಾರೆ. 17 ಶತಕಗಳನ್ನು ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ಪರ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಇದಿಷ್ಟೇ ಅಲ್ಲದೆ ಟಿ-20ಐನಲ್ಲಿ ಎರಡು ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಬ್ಯಾಟರ್, ಮಹಿಳಾ ಏಷ್ಯಾಕಪ್‌ ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (124) ದಾಖಲೆ, ಒಂದೇ ಇನಿಂಗ್ಸ್‌ ನಲ್ಲಿ 7 ಸಿಕ್ಸರ್‌ಗಳನ್ನು ಚಚ್ಚಿ ಟಿ-20ಐನಲ್ಲಿ ಮಹಿಳಾ ಕ್ರಿಕೆಟರ್ ಆಗಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆಯನ್ನೂ ಬರೆದಿದ್ದಾರೆ. ಹೀಗೆ ವಿಶ್ವಕ್ರಿಕೆಟ್​ಗೆ ಸ್ಮೃತಿ ಮಂದಾನ ಮುಟ್ಟಿದ್ದೆಲ್ಲವೂ ಚಿನ್ನವೇ. ಅದೆಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷ ಸ್ಮೃತಿ ಬದುಕಿನಲ್ಲಿ ನಡೆದ ಅದೊಂದು ಘಟನೆ ಆಕೆಯನ್ನ ಮತ್ತಷ್ಟು ಗಟ್ಟಿ ಮಾಡಿದೆ.

ಮುರಿದ ಮದುವೆ.. ಒಡೆದ ಹೃದಯ.. ಮೆರೆದ ಮಂದಾನ!

2025ರಲ್ಲಿ ನಡೆದ ಮಹಿಳಾ ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು. ಐತಿಹಾಸಿಕ ಟ್ರೋಫಿ ಗೆಲುವಿನಲ್ಲಿ ಸ್ಮೃತಿ ಪಾತ್ರವೂ ದೊಡ್ಡದಿತ್ತು. ಈ ಗೆಲುವಿನ ಅಲೆಯಲ್ಲೇ ದಾಂಪತ್ಯಜೀವನಕ್ಕೂ ಕಾಲಿಡೋಕೆ ರೆಡಿಯಾಗಿದ್ರು. ಆದ್ರೆ 2025ರ ನವೆಂಬರ್ 23 ಅಂದ್ರೆ ಮದುವೆಗೆ ಇನ್ನೊಂದೇ ದಿನ ಬಾಕಿ ಇದ್ದಾಗ ಮದುವೆ ಮುರಿದು ಬಿದ್ದಿತ್ತು. ವರ್ಷಗಳ ಕಾಲ ಪ್ರೀತಿಸಿದ್ದ ಗೆಳೆಯ ಮೋಸ ಮಾಡಿದ್ದು ಗೊತ್ತಾಗಿ ಸ್ಮೃತಿ ಹೃದಯವೇ ಒಡೆದು ಚೂರಾಗಿತ್ತು. ಒಂದಿಡೀ ತಿಂಗಳು ಅದೇ ನೆನಪುಗಳ ನೋವಲ್ಲಿದ್ರು. ಆದ್ರೆ ಸ್ಮೃತಿ ಕುಗ್ಗಲಿಲ್ಲ. ನನ್ನ ಪ್ರೀತಿಗೆ ಆತ ಅರ್ಹನಲ್ಲ ಅನ್ನೋದು ಗೊತ್ತಾಗಿ ಮತ್ತೆ ಬ್ಯಾಟ್ ಹಿಡಿದ್ರು. ಯಾವತ್ತಿದ್ರೂ ಕ್ರಿಕೆಟೇ ನನ್ನ ಮೊದಲ ಪ್ರೀತಿ ಅಂತಾ ಮತ್ತಷ್ಟು ಗಟ್ಟಿಯಾಗಿ ನಿಂತ್ರು. ದೇಶಕ್ಕಾಗಿ ಆಡ್ತೀನಿ ಕಪ್ ಗೆಲ್ಲಿಸೋದಷ್ಟೇ ಗುರಿ ಅಂತಾ ಪಣ ತೊಟ್ಟು ಈಗ ಇಡೀ ಜಗತ್ತಿನಲ್ಲೇ ನಂಬರ್ 1 ಪಟ್ಟಕ್ಕೇರಿದ್ದಾರೆ. ಆರ್​ಸಿಬಿ ತಂಡದ ನಾಯಕಿಯಾಗಿಯೂ ಎರಡೆರಡು ಟ್ರೋಫಿ ಗೆಲ್ಲಿಸಿಕೊಟ್ಟ ಸ್ಮೃತಿ ಭಾರತದ ಪಾಲಿಗೆ ಬೆನ್ನೆಲುಬಾಗಿದ್ದಾರೆ. ಸ್ಮೃತಿ ಅವ್ರ ಸಾಧನೆಗೆ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸೇರಿದಂತೆ ಇಡೀ ಕ್ರೀಡಾಲೋಕ ಅಭಿನಂದನೆ ಸಲ್ಲಿಸಿದೆ. ಸದ್ಯ ಸ್ಮೃತಿ ಮಂದಾನಗೆ 30 ವರ್ಷ. ಏನಿಲ್ಲ ಅಂದ್ರೆ ನೆಕ್ಸ್​ಟ್ ಮಿನಿಮಮ್ ಅಂದ್ರೂ 5 ವರ್ಷ ಕ್ರಿಕೆಟ್ ಆಡ್ತಾರೆ. ಆಲ್ರೆಡಿ ಮಿಥಾಲಿ ರಾಜ್ ದಾಖಲೆ ಬ್ರೇಕ್ ಮಾಡಿ ನುಗ್ಗಿರೋ ಮಂದಾನ ಕೆರಿಯರ್ ಮುಗಿಯೋ ಹೊತ್ತಿಗೆ 15 ಸಾವಿರ ರನ್​ಗಳ ಗಡಿ ದಾಟಿ ದಾಖಲೆಯ ಮಹಾಗೋಡೆಯನ್ನೇ ಕಟ್ಟಬಹುದು. ಒಟ್ನಲ್ಲಿ ಸ್ಮೃತಿ ಮಂದಾನ ಈಗ ಹೆಮ್ಮರವಾಗಿ ಬೆಳೆದಿದ್ದಾರೆ. ಸಾವಿರಾರು ಕ್ರೀಡಾಪಟುಗಳಿಗೂ ಸ್ಪೂರ್ತಿಯಾಗಿದ್ದಾರೆ.

Shantha Kumari

Leave a Reply

Your email address will not be published. Required fields are marked *