ಲಾಜಿಕ್ ಇಲ್ಲದ ರಿಷಭ್ ಆಟ!- ಅಗರ್ಕರ್ ಸ್ಥಾನಕ್ಕೆ ಜಹೀರ್ ಖಾನ್?
ದಿಗ್ವೇಶ್ ರಾಠಿ ಹಳೇ ಚಾಳಿ ಕಂಟಿನ್ಯೂ

ಲಾಜಿಕ್ ಇಲ್ಲದ ರಿಷಭ್ ಆಟ!- ಅಗರ್ಕರ್ ಸ್ಥಾನಕ್ಕೆ ಜಹೀರ್ ಖಾನ್?ದಿಗ್ವೇಶ್ ರಾಠಿ ಹಳೇ ಚಾಳಿ ಕಂಟಿನ್ಯೂ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಲಂಕಾ ವಿರುದ್ಧದ ಪಂದ್ಯದಲ್ಲಿ ಬೇಕಾಬಿಟ್ಟಿ ಹೊಡೆತಕ್ಕೆ ಮುಂದಾಗಿ ಔಟ್ ಆದ ಪಂತ್ ಬಗ್ಗೆ ಮೊಹಮ್ಮದ್ ಕೈಫ್ ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬ್ಯಾಟರ್ ಶತಕ ಅಥವಾ 150 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೂ ಸಹ, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಚೆಂಡು ಬಂದಾಗ ಕನಿಷ್ಠ 5 ರಿಂದ 6 ಓವರ್‌ಗಳ ಕಾಲ ಜಾಗರೂಕರಾಗಿ ಆಡುವುದು ಸಾಮಾನ್ಯ ನಿಯಮ. ಆದರೆ ಪಂತ್ ಹೊಸ ಚೆಂಡು ಬಂದ ಮೊದಲ ಓವರ್‌ನಲ್ಲೇ ಕ್ರೀಸ್ ಬಿಟ್ಟು ಮುನ್ನುಗ್ಗಿದರು. ಇದು ಯಾವುದೇ ಕ್ರಿಕೆಟಿಂಗ್ ಲಾಜಿಕ್ ಇಲ್ಲದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಹಿಡಿದ ಅದ್ಭುತ ಕ್ಯಾಚ್ ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಪ್ರಭಾತ್ ಜಯಸೂರ್ಯ ಎಸೆದ ಚೆಂಡನ್ನು ಧ್ರುವ್ ಜುರೆಲ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು. ಆದ್ರೆ ಚೆಂಡು  ಚೆಂಡು ಬ್ಯಾಟ್‌ನ ಮುಂಭಾಗಕ್ಕೆ ತಾಗಿ ಎಡ್ಜ್ ಆಗಿ ಮೊದಲ ಸ್ಲಿಪ್‌ನತ್ತ ಸಾಗಿತು. ಅಲ್ಲಿ ಸಜ್ಜಾಗಿ ನಿಂತಿದ್ದ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಕ್ಷಣಾರ್ಧದಲ್ಲಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಅವರ ಹಿಡಿದ ಸ್ಪೀಡ್ ಕ್ಯಾಡ್ ವಿಡಿಯೋ ಸಖತ್ ವೈರಲ್ ಆಗ್ತಿದೆ.

ನಿರ್ಣಾಯಕ ಬ್ಯಾಟಿಂಗ್ ಸ್ಥಾನಗಳಿಗೆ ಕಳುಹಿಸುವ ಬದಲು ಕೆಳ ಕ್ರಮಾಂಕದಲ್ಲಿ ಕೆಲವೊಮ್ಮೆ ಬೌಲರ್‌ಗಳಿಗಿಂತ ಕೆಳ ಕ್ರಮಾಂಕದಲ್ಲಿ ಕಳುಹಿಸಿರುವುದು ತಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿದೆ ಎಂದು ಜಡೇಜಾ ಬೇಸರ ಹೊರಹಾಕಿದ್ದಾರೆ. ನಾನು ಡ್ರೆಸ್ಸಿಂಗ್ ರೂಮ್​​ನಲ್ಲಿ ಕುಳಿತಾಗ,  ವೇಗದ ಬೌಲರ್ ನನ್ನ ಮುಂದೆ ಹೋಗಿ ಬ್ಯಾಟಿಂಗ್ ಮಾಡಲು ಸಿದ್ಧರಾಗುತ್ತಿರುವುದನ್ನು ನೋಡಿದಾಗ ನನ್ನ ನೈತಿಕತೆಗೆ ಹೊಡೆತ ಬೀಳುತ್ತಿತ್ತು. ತಂಡದ ಆಡಳಿತ ಮಂಡಳಿಗೆ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ನಂಬಿಕೆ ಇಷ್ಟೆನಾ ಎಂದು ನನಗೆ ಆಶ್ಚರ್ಯವಾಗಿತ್ತು  ಎಂದು ಜಡೇಜಾ ಬೇಸರ ಹೊರ ಹಾಕಿದ್ದಾರೆ.

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಾಂಕ ಬಹುತೇಕ ಅಂತಿಮಗೊಂಡಿದೆ. ವಿಶೇಷವೆಂದರೆ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿರುವ ಈ ಮೆಗಾ ಟೂರ್ನಿಯು 2027ರ ಅಕ್ಟೋಬರ್ 2 ರಂದು, ಅಂದರೆ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೇ   ಆರಂಭವಾಗಲಿದೆ ಎಂದು ವರದಿಯಾಗಿದೆ.  ಗಾಂಧೀಜಿಯವರ ಸ್ಮರಣಾರ್ಥವಾಗಿ ಮತ್ತು ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಐಸಿಸಿ ಅಕ್ಟೋಬರ್ 2 ರಂದೇ ಟೂರ್ನಿ ಆರಂಭಿಸಲು ನಿರ್ಧರಿಸಿದೆ  ಎನ್ನಲಾಗಿದೆ.

ಐಪಿಎಲ್‌ಗೆ ಸಂಬಂಧಪಟ್ಟಂತೆ ಸುನಿಲ್ ಗಾವಸ್ಕರ್ BCCI ಮುಂದೆ ಪ್ರಮುಖ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಪ್ರಸ್ತುತ  ನಿಯಮಗಳ ಪ್ರಕಾರ, ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರ ವರ್ಗಾವಣೆಯಾದಾಗ   ಅದರ ಆರ್ಥಿಕ ವಿವರಗಳು ಕೇವಲ ಬಿಸಿಸಿಐ, ಸಂಬಂಧಪಟ್ಟ ಆಟಗಾರ ಮತ್ತು ಆ ಎರಡು ಫ್ರಾಂಚೈಸಿಗಳಿಗೆ ಮಾತ್ರ ತಿಳಿದಿರುತ್ತವೆ. ಉಳಿದ ತಂಡಗಳಿಗೆ ಮತ್ತು ಸಾರ್ವಜನಿಕರಿಗೆ ಈ ಮೊತ್ತ ತಿಳಿಯುವುದಿಲ್ಲ. ಹೀಗಾಗಿ ವರ್ಗಾವಣೆಯ ನಿಖರ ಮೊತ್ತವನ್ನು ಬಹಿರಂಗಪಡಿಸಬೇಕೆಂದು ಗಾವಸ್ಕರ್ ಆಗ್ರಹಿಸಿದ್ದಾರೆ.

ಇಂಗ್ಲೆಂಡ್‌ಗೆ 2019ರ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಅವರ ಹೆಸರು ಸಿಎಸ್‌ಕೆ ಕೋಚ್ ಹುದ್ದೆಗೆ ಕೇಳಿಬರುತ್ತಿದೆ. ಆದ್ರೆ ಇದ್ದಕ್ಕೆ ಕೃಷ್ಣಮಾಚಾರಿ ಶ್ರೀಕಾಂತ್   ತೀವ್ರವಾಗಿ ವಿರೋಧಿಸಿದ್ದಾರೆ. ನಾನು ಖಂಡಿತವಾಗಿಯೂ ಇಯಾನ್ ಮಾರ್ಗನ್ ಅವರನ್ನು ಆಯ್ಕೆ ಮಾಡುವುದಿಲ್ಲ. ಅವರು ಇಂಗ್ಲೆಂಡ್‌ನ ಉತ್ತಮ ಆಟಗಾರ ಹಾಗೂ ಉತ್ತಮ ನಾಯಕ. ಆದರೆ ಕೋಚ್ ಆಗಿ ಅವರನ್ನು ನಾನು ಒಪ್ಪುವುದಿಲ್ಲ. ಕೆಕೆಆರ್ ನಾಯಕನಾಗಿದ್ದಾಗಲೂ ಅವರು ಏನೂ ದೊಡ್ಡ ಸಾಧನೆ ಮಾಡಲಿಲ್ಲ. ಅವರು ಕಾಮೆಂಟರಿಗೇ ಸೀಮಿತವಾಗಿರುವುದು ಉತ್ತಮ  ಎಂದು ಹೇಳಿದ್ದಾರೆ.

ನೋಟ್‌ಬುಕ್ ಸೆಲೆಬ್ರೇಷನ್ ಮಾಡಿ ಲಖನೌ ಸೂಪರ್ ಜೈಂಟ್ಸ್ ಪರ ಹಿಂದೊಮ್ಮೆ ದಂಡನೆಗೆ ಗುರಿಯಾಗಿದ್ದ ದಿಗ್ವೇಶ್ ರಾಠಿ ಬುದ್ಧಿ ಕಲಿಯದೆ ಮತ್ತೇ ಅದೇ ವರ್ತನೆ ತೋರಿದ್ದಾರೆ.  ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪುರಾಣಿ ದೆಹಲಿ ಪರ ಆಡುವಾಗ ಔಟರ್ ದೆಹಲಿ ತಂಡದ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದು ಆಚರಿಸಿದ್ದಾರೆ. ಈ ವೇಳೆ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದು, ಪ್ರಿಯಾಂಶ್ ಆರ್ಯ ಕ್ಯಾರೆ ಎನ್ನದೆ ಮೈದಾನದಿಂದ ಹೊರನಡೆದಿರೋ ವಿಡಿಯೋ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಕಪ್ ಮೇಲೆ ಕಾಲಿಟ್ಟು ಕೆಟ್ಟ ಕಾಂಗರೂ – ಬಾಂಗ್ಲಾ ಎದುರೇ AUS ಧೂಳೀಪಟ

ಅಗರ್ಕರ್​ ಬದಲಿಗೆ ಮತ್ತೋರ್ವ ಮಾಜಿ ವೇಗಿ ಜಹೀರ್​ ಖಾನ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. 47 ವರ್ಷದ ಜಹೀರ್​ ಖಾನ್​ ಭಾರತ ಪರ 92 ಟೆಸ್ಟ್​, 200 ಏಕದಿನ ಮತ್ತು 17 ಟಿ20 ಪಂದ್ಯ ಆಡಿರುವ ಅನುಭವಿಯಾಗಿದ್ದಾರೆ. ಅಲ್ಲದೆ 2011ರ ಏಕದಿನ ವಿಶ್ವಕಪ್​ ವಿಜೇತ ತಂಡದ ಸದಸ್ಯರಾಗಿದ್ದಾರೆ. ಹೀಗಾಗಿ ಅಗರ್ಕರ್‌ ಬದಲಿದೆ ಇವರೇ ಸೂಕ್ತ ಅನ್ನೋ ಮಾತು ಕೇಳಿ ಬರ್ತಿದೆ.

ದಿ ಹಂಡ್ರೆಡ್ ಲೀಗ್​ನಲ್ಲಿ  ಸಂಜಯ್ ಗೋಯೆಂಕಾ ಅವರ ಮ್ಯಾಚೆಂಸ್ಟರ್ ಸೂಪರ್ ಜೈಂಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದೆ.

ಬರೋಬ್ಬರಿ 23 ವರ್ಷಗಳ ಬಳಿಕ ಆಸ್ಟ್ರೆಲಿಯಾ ನೆಲದಲ್ಲಿ ಟೆಸ್ಟ್​ ಪಂದ್ಯ ಗೆಲ್ಲುವ ಮೂಲಕ ಬಾಂಗ್ಲಾದೇಶ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಭಾನುವಾರ ನಾಲ್ಕನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ 284ರನ್‌ಗೆ ಆಲೌಟ್‌ ಆಯಿತು. 56 ರನ್‌ ಗೆಲುವಿನ ಗುರಿ ಪಡೆದ ಬಾಂಗ್ಲಾದೇಶ ಕೇವಲ ಒಂದು ವಿಕೆಟ್‌ ನಷ್ಟಕ್ಕೆ 57 ರನ್‌ ಬಾರಿಸಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಆಸ್ಟ್ರೇಲಿಯಾ ನೆಲದಲ್ಲಿ ಅತಿ ಕಡಿಮೆ ಪಂದ್ಯಗಳನ್ನಾಡಿ ಗೆಲುವು ಸಾಧಿಸಿದ ಏಷ್ಯಾದ ಮೊದಲ ತಂಡ ಎನಿಸಿತು.

Kishor KV

Leave a Reply

Your email address will not be published. Required fields are marked *