ಲಂಕೆಗೆ ಸುತಾರ್ ಲಗಾಮು – ಸರ್ ಜಡೇಜಾ ಉತ್ತರಾಧಿಕಾರಿನಾ?
2 ಪಂದ್ಯಗಳಲ್ಲೇ ಫೈಯರ್ ಪ್ಲೇಯರ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಮ್ಯಾಚಲ್ಲಿ ಭಾರತದ ಬೌಲರ್ ಮಾನವ್ ಸುತಾರ್ ಹೆಸರು ಟ್ರೆಂಡಿಂಗ್ನಲ್ಲಿದೆ. ಭಾರತೀಯ ಟೆಸ್ಟ್ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ರಂತ ಅನುಭವಿ ಎಡಗೈ ಸ್ಪಿನ್ ಆಲ್-ರೌಂಡರ್‌ಗಳ ಸಾಲಿಗೆ ಸೇರಬಲ್ಲ ಅತ್ಯಂತ ಭರವಸೆಯ ಯುವ ಆಟಗಾರನಾಗಿ ನಿರೀಕ್ಷೆ ಮೂಡಿಸಿದ್ದಾರೆ. ಹಿರಿಯ ಆಟಗಾರ ರವೀಂದ್ರ ಜಡೇಜಾ ಅವರ ಉತ್ತರಾಧಿಕಾರಿ ಎನ್ನುವಂತೆಯೇ ಸೌಂಡ್ ಮಾಡ್ತಿದ್ದಾರೆ.
ಇದನ್ನೂ ಓದಿ : ಮೊದಲ ಟೆಸ್ಟ್‌ನಲ್ಲಿ ಲಂಕಾ ಬೇಟೆಯಾಡಿದ ಟೀಮ್ ಇಂಡಿಯಾ – 10 ವಿಕೆಟ್ ಕಬಳಿಸಿದ ಮಾನವ್ ಸುತಾರ್
ಭಾರತದ ಪರ ದೇವದತ್ ಪಡಿಕ್ಕಲ್ ಎರಡೂ ಇನ್ನಿಂಗ್ಸ್ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರೆ ಬೌಲಿಂಗ್ ನಲ್ಲಿ ಮಾನವ್ ಸುತಾರ್ ಕೂಡ ಬಿಗ್ ಇಂಪ್ಯಾಕ್ಟ್ ಮಾಡಿದ್ದಾರೆ. ಅವ್ರ ಇದೇ ಪ್ರದರ್ಶನ ಭಾರತಕ್ಕೆ ಮುಂದಿನ ದಿನಗಳಲ್ಲಿ ಸ್ಟಾರ್ ಆಲ್ರೌಂಡರ್ ಆಗುವ ಭರವಸೆ ಮೂಡಿಸಿದ್ದಾರೆ. ಬ್ಯಾಟಿಂಗ್ನಲ್ಲೂ ಮಿಂಚುತ್ತಿರೋ ಸುತಾರ್ ಭಾರತದ ಪರ ಎರಡೇ ಪಂದ್ಯಗಳಲ್ಲೇ ಹೆಜ್ಜೆಗುರುತು ಮೂಡಿಸಿದ್ದಾರೆ. ಲಂಕಾ ನೆಲದಲ್ಲೂ ಸದ್ದು ಮಾಡಿದ್ದಾರೆ.
ಸುತಾರ್ ಸುನಾಮಿ ಶುರು!
ಲಂಕಾ ತಂಡವನ್ನ ಮೊದಲ ಇನ್ನಿಂಗ್ಸ್ ನಲ್ಲಿ 284 ರನ್ ಗಳಿಗೆ ಆಲೌಟ್
21.4 ಓವರ್ ಬೌಲಿಂಗ್ ಮಾಡಿದ್ದ ಸುತಾರ್ 76 ರನ್ ನೀಡಿ 4 ವಿಕೆಟ್ಸ್ ಬೇಟೆ
ಅತಿ ಹೆಚ್ಚು ಬಿಗ್-ಟರ್ನ್ ಎಸೆತಗಳನ್ನು ದಾಖಲಿಸಿದ ಬೌಲರ್ ಎಂಬ ಹೆಗ್ಗಳಿಕೆ
74% ಎಸೆತಗಳು 4.5 ಡಿಗ್ರಿಗಿಂತ ಹೆಚ್ಚು ತಿರುವು, ಎಲ್ಲಾ ಸ್ಪಿನ್ನರ್ಸ್ ಗಿಂತ ಉತ್ತಮ
ಮೊದಲ ಎಸೆತದಲ್ಲೇ ಅನುಭವಿ ಬ್ಯಾಟರ್ ದಿನೇಶ್ ಚಾಂಡಿಮಾಲ್ ಅವರ ವಿಕೆಟ್
ಲಂಕಾ ಬ್ಯಾಟರ್ ಪಸಿಂದು ಸೂರಿಯಬಂಡಾರ ಅವ್ರನ್ನ ಫಸ್ಟ್ ಬಾಲ್ ನಲ್ಲೇ ಔಟ್
ಚೊಚ್ಚಲ ಪಂದ್ಯದಲ್ಲೂ ಮೊದಲ ಓವರ್ ನಲ್ಲೇ ವಿಕೆಟ್ ಕಬಳಿಸಿ ಮಿಂಚಿದ್ದರು
ಮೊದಲ ಇನ್ನಿಂಗ್ಸ್ ನಲ್ಲೇ 33 ರನ್‌ಗಳಿಗೆ 6 ವಿಕೆಟ್, 2ನೇ ಇನ್ನಿಂಗ್ಸ್ 1 ವಿಕೆಟ್
ಭಾರತದ ಪರ ಮೂರು ಇನ್ನಿಂಗ್ಸ್ಗ ಳಲ್ಲಿ ಬ್ಯಾಟಿಂಗ್ ಮಾಡಿ 73 ರನ್ ಕಲೆ
ರಾಜಸ್ಥಾನ ಪರ 30ಕ್ಕೂ ಹೆಚ್ಚು ಪಂದ್ಯಗಳನ್ನಾಡಿ 150ಕ್ಕೂ ಹೆಚ್ಚು ವಿಕೆಟ್
ಇಂಗ್ಲೆಂಡ್‌ನ ಪ್ರಸಿದ್ಧ ಕೌಂಟಿ ಕ್ಲಬ್ ವಾರ್ವಿಕ್ ಷೈರ್ ಜೊತೆಯೂ ಒಪ್ಪಂದ
ಹೀಗೆ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್ ಸ್ಟಾರ್ ಸ್ಪಿನ್ನರ್ ಆಗಿ ಹೊರಹೊಮ್ಮುತ್ತಿರುವ ಮಾನವ್ ಸುತಾರ್ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ರವೀಂದ್ರ ಜಡೇಜಾ ಅವ್ರ ಅಪ್ ಗ್ರೇಡೆಡ್ ವರ್ಷನ್ ಬೌಲರ್ ಮಾನವ್ ಸುತಾರ್ ಅಂತಾ ಅಪ್ರಿಶಿಯೇಟ್ ಮಾಡಿದ್ದಾರೆ. ಯಾಕಂದ್ರೆ ಭಾರತಕ್ಕೆ ಒಬ್ಬ ಕ್ವಾಲಿಟಿ ಬ್ಯಾಟರ್ ಸಿಗ್ತಾರೆ. ಅಥವಾ ಬೌಲರ್ ಕೂಡ ಸಿಕ್ತಾರೆ. ಆದ್ರೆ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡುವಂಥ ಆಲ್ರೌಂಡರ್ ಸಿಗೋದು ಕಷ್ಟ. ಜಡ್ಡು ವಿಶ್ವಕ್ರಿಕೆಟ್ನ ಸ್ಟಾರ್ ಆಲ್ರೌಂಡರ್ ಆಗಿ ಸದ್ದು ಮಾಡಿದ್ದಾರೆ. ಸೋ ಅವ್ರ ಪ್ಲೇಸ್ನ ತುಂಬೋದು ಸುಲಭದ ಮಾತಲ್ಲ. ಬಟ್ ಜಡ್ಡು ನಿವೃತ್ತಿ ಹೊಸ್ತಿಲಲ್ಲಿ ಇರೋದ್ರಿಂದ ಅವ್ರಿಗೆ ಪರ್ಯಾಯವಾಗಿ ಮತ್ತೊಬ್ಬ ಕ್ವಾಲಿಟಿ ಆಲೌಂಡರ್ನ ಅಗತ್ಯ ಅಂತೂ ಇದ್ದೇ ಇದೆ.

ನೋಡಿರಿ

