ಸರಳವಾಗಿ ವಿವಾಹ ಜೀವನಕ್ಕೆ ಕಾಲಿಟ್ಟ ಗುಪ್ತಗಾಮಿನಿ ಧಾರಾವಾಹಿ ನಟಿ – ಮಾನಸಿ ವಾಸುದೇವ್ ಗೆ ಕಲಾವಿದರ ಶುಭಾಶಯ
ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ಕಿರುತೆರೆ ನಟಿ ಮಾನಸಿ ವಾಸುದೇವ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಗುಪ್ತಗಾಮಿನಿ, ಭೃಂಗದ ಬೆನ್ನೇರಿ ಸೇರಿದಂತೆ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸರಳವಾಗಿ ವಿವಾಹ ಬಂಧಕ್ಕೆ ಕಾಲಿಟ್ಟಿರುವ ಮಾನಸಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶಾರುಖ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ – ಬಾಲಿವುಡ್ ಬೆಡಗಿ ಕಿಸ್ಸಿಂಗ್ ಫೋಟೋ ಫುಲ್ ವೈರಲ್
ನೇತ್ರಾವತಿ ಎನ್ನುವ ಧಾರಾವಾಹಿಯಲ್ಲಿ ಮಾನಸಿ ಅವರು ದೇವಿ ಪಾತ್ರ ಮಾಡಿದ್ದರು. ಈ ಮದುವೆಯಲ್ಲಿ ನಟಿ ದೀಪಿಕಾ ಶರಣ್, ನಂದಿನಿ ಗೌಡ ಭಾಗಿಯಾಗಿದ್ದರು. ಕಿರುತೆರೆ ಮಾತ್ರವಲ್ಲದೆ ಮಠ ಸಿನಿಮಾದಲ್ಲಿ ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದ ಮಾನಸಿ, ಡಾನ್ಸರ್ ಕೂಡ ಹೌದು. ಜೊತೆಗೆ ಗುಪ್ತಗಾಮಿನಿ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಮಾನಸಿ ತಮ್ಮ ಮದುವೆಯಾದ (Marriage) ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದು, ಆದಿತ್ಯ ದೊಡ್ಡನವರ್ (Aditya Dodnavar) ಜೊತೆ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಇವರು ನನ್ನ ಹಾರ್ಟ್ ಕದ್ದವರು. ಇವರ ಕೊನೆಯ ಹೆಸರನ್ನು ನಾನು ಪಡೆದುಕೊಳ್ಳುತ್ತಿದ್ದೇನೆ’ ಎಂದು ಮಾನಸಿ ಬರೆದುಕೊಂಡಿದ್ದಾರೆ.
ಪತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದ ಅವರು, ಮದುವೆಯಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬೃಂಗದ ಬೆನ್ನೇರಿ, ನೇತ್ರಾವತಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಮಾನಸಿ, ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.