ಪಕ್ಕದ ಮನೆ ಮುಂದೆ ಕೆಮ್ಮುವುದು ಡೇಂಜರ್! – ಜೋರಾಗಿ ಕೆಮ್ಮಿದ್ದಕ್ಕೆ ಯುವಕನ ಕೊಂದೇ ಬಿಟ್ರು ಪಾಪಿಗಳು!

ಈಗಿನ ಕಾಲದಲ್ಲಿ ಯಾವ ವಿಚಾರಕ್ಕೆ ಜಗಳ ನಡೆಯುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಸಣ್ಣ ಪುಟ್ಟ ವಿಚಾರಕ್ಕೆ ಶರುವಾದ ಜಗಳ ವಿಕೋಪಕ್ಕೆ ತಿರುಗುತ್ತವೆ. ಇದೀಗ ಇಲ್ಲೊಂದು ಕಡೆ ಕೆಮ್ಮಿನ ವಿಚಾರಕ್ಕೆ ಜಗಳ ಶುರುವಾಗಿದ್ದು, ವ್ಯಕ್ತಿಯೊಬ್ಬನ ಜೀವವೇ ಹೋಗಿದೆ.
ಇದನ್ನೂ ಓದಿ: ಇಬ್ಬರು ಮಕ್ಕಳಿದ್ರೂ ಅನಾಥೆ ಎಂದು ಯುವಕನ ಮದುವೆಯಾದ್ಲು! – ಒಂದೇ ವಾರದಲ್ಲಿ ಕಳಚಿತು ಆಂಟಿ ರಹಸ್ಯ!
ಏನಿದು ಘಟನೆ?
ರಾಮನಗರ ತಾಲೂಕಿನ ಬಿಡದಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮನೆ ಮುಂದೆ ಕೆಮ್ಮಿದ ಎನ್ನುವ ಕಾರಣಕ್ಕೆ ಜಗಳ ಶುರುಮಾಗಿದೆ. ಬಳಿಕ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿ ಮೃತಪಟ್ಟಿದ್ದಾನೆ. ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ ಮೃತಪಟ್ಟ ಯುವಕ.
ಘಟನೆಯ ವಿವರ
ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಕಳೆದ 11 ವರ್ಷಗಳಿಂದ ಬಿಡದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸವಾಗಿದ್ದರು. ಮೂರು ದಿನಗಳ ಹಿಂದೆ ಪಕ್ಕದ ಮನೆ ಮುಂದೆ ವಿನೋದ್ ಕೆಮ್ಮಿದ್ದಾನೆ. ಈ ವಿಚಾರಕ್ಕೆ ವಿನೋದ್ ಹಾಗೂ ಸಂಜಯ್ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಂಜಯ್, ಹೊಂಬಯ್ಯ (ಹೊಂಬೆಗೌಡ), ವಿಜಯ್ ಸೇರಿದಂತೆ ಇತರರು ಸೇರಿ ವಿನೋದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ವಿನೋದ್ ಅವರನ್ನು ತಕ್ಷಣ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನೋಡಿರಿ

