ಸೀನು ಬಂತೆಂದು ಬಾಯಿ, ಮೂಗು ಮುಚ್ಚಿದ.. ಅಯ್ಯಯ್ಯೋ ಶ್ವಾಸನಾಳವೇ ಹರಿದು ಹೊಯ್ತು!
ಮನುಷ್ಯನಿಗೆ ಸೀನು ಬರುವುದು ಸಾಮಾನ್ಯ. ಮೂಗಿಗೆ ಸ್ವಲ್ಪ ಧೂಳು ಹೋದ್ರೂ ಸಾಕು, ಸೀನು ಜೋರಾಗಿ ಬರುತ್ತದೆ. ಆದ್ರೆ ಕೊರೊನಾ ಬಂದ ಮೇಲೆ ಬಹುತೇಕರು ಸಾರ್ವಜನಿಕವಾಗಿ ಸೀನುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿದ್ದರೆ ತಮ್ಮ ಸೀನು ಹಿಡಿದಿಡಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ? ಇಲ್ಲೊಬ್ಬ ವ್ಯಕ್ತಿ ಸೀನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದು, ಇದ್ರಿಂದಾಗಿ ಆ ವ್ಯಕ್ತಿಯ ಶ್ವಾಸನಾಳವೇ ಹರಿದುಹೋಗಿದೆ.
ಇದನ್ನೂ ಓದಿ: ದತ್ತು ಮಗಳು ನಾಪತ್ತೆಯಾಗಿದ್ದ ನೋವು ಸಾವಿಗೆ ಕಾರಣವಾಯ್ತಾ?- ಕಾಪು ಲೀಲಾಧರ ಶೆಟ್ಟಿ ದಂಪತಿ ದುರಂತ ಅಂತ್ಯ ಕಂಡು ಕಣ್ಣೀರಿಟ್ಟ ಜನ
ಹೌದು, ಅಚ್ಚರಿಯಾದ್ರೂ ಸತ್ಯ. ಸೀನು ಯಾವಾಗ ಬೇಕಾದ್ರೂ ಬರಬಹುದು. ಸೀನು ಬಂದಾಗ ಕೆಲವರು ಇದನ್ನು ತಡೆಯುತ್ತಾರೆ. ಇದೇ ರೀತಿ ಸೀನನ್ನು ವ್ಯಕ್ತಿಯೊಬ್ಬರು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಅವರ ಶ್ವಾಸನಾಳವೇ ಹರಿದು ಹೋಗಿದೆ. ಬಳಿಕ ಆಸ್ಪತೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯಕೀಯ ಲೋಕದಲ್ಲಿ ಇದು ಮೊದಲ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ Hay Fever ಕಾಣಿಸಿಕೊಂಡಿದೆ. ಆದರೆ, ಮೂಗಿನ ಕೆಳಗೆ ಬೆರಳನ್ನು ಇಡುವ ಬದಲು ಅಥವಾ ಸೀನು ಅನಿಯಂತ್ರಿತವಾಗಿ ಹೋಗಲು ಬಿಡುವ ಬದಲು, ಅವರು ಮೂಗು ಹಿಸುಕಿ ಬಾಯಿ ಮುಚ್ಚಿದ್ದಾರೆ. ಬಾಯಿ ಮುಚ್ಚಿರುವುದೇ ಆತನಿಗೆ ಕಂಟಕವಾಗಿ ಪರಿಣಮಿಸಿದೆ. ಆತ ಸೀನು ನಿಯಂತ್ರಿಸಲು ಮಾಡಿದ ತಂತ್ರ ಉಲ್ಟಾ ಹೊಡೆದಿದೆ. ಅಂದರೆ ಸೀನು ತಡೆಯುವಾಗ ಅದರ ಬಲವು ವ್ಯಕ್ತಿಯ ಶ್ವಾಸನಾಳದಲ್ಲಿ ಒಂದು ಸಣ್ಣ ರಂಧ್ರವನ್ನೇ ಸೃಷ್ಟಿಸಿದೆ. ಇದು ಶ್ವಾಸನಾಳದಲ್ಲಿ 2* 2 ಮಿಲಿಮೀಟರ್ ರಂಧ್ರವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.
ಈತ ಸೀನು ಬಂದಾಗ ಬಾಯಿ ಮುಚ್ಚಿದ್ದರಿಂದ ಇದು ಸಾಮಾನ್ಯಕ್ಕಿಂತ 20 ಪಟ್ಟು ಪ್ರಬಲವಾದ ಸೀನುವಿಕೆಯನ್ನು ಪ್ರೇರೇಪಿಸಿತು. ಇದರಿಂದಾಗಿ ಭಯಾನಕ ಹಾನಿಯನ್ನುಂಟುಮಾಡಿದೆ. ಆತ ಸೀನು ತಡೆಹಿಡಿದಾಗ ಒತ್ತಡವು ಎಷ್ಟು ಎಷ್ಟಿತ್ತೆಂದರೆ ಶ್ವಾಸನಾಳವು 0.08 ಇಂಚುಗಳಷ್ಟು ಹರಿದಿದೆ. ಇದರಿಂದಾಗಿ ಆತ ತೀವ್ರವಾದ ನೋವಿನಿಂದ ಬಳಲಿದ್ದಾನೆ. ಕೆಲವೇ ಹೊತ್ತಲ್ಲಿ ಅವನ ಕುತ್ತಿಗೆ ಎರಡೂ ಬದಿಗಳಲ್ಲಿ ಊದಿಕೊಂಡಿದೆ. ಬಳಿಕ ಆತ ಚಿಕಿತ್ಸೆ ಪಡೆಯಲು ಹೋಗಿದ್ದಾರೆ. ವೈದ್ಯರು ಆತನನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ.
ಮನುಷ್ಯನಿಗೆ ಸರ್ಜಿಕಲ್ ಎಂಫಿಸೆಮಾ ಇದೆ ಎಂದು ಎಕ್ಸ್-ರೇ ಮೂಲಕ ತಿಳಿದುಬಂದಿದೆ. ಈ ಕಾಯಿಲೆಯು ಚರ್ಮದ ಆಳವಾದ ಅಂಗಾಂಶ ಪದರಗಳ ಹಿಂದೆ ಗಾಳಿಯು ಸಿಕ್ಕಿಹಾಕಿಕೊಳ್ಳುತ್ತದೆ. ಬಳಿಕ, CT ಸ್ಕ್ಯಾನ್ ಮಾಡಿದ ನಂತರ ಕುತ್ತಿಗೆಯ ಮೂರನೇ ಮತ್ತು ನಾಲ್ಕನೇ ಕಶೇರುಖಂಡಗಳ ನಡುವೆ ಹರಿದಿದೆ ಎಂದು ತೋರಿಸಿದೆ. ಹೆಚ್ಚುವರಿಯಾಗಿ, ಅವರ ಶ್ವಾಸಕೋಶ ಮತ್ತು ಎದೆಯ ನಡುವಿನ ಪ್ರದೇಶದಲ್ಲಿ ಗಾಳಿಯು ಸಂಗ್ರಹವಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಉಸಿರಾಡಲು, ಮಾತನಾಡಲು ಅಥವಾ ನುಂಗಲು ಯಾವುದೇ ತೊಂದರೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.