ಆಕಸ್ಮಿಕವಾಗಿ ಚರಂಡಿಗೆ ಬಿತ್ತು ಫೋನ್! – ಮೊಬೈಲ್​​ ತೆಗೆಯಲು ಹೋಗಿ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಲುಕಿಕೊಂಡ ವ್ಯಕ್ತಿ!

ಆಕಸ್ಮಿಕವಾಗಿ ಚರಂಡಿಗೆ ಬಿತ್ತು ಫೋನ್! – ಮೊಬೈಲ್​​ ತೆಗೆಯಲು ಹೋಗಿ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಲುಕಿಕೊಂಡ ವ್ಯಕ್ತಿ!

ಈಗಿನ ಕಾಲದಲ್ಲಿ ಕೈಯಲ್ಲೊಂದು ಫೋನ್‌ ಇರ್ಲೇಬೇಕು. ಫೋನ್‌ ಇಲ್ಲ ಅಂದ್ರೆ ಜೀವವೇ ಹೋದಂತೆ ಆಡುತ್ತಾರೆ. ಇದೀಗ ಇಲ್ಲೊಬ್ಬನ ಮೊಬೈಲ್‌ ಆಕಸ್ಮಿಕವಾಗಿ  ಚರಂಡಿಯೊಳಗೆ ಬಿದ್ದಿದೆ. ಮೊಬೈಲ್‌ ಅನ್ನು ಎತ್ತಿಕೊಳ್ಳಲು ಹೋದಾತ ಸುಮಾರು  36 ಗಂಟೆಗಳ ಕಾಲ ಚರಂಡಿಯಲ್ಲೇ ಕಾಲ ಕಳೆಯುವಂತಾಗಿದೆ.

ಇದನ್ನೂ ಓದಿ: ಪಕ್ಷೇತರರಾಗಿ ಕೆಎಸ್ ಈಶ್ವರಪ್ಪ ಕಣಕ್ಕೆ! – ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!

ಅಷ್ಟಕ್ಕೂ ಆಗಿದ್ದೇನು?

ಈ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್​​​ನ ಬ್ರಿಸ್ಬೇನ್​​​​ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬನ ಕೈಯಿಂದ ಆಕಸ್ಮಿಕವಾಗಿ ಫೋನ್‌ ಚರಂಡಿಯೊಳಗೆ ಬಿದ್ದಿದೆ.  ಚರಂಡಿಯೊಳಗೆ ಬಿದ್ದ ಫೋನ್​​​ ತೆಗೆಯಲು ಹೋಗಿದ್ದ ಆತ ಅಲ್ಲೇ ಸಿಲುಕಿಕೊಂಡಿದ್ದಾನೆ. ಬ್ರಿಸ್ಬೇನ್ ನದಿಯ ಕಾಂಗರೂ ಪಾಯಿಂಟ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕಿರುಚುತ್ತಿರುವುದು ಕೇಳಿ ಸ್ಥಳೀಯ ನಿವಾಸಿಗಳು ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೋಲ್ಟೆಡ್ ಡ್ರೈನ್ ಮುಚ್ಚಳವನ್ನು ತೆಗೆದು ಸಿಕ್ಕಿಬಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಈವೇಳೆ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಕ್ಕಿಬಿದ್ದಿರುವುದು ತಿಳಿದುಬಂದಿದೆ. ಕೂಡಲೇ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯವಿಲ್ಲ, ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಹೇಳಿರುವುದು ವರದಿಯಾಗಿದೆ.

ನಿವಾಸಿಗಳಿಗೆ ಡ್ರೈನ್‌ಗಳು, ಪೈಪ್‌ಗಳು ಮತ್ತು ಮ್ಯಾನ್‌ಹೋಲ್‌ಗಳಿಂದ ಉಂಟಾಗುವ ಅಪಾಯಗಳ ಕಾರಣದಿಂದ ”ಯಾವಾಗಲೂ ದೂರವಿರಿ” ಎಂದು ಎಚ್ಚರಿಸಲಾಗಿದ್ದು, ಇದಲ್ಲದೇ ಮಳೆಗಾಲದ ಸಮೀಪಿಸುತ್ತಿದ್ದಂತೆ ವಿವಿಧ ಗಾತ್ರದ ಪೈಪ್‌ಗಳು, ಮ್ಯಾನ್‌ಹೋಲ್‌ಗಳಲ್ಲಿ ಯಾವುದೇ ಒಂದು ಪ್ರಾಣಿ ಅಥವಾ ವ್ಯಕ್ತಿ ಸಿಕ್ಕಿಹಾಕಿಕೊಂಡರೆ, ದಯವಿಟ್ಟು ತಕ್ಷಣವೇ ಟ್ರಿಪಲ್ ಝೀರೋ (000) ಫೋನ್ ಮಾಡಿ,” ಕೊರಿಯರ್ ಮೇಲ್ ವರದಿ ಮಾಡಿದೆ.

Shwetha M